ರಾಜಕಾರಣಕ್ಕಿಂತ ಮಿಗಿಲಾದದ್ದು ಶಿಕ್ಷಕ ಸೇವೆ: ಸಚಿವ ಸಂತೋಷ ಲಾಡ್
ಧಾರವಾಡ: ರಾಜಕಾರಣಕ್ಕಿಂತ ಮಿಗಿಲಾದ ಸೇವೆ ಶಿಕ್ಷಕ ಸೇವೆ. ಬರೀ ರಾಜಕಾರಣದಿಂದ ಮಾತ್ರ ಸಮಾಜ ಸೇವೆ ಮಾಡಲಾಗುತ್ತದೆ ಎಂಬುದು ತಪ್ಪು. ಆದ್ದರಿಂದ ಶಿಕ್ಷಕರು ರಾಜಕಾರಣದಲ್ಲಿ ಭಾಗಿಯಾಗದೇ ಶಿಕ್ಷಕ ವೃತ್ತಿಯ ಮೂಲಕ ಸೇವೆ ಸಲ್ಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಭಾನುವಾರ ನಡೆದ ವಿಜಯೀ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಸಮೂಹ ಹಮ್ಮಿಕೊಂಡ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಓರ್ವ ರಾಜಕಾರಣಿ ಮೇಲೆ ಸಮಾಜ ಸುಧಾರಣೆಯ ಜವಾಬ್ದಾರಿ ಎಷ್ಟಿರುತ್ತದೆಯೋ ಅದಕ್ಕಿಂತ ಹೆಚ್ಚಾಗಿ ಶಿಕ್ಷಕನ ಮೇಲಿರುತ್ತದೆ. ಆದರೆ, ನಮ್ಮ ಶಿಕ್ಷಕರ ಚಿತ್ತ ಮಾತ್ರ ಇತ್ತೀಚೆಗೆ ಶಿಕ್ಷಣಕ್ಕಿಂತ ಹೆಚ್ಚು ರಾಜಕಾರಣದತ್ತ ಒಲಿಯುತ್ತಿದ್ದು, ವಿಷಾದದ ಸಂಗತಿ ಎಂದರು. ಪ್ರತಿ ವರ್ಷ ಹೊಸ ಹೊಸ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿದ್ದರೂ ಭಾರತ 126ನೇ ಸ್ಥಾನದಲ್ಲಿದೆ. ವಿದ್ಯಾರ್ಥಿಗಳು ಬರೀ ಅಂಕ ಗಳಿಸಿದರೆ ಸಾಲದು. ಇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ರಾಜಕಾರಣಿಗಳು ಎಡವಿದರೆ ಎಚ್ಚರಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕೆಂದು ಲಾಡ್ ಸಲಹೆ ನೀಡಿದರು. ವಿಪ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿದರು. ವಿಜಯೀ-ಕರ್ನಾಟಕ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಬಾಬುರಾವ್ ಶೇಗುಣಸಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಹನುಮಂತ ಕೊಟಬಾಗಿ, ಶಿವಲೀಲಾ ಕುಲಕರ್ಣಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಇದ್ದರು. ರಾಜ್ಯದ 13 ಜಿಲ್ಲೆಗಳ 75 ತಾಲೂಕುಗಳ ಉತ್ತಮ ಗಣಿತ ಹಾಗೂ ವಿಜ್ಞಾನದ 75 ಶಿಕ್ಷಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

