50 ಕುರಿ ದೋಚಿದ ದುಷ್ಕರ್ಮಿಗಳು
ನವಲಗುಂದ: ತಾಲೂಕಿನ ಶಲವಡಿ ಗ್ರಾಮದಲ್ಲಿ ದುಷ್ಕರ್ಮಿಗಳು ಕುರಿಗಾರನನ್ನು ಕೊಲೆ ಮಾಡಿ 50 ಕುರಿಗಳನ್ನು ದೋಚಿ ಮಂಗಳವಾರ ಪರಾರಿಯಾಗಿದ್ದಾರೆ. ಕೊಲೆಗೀಡಾದ ಬಸಪ್ಪ ಬಿಂಗಿ (50) ರೋಣ ತಾಲೂಕಿನ ಬೆಳವಣಕಿ ಗ್ರಾಮದವರಾಗಿದ್ದು, 50 ಕುರಿಗಳನ್ನು ಸಾಕಿಕೊಂಡು ಶಲವಡಿ ಗ್ರಾಮದ ಪ್ರವಾಸಿ ಮಂದಿರದ ಹತ್ತಿರ ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದ. ಭಾನುವಾರ ರಾತ್ರಿ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಎಸ್ಪಿ ಬಿ.ಎಸ್. ಲೋಕೇಶಕುಮಾರ, ಡಿಎಸ್ಪಿ ರಾಜು ಬನಹಟ್ಟಿ, ಸಿಪಿಐ ಎಸ್.ಎಸ್. ಪಡೋಳಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಗಾರದ ಅಂಗಡಿ
ಮೇಲೆ ಐಟಿ ದಾಳಿ
ಹೂವಿನಹಡಗಲಿ: ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಪಟ್ಟಣದ ರಾಯ್ಕರ್ ಕುಟುಂಬಕ್ಕೆ ಸೇರಿದ್ದ ಶ್ರೀ ಕಾಮಾಕ್ಷಿ ಬೆಳ್ಳಿ, ಬಂಗಾರದ ಅಂಗಡಿ ಮೇಲೆ ದಾಳಿ ಮಾಡಿದ್ದಾರೆ. ಮಾರಾಟ ತೆರಿಗೆ ವಂಚನೆ ದೂರಿನ ಹಿನ್ನೆಲೆಯಲ್ಲಿ ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರೆಂದು ತಿಳಿದು ಬಂದಿದೆ. ಅತ್ತ ದಾಳಿ ಮಾಹಿತಿ ಪಟ್ಟಣದಲ್ಲಿ ರವಾನೆಯಾಗುತ್ತಿದಂತೆ ಪಟ್ಟಣದ ಎಲ್ಲ ಬೆಳ್ಳಿ, ಬಂಗಾರದ ಅಂಗಡಿ ಮಾಲೀಕರು ಅಂಗಡಿಗಳಿಗೆ ಬೀಗ ಹಾಕಿಕೊಂಡು ಮನೆ ತೆರಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

