ಮಳೆಯಿಂದ ಬೆಳೆಹಾನಿ: ಆತಂಕದಲ್ಲಿ ರೈತ
ಕಲಘಟಗಿ: ಕಳೆದೆರಡು ವಾರಗಳಿಂದಲೂ ನಿರಂತರ ಮಳೆಯಿಂದಾಗಿ ತಾಲೂಕಿನ ಸುಮಾರು ಹತ್ತುಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿನ ಕೊಯ್ಲಿಗೆ ಬಂದ ಸೊಯಾಬಿನ್ ಸೇರಿದಂತೆ ಇತರೆ ಬೆಳೆಗೆ ಹಾನಿಯುಂಟಾಗುವ ಆತಂಕದಲ್ಲಿ ರೈತ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದೆರಡು ತಿಂಗಳ ಹಿಂದೆಯೇ ಕೀಟಬಾಧೆಯಿಂದ ಈ ಬೆಳೆಯು ಇಳುವರಿ ಕಡಿಮೆಯಾಗುವ ಭೀತಿಯಲ್ಲಿದ್ದ ರೈತರು ಈಗ ಕೊಯ್ಲಿಗೂ ಮಳೆಯು ಅಡ್ಡಿಯನ್ನುಂಟು ಮಾಡಿದ್ದು, ಇದೇ ಸರದಿಯಲ್ಲಿ ಗೋವಿನ ಜೋಳ, ಉದ್ದು, ಹೆಸರು ಬೆಳೆಯು ಹಾನಿಯಾಗುವ ಸಂಭವವಿದೆ.
ಕಾರ್ಮಿಕರ ವರ್ಗಾವಣೆಗೆ ವಿರೋಧಿಸಿ ಪ್ರತಿಭಟನೆ
ಧಾರವಾಡ: ಇಲ್ಲಿಗೆ ಸಮೀಪದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಹಿಟಾಚಿ ಕಂಪನಿಯಲ್ಲಿ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗಿದೆ. ಕಾರ್ಮಿಕ ಸಂಘಟನೆ ಪ್ರಾರಂಭಿಸಲು ಹೊರಟಿದ್ದ ಐವರು ಕಾರ್ಮಿಕರನ್ನು ಆಡಳಿತ ಮಂಡಳಿ ವರ್ಗಾವಣೆ ಮಾಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಲಾಯಿತು. ಟಾಟಾ ಹಿಟಾಚಿ ಕನ್ಸ್ಟ್ರಕ್ಷನ್ ಮಶಿನರಿ ಕಂಪೆನಿ ಲಿಮಿಟೆಡ್ನಲ್ಲಿ ಕಾರ್ಮಿಕರ ವಿವಿಧ ಬೇಡಿಕೆ ಮತ್ತು ಕಂಪೆನಿಯ ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆ ಪ್ರಾರಂಭಿಸಲು ಕಂಪೆನಿಯಲ್ಲಿಯ ಐವರು ಕಾರ್ಮಿಕರು ಮುಂದಾಗಿದ್ದರು. ಅಲ್ಲದೆ, ಈ ಕುರಿತು ಎಲ್ಲ ಕಾರ್ಮಿಕರ ಸಭೆ ಸಹ ನಡೆಸಲಾಗಿತ್ತು. ಇದನ್ನು ಸಹಿಸದ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿ ಐವರನ್ನು ದೇಶದ ವಿವಿಧೆಡೆ ವರ್ಗಾವಣೆ ಮಾಡಿದೆ. ಆದ್ದರಿಂದ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಒಂದು ವೇಳೆ ವರ್ಗಾವಣೆ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಾರ್ಮಿಕರು ಎಚ್ಚರಿಸಿದ್ದಾರೆ.
ಇಂದು ಮುಕ್ತ ನೃತ್ಯ ಸ್ಪರ್ಧೆ
ಧಾರವಾಡ: ಗಾಂಧಿನಗರ ಯುವಜನ ಸಂಘ 25ನೇ ವರ್ಷದ ಬೆಳ್ಳಿಹಬ್ಬದ ಗಣೇಶೋತ್ಸವ ಆಚರಣೆ ನಿಮಿತ್ತ ಸೆ. 12ರಂದು ಅವಳಿನಗರ ಮುಕ್ತ ನೃತ್ಯ ಸ್ಪರ್ಧೆ ಏರ್ಪಡಿಸಿದೆ. ಆಸಕ್ತರು ಸಂಜೆ 6ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕು. ಮಾಹಿತಿಗಾಗಿ ಮೊ. 9980562893 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ನಾಳೆಯಿಂದ ಚಿತ್ರಕಲಾ ಶಿಬಿರ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಸೆ.13, 14 ಹಾಗೂ 15ರಂದು ಚಿತ್ರಕಲಾ ಶಿಬಿರ ಏರ್ಪಡಿಸಲಾಗಿದೆ. 13ರ ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಡಾ. ಗಿರಡ್ಡಿ ಗೋವಿಂದರಾಜ ಆಗಮಿಸಲಿದ್ದಾರೆ. ಕುಲಸಚಿವರಾದ ಡಾ. ಚಂದ್ರಮಾ ಕಣಗಲಿ, ಡಾ. ಕೆ.ಆರ್. ದುರ್ಗಾದಾಸ, ಸಿಂಡಿಕೇಟ್ ಸದಸ್ಯರಾದ ಡಾ. ಲೋಹಿತ್ ನಾಯ್ಕರ್, ಪ್ರೊ. ಆರ್.ಎಲ್. ಹೈದ್ರಾಬಾದ, ಪ್ರೊ. ಐ.ಎಂ. ಖಾಜಿ, ಎಂ.ಆರ್. ಬಾಳಿಕಾಯಿ, ಎನ್.ಎಂ. ದಾಟನಾಳ, ಎಫ್.ವಿ. ಚಿಕ್ಕಮಠ, ವಿಲ್ಸನ ಸೋನಾಘರ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

