ಧಾರವಾಡ

ನೈಋತ್ಯ ರೇಲ್ವೆಗೆ ರು. 1,789 ಕೋಟಿ ಆದಾಯ

Published On :

ಹುಬ್ಬಳ್ಳಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಆಗಸ್ಟ್‌ವರೆಗೆ ನೈಋತ್ಯ ರೈಲ್ವೆ ರು. 1,789 ಕೋಟಿ ಆದಾಯ ಗಳಿಸಿದೆ ಎಂದು ನೈಋತ್ಯ ರೇಲ್ವೆ ವಲಯ ಮಹಾಪ್ರಬಂಧಕ ಅಶೋಕ ಮಿತ್ತಲ್ ಹೇಳಿದರು.
ಹುಬ್ಬಳ್ಳಿ ನೈಋತ್ಯ ರೇಲ್ವೆ ವಲಯ ಕಚೇರಿಯಲ್ಲಿ ವಲಯ ರೇಲ್ವೆ ಬಳಕೆದಾರರ ಮತ್ತು ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2012-13ನೇ ಹಣಕಾಸು ವರ್ಷದಲ್ಲಿ 33.52 ಮಿಲಿಯನ್ ಸರಕು ಸಾಗಿಸಿದ್ದು, 193 ಮಿಲಿಯನ್ ಪ್ರಯಾಣಿಕರು ನೈಋತ್ಯ ರೇಲ್ವೆ ಮುಖಾಂತರ ಪಯಣಿಸಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ನೈಋತ್ಯ ರೇಲ್ವೆ ಒಟ್ಟು ರು. 4.185 ಕೋಟಿ ನಿವ್ವಳ ಆದಾಯ ಗಳಿಸಿದೆ.  2013-14ನೇ ರೇಲ್ವೆ ಬಜೆಟ್‌ನಲ್ಲಿ ಘೋಷಿಸಿದ 11 ನೂತನ ರೈಲುಗಳ ಪೈಕಿ ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್ ಮತ್ತು ಬೆಂಗಳೂರು- ಮಾರಿಕುಪ್ಪಂ ರೇಲ್ವೆ ಸಂಚಾರ ಆರಂಭವಾಗಿದೆ. ಬಾಗಲಕೋಟೆ- ಯಶವಂತಪುರ, ಮೈಸೂರು- ಹುಬ್ಬಳ್ಳಿ- ಬೆಂಗಳೂರು ಹಂಪಿ ಎಕ್ಸ್‌ಪ್ರೆಸ್, ಸೋಲಾಪುರ- ಯಶವಂತಪುರ, ಗೊಲಗುಂಬಜ್ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಗಣೇಶ ಗಾಂವಕರ್, ಬಾಬುಲಾಲ್ ಜೈನ್, ಚಿನ್ನರಂಗೇಗೌಡ, ಪ್ರಕಾಶ ಮಂಡೋತ್, ಗಂಗಾರಾಮ ಮೊರಜಕರ್, ಎನ್.ಪಿ. ಜವಳಿ, ಭರತ್ ಕಾಮತ್, ಜಿ. ನಾಗರಾಜ ರಾವ್, ಆರ್. ರಾಜಶೇಖರ, ಎ.ಎಸ್. ಕುಲಕರ್ಣಿ, ಬಿ.ಎಸ್. ಚಂದ್ರಶೇಖರ, ವಿಶ್ವನಾಥ ಗಿಣಿಮಾವ್, ಜಿ. ವೇಣುಯಾದವ್, ನಾಗರಾಜ ಮೋಡಿವಾಲ, ಅಮರೇಗೌಡ, ಕೆ. ಶಿವಕುಮಾರ್, ನಿಖಿಲ ಉಮೇಶ ಹೊಸಮನೆ. ಎಸ್. ಚಂದ್ರಶೇಖರ, ರಾಧಾಕೃಷ್ಣ ಶೆಣೈ, ಅಬ್ದುಲ್ ಮುಜೀಬ್, ಕೆ.ಸಿ. ರಾಜೇಶ, ಅಜಯ ಜಾಧವ ಎಂ. ರಾಮಲಿಂಗಯ್ಯ, ಸಿ.ಎಸ್. ಗುಪ್ತಾ ಮುಂತಾದವರು ಸಭೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.