ಸಾಕ್ಷರತೆ ಕಲಿಕಾರ್ಥಿಗಳ ಉತ್ತಮ ಬದುಕಿಗೆ ತಳಪಾಯ
ಧಾರವಾಡ: ಸಾಕ್ಷರತಾ ಕಾರ್ಯಕ್ರಮ ಕೇವಲ ಅಕ್ಷರ ಕಲಿಕೆಗಾಗಿ ಮಾತ್ರ ಸೀಮಿತವಾಗಿರದೇ, ಕಲಿಕಾರ್ಥಿಯಲ್ಲಿ ಕ್ರಿಯಾಶೀಲತೆ ಹಾಗೂ ಅರಿವು ಮೂಡಿಸುತ್ತದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು.
ತಾಲೂಕಿನ ಸೋಮಾಪುರದ ಭಾರತಿ ವಿಶ್ವ ಸೇವಾ ಸದನ ಪ್ರೌಢಶಾಲೆಯಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ವ್ಯಾಪಕವಾದ ಅನಕ್ಷರತೆಗೆ ಬಡತನ ಹಾಗೂ ಜನಸಂಖ್ಯಾ ಸ್ಪೋಟವೆ ಕಾರಣವಾಗಿದೆ. ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವುದರ ಜೊತೆಗೆ ಶೋಷಣೆ, ಅಸಮಾನತೆ, ಹಾಗೂ ಅಜ್ಞಾನದ ವಿರುದ್ಧ ಹೋರಾಡಲು ಕ್ರಿಯಾತ್ಮಕತೆಯನ್ನು ಉಂಟು ಮಾಡಲಿದೆ ಎಂದರು. ರಾಜ್ಯದಲ್ಲಿ ಸಾಕ್ಷರ ಭಾರತ ಕಾರ್ಯಕ್ರಮ ಅನುಷ್ಟಾನದಲ್ಲಿದ್ದು, ಕಲಿಕಾರ್ಥಿಗಳಿಗೆ ತಮ್ಮ ಕಲಿಕೆ ಮುಂದುವರೆಸಲು ಸಮಾನ ಶಿಕ್ಷಣ ಹಾಗೂ ಜೀವನ ಗುಣಮಟ್ಟ ಸುಧಾರಣಾ ಯೋಜನೆಯನ್ನು ರೂಪಿಸಲಾಗಿದೆ. ಸಾಕ್ಷರತೆ ಅವರ ಉತ್ತಮ ಬದುಕಿಗೆ ತಳಪಾಯವಾಗಿದೆ ಎಂದು ತಿಳಿಸಿದರು.
ಜಿ.ಎಂ. ನಿಡಗುಂದಿ, ಸಾಕ್ಷರತಾ ಕಾರ್ಯಕ್ರಮದ ಮೂಲಕ ರಾಜ್ಯದ ಸಾಕ್ಷರತಾ ಪ್ರಮಾಣವನ್ನು ಶೇ. 80ಕ್ಕೆ ಏರಿಸುವುದಾಗಿದೆ.
ಕಲಿಕಾರ್ಥಿಗಳನ್ನು ಆಡಳಿತ, ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶ ಹೊಂದಿದೆ ಎಂದರು. ಶೋಭಾ ಕಾಳೆ ಅಧ್ಯಕ್ಷತೆ ವಹಿಸಿದ್ದರು. ಶಾಂತಾ ಕೆಂಗಾರ, ನಿರೂಪಾ ಪಾಟೀಲ, ಎಂ.ಐ. ಪಾಟೀಲ ಇದ್ದರು.
ಗೀತಾ ಹಿರೇಮಠ ಸ್ವಾಗತಿಸಿದರು. ಪ್ರವೀಣ ಮಲ್ಲಾಡಿ ನಿರೂಪಿಸಿದರು. ಜ್ಯೋತಿ ಉಳ್ಳಾಗಡ್ಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

