ಧಾರವಾಡ

ಲೇಖಕಿ ಲತಾ ಬರವಣಿಗೆಯಲ್ಲಿ ಸಾಮಾಜಿಕ ಕಳಕಳಿ: ಡಾ. ಶಾಂತಾ ಇಮ್ರಾಪುರ

Published On :

ಧಾರವಾಡ: ಮೈಸೂರಿನ ಲೇಖಕಿ ಡಾ೤ ಲತಾ ಅವರ ಲೇಖನಗಳನ್ನು ಗಮನಿಸಿದರೆ ನಿಜವಾದ ಸಾಮಾಜಿಕ ಕಳಕಳಿ, ದೃಢವಾದ ನಿಲುವು, ಅದಮ್ಯ ಚೇತನ ಇದೆ ಎಂದು ಹಿರಿಯ ಲೇಖಕಿ ಡಾ೤ ಶಾಂತಾ ಇಮ್ರಾಪುರ ಹೇಳಿದರು. ವಿದ್ಯಾವರ್ಧಕ ಸಂಘವು ಇಂದುಮತಿ ಪಾಟೀಲ ಪುಟ್ಟಪ್ಪ ದಂಪತಿಗಳ ಪುತ್ರಿ ಶಾಂತಲಾ ಪಾಟೀಲ ಇವರ ಹೆಸರಿನ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡುತ್ತಾ, ಡಾ೤ ಲತಾ ರಾಜಶೇಖರ ಅವರು 12-13 ವರ್ಷಗಳಲ್ಲಿ ಸತತ ಪರಿಶ್ರಮದಿಂದ ನಾಲ್ಕು ವಿಭಿನ್ನ ಮಹಾಕಾವ್ಯಗಳನ್ನು ರಚಿಸಿ ಐದನೇ ಮಹಾಕಾವ್ಯ ರಚನೆಯಲ್ಲಿ ತೊಡಗಿದ್ದು, ಸ್ತ್ರೀ ಲೋಕದಲ್ಲಿ ಅದ್ಭುತ ಸಾಧನೆ ಎಂದು ಬಣ್ಣಿಸಿದರು. ಧಾರವಾಡ ಜೆಎಸ್‌ಎಸ್ ಕಾರ್ಯದರ್ಶಿ ಡಾ೤ ನ. ವಜ್ರಕುಮಾರ ಲೇಖಕಿ ಡಾ೤ ಲತಾ ರಾಜಶೇಖರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಾಡೋಜ ಡಾ೤ ಪಾಟೀಲ ಪುಟ್ಟಪ್ಪ ಮಾತನಾಡಿ, ಡಾ೤ ಲತಾ ಅವರಿಗೆ ಈಗಾಗಲೇ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಬೇಕಾಗಿತ್ತು. ಆದರೆ, ಅವುಗಳು ಸಿಗದಿರುವುದಕ್ಕೆ ಬೇಸರ ತಂದಿದೆ. ಲತಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಮಾಡಿದ್ದು, ಹೆಚ್ಚಿನ ಸಾಧನೆ ಮಾಡುವ ಸಾಮರ್ಥ್ಯ, ಪ್ರತಿಭೆ ಅವರಲ್ಲಿದೆ ಎಂದರು. ಲೇಖಕಿ ಡಾ೤ ಲತಾ ರಾಜಶೇಖರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಡಾ೤ ಹಾ.ಮಾ. ನಾಯಕ, ಇತರ ಸಾಹಿತಿಗಳು, ಲೇಖಕಿಯರು, ನನ್ನ ಸಾಹಿತ್ಯಿಕ ಚಟುವಟಿಕೆಗಳಿಗೆ ಪ್ರೇರಣೆ, ಪ್ರೋತ್ಸಾಹ ನೀಡಿದ್ದಾರೆ ಎಂದರು. ಡಾ೤ ಎಸ್. ಎಂ. ವೃಷಭೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಂತಲಾ ಪಾಟೀಲರ ಪುತ್ರಿ ದತ್ತಿ ದಾನಿ ವಿಜಯಮಾಲಾ, ಡಾ೤ ರಾಜಶೇಖರ, ಜಿ.ಜಿ. ದೊಡವಾಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.