ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 2
ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನೀತಿ ಖಂಡಿಸಿ ಭಾರತೀಯ ಜನತಾ ಪಕ್ಷದ ಪಶ್ಚಿಮ ಕ್ಷೇತ್ರ ಪದಾಧಿಕಾರಿಗಳು ಸೋಮವಾರ ಇಲ್ಲಿನ ವಿವೇಕಾನಂದ ವೃತ್ತದ ಬಳಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಯುಪಿಎ ನೇತೃತ್ವದ ಕೇಂದ್ರದ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯಿಂದ ಜನ ಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಸದ್ಯ ಮಾರುಕಟ್ಟೆಯಲ್ಲಿಯ ಆರ್ಥಿಕ ವ್ಯವಸ್ಥೆಯೇ ಬೆಲೆ ಏರಿಕೆಗೆ ಕಾರಣವಾಗಿದೆ. ಡಾಲರ್ ಎದುರು ನಿತ್ಯ ಭಾರತೀಯ ರುಪಾಯಿ ಮೌಲ್ಯ ಕುಸಿಯುತ್ತಿದೆ. ಕೇಂದ್ರ ಸರ್ಕಾರ ವಿದೇಶಿ ಎಫ್ಡಿಎ ಎಂಬ ಸಂಸ್ಥೆಯೊಂದಿಗೆ ಕೈಜೋಡಿಸುವ ಮೂಲಕ ಜನರಿಗೆ ಮೋಸ ಮಾಡುತ್ತಿದೆ. ಹೊಟ್ಟೆ ತುಂಬಾ ಅನ್ನ ಕೊಡುವ ನೆಪದಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಲುಪಿಸಿದೆ. ಪೆಟ್ರೋಲ್, ಡೀಸೆಲ್ ಹಾಗೂ ಗೃಹ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ನೇರ ಹೊಣೆಯಾಗಿದ್ದು, ಪ್ರಧಾನಿ ಮನಮೋಹನ ಸಿಂಗ್ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ಶಿವಣ್ಣ ಬಡವಣ್ಣವರ, ಬಸುರಾಜ ಮುತ್ತಳ್ಳಿ, ಬಲರಾಮ ಕುಸುಗಲ್ ಹಾಗೂ ಪ್ರಕಾಶ ಗೊಡಗೋಲೆ, ಮೋಹನ ರಾಮದುರ್ಗ, ಚಂದ್ರು ನೀಲಗಾರ, ನಾಗರಾಜ ನಾಯಕ, ಸಂತೋಷ ನಾಗಮಣ್ಣವರ, ಸುನೀಲ ಸೊಂಡೂರ, ಪ್ರಮೋದ ಕಾರಕುನ್, ಎಂ. ಬಸಣ್ಣ, ಭೀಮಸೇನ ನೇಮಿಕಲ್, ಸಿದ್ದು ಕಲ್ಯಾಣಶೆಟ್ಟಿ, ಕೇದಾರ ಶೆಟ್ಟಿ, ಶಿವಾಜಿ ಶಿಂಧೆ, ಶ್ರೀಧರ ಕಲಾಲ, ಭರತ ಒಡೆಯರ, ಮಕ್ತುಂಹುಸೇನ ಲಷ್ಕರಿ, ರಾಜು ಲಮಾಣಿ, ಗೌಡಪ್ಪ ಪಾಟೀಲ, ಗೀತಾ ಪಾಟೀಲ, ಅನಸೂಯಾ ಹಿರೇಮಠ ಸೇರಿದಂತೆ ಮತ್ತಿತರು ಇದ್ದರು.
ಬೆಲೆ ಏರಿಕೆ: ಬಿಜೆಪಿ ಪ್ರತಿಭಟನೆ
ಹುಬ್ಬಳ್ಳಿ: ತೈಲೋತ್ಪನ್ನ ಮತ್ತು ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಶ್ರೀಸಾಮಾನ್ಯನ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಮಹಾನಗರ ಬಿಜೆಪಿ ಜಿಲ್ಲಾ ಘಟಕ ಸೋಮವಾರ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಯುಪಿಎ ಸರ್ಕಾರದ ಅನಾಹುತಕಾರಿ ಆರ್ಥಿಕ ನೀತಿಯಿಂದಾಗಿ ಡಾಲರ್ ಎದುರು ರು. ಮೌಲ್ಯ ಕುಸಿಯುತ್ತಿದ್ದು, ರು. ಅಪಮೌಲ್ಯ ಇಂಧನ ಬೆಲೆ ಏರಿಕೆಗೆ ಕಾರಣ ಎಂದು ಸಬೂಬು ಹೇಳುತ್ತಿದೆ. ಅರ್ಥಶಾಸ್ತ್ರಜ್ಞರಾಗಿರುವ ಪ್ರಧಾನಿ ಮನ್ಮೋಹನ್ ಸಿಂಗ್ ಮತ್ತು ಅನುಭವಿ ಹಣಕಾಸು ಸಚಿವ ಪಿ.ಚಿದಂಬರಂ ಅರ್ಥ ವ್ಯವಸ್ಥೆ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಕಳೆದೆರಡು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಆರು ಬಾರಿ ಇಂಧನ ಬೆಲೆ ಏರಿಕೆ ಮಾಡಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ಕಳೆದ 8 ತಿಂಗಳ ಅವಧಿಯಲ್ಲಿ ರು. 100 ಏರಿಕೆಯಾಗಿದೆ. ಹಗರಣ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ ಕೇಂದ್ರ ಸರ್ಕಾರ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಮಹಾನಗರ ಪಾಲಿಕೆ ಸದಸ್ಯ ಸುಧೀರ ಸರಾಫ್, ನಾಗೂಸಾ ಕಲ್ಬುರ್ಗಿ, ಎಸ್.ಎಸ್. ಶೆಜವಾಡಕರ್, ನಾಗೇಶ ಕಲ್ಬುರ್ಗಿ, ತೋಟಪ್ಪ ನಿಡಗುಂದಿ, ಸುನೀಲ್ ಮಿಸ್ಕಿನ್, ಕೃಷ್ಣಾ ಗಂಡಗಾಳೇಕರ್, ಶಂಕರಪ್ಪ ಛಬ್ಬಿ, ಆದರ್ಶ ಉಪ್ಪಿನ್, ಮಾರುತಿ ಹಾಲಹರವಿ ಸೇರಿದಂತೆ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

