ಹೊರನಾಡ ಕನ್ನಡಿಗರ ಸೈಕಲ್ ಸವಾರಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 23
ಗಡಿನಾಡ ಗೋಳು ಕೇಳುವವರಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಬೆಂಗಳೂರಿಗೆ ಸೈಕಲ್ ಮೇಲೆ ಪಯಣಿಸುತ್ತಿರುವ ಹೊರನಾಡ ಕನ್ನಡಿಗರ ಸೈಕಲ್ ಸವಾರಿ ಸೋಮವಾರ ಹುಬ್ಬಳ್ಳಿ ನಗರಕ್ಕೆ ಆಗಮಿಸಿತು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಹೊರನಾಡ ಕನ್ನಡಿಗರಾದ ಸುಭಾಷ ಬೆಳ್ಳಟ್ಟಿ ಮತ್ತು ಗಿರಿಮಲ್ಲ ಮುಡಚಿ, 'ಗಡಿನಾಡ ನಡಿಗೆ ಬೆಂಗಳೂರು ಕಡೆಗೆ' ಎಂಬ ಉದ್ದೇಶ ಇರಿಸಿಕೊಂಡು ಸೆ. 19ರಂದು ಜತ್ತ ತಾಲೂಕಿನ ಸಿಂಧೂರ ಗ್ರಾಮದಿಂದ ಸೈಕಲ್ ಸವಾರಿ ಆರಂಭಿಸಿದ್ದಾರೆ. ಹೊರನಾಡ ಕನ್ನಡಿಗರಿಬ್ಬರ ಸೈಕಲ್ ಸವಾರಿ ಬಿಜಾಪುರದ ಸಾವಳಗಿ, ಜಮಖಂಡಿ, ಮುಧೋಳ, ರಾಮದುರ್ಗ, ಸವದತ್ತಿ ಧಾರವಾಡ ಮಾರ್ಗವಾಗಿ ಹುಬ್ಬಳ್ಳಿ ಪ್ರವೇಶಿಸಿದ್ದಾರೆ. 'ಗಡಿನಾಡ ನಡಿಗೆ ಬೆಂಗಳೂರು ಕಡೆಗೆ' ಸೈಕಲ್ ಸವಾರಿ ಸೆ. 26ರಂದು ಬೆಂಗಳೂರು ತಲುಪಲಿದೆ.
ಸೈಕಲ್ ಜಾಥಾ ಕುರಿತು ಮಾತನಾಡಿದ ಹೊರನಾಡ ಕನ್ನಡಿಗರಿಬ್ಬರು, ರಾಜ್ಯ ಸರ್ಕಾರ ಗಡಿ ಮತ್ತು ಹೊರನಾಡ ಕನ್ನಡಿಗರ ಕಲ್ಯಾಣದ ಬಗ್ಗೆ ದಿಟ್ಟ ಕ್ರಮ ತೆಗೆದುಕೊಳ್ಳಬೇಕಿದೆ. ಶಿಕ್ಷಣ, ನೌಕರಿಯಲ್ಲಿ ಶೇ. 5ರಷ್ಟು ಮೀಸಲಾತಿ ಕಲ್ಪಿಸಬೇಕು. ಹಿಪ್ಪರಗಿ, ಹಿರೇಪಡಸಲಗಿ ಬ್ಯಾರೇಜ್ನಿಂದ ಗಡಿನಾಡ ಕನ್ನಡಿಗರಿಗೂ ನೀರಾವರಿ ಸೌಲಭ್ಯ ಲಭಿಸಬೇಕು ಎನ್ನುವುದು ಈ ಜಾಥಾದ ಮುಖ್ಯ ಉದ್ದೇಶವಾಗಿದೆ ಎಂದರು.
ಕೇದಾರನಾಥ ಜಲಪ್ರಳಯದಲ್ಲಿ ಕನ್ನಡಿಗರನ್ನು ರಕ್ಷಿಸಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೂ ಕೃತಜ್ಞತೆ ಸಲ್ಲಿಸುವುದು ಈ ಸೈಕಲ್ ಜಾಥಾದ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

