ಮೌಲ್ಯಗಳ ಅಧಃಪತನದಲ್ಲಿ ಎಲ್ಲರ ಪಾಲು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 30
ಸಮಾಜದಲ್ಲಿ ನಡೆಯುತ್ತಿರುವ ಮೌಲ್ಯಗಳ ಅಧಪತನದಲ್ಲಿ ಪ್ರತಿಯೊಬ್ಬರೂ ತಿಳಿದೊ-ತಿಳಿಯದೋ ಸೇರಿಕೊಂಡಿರುತ್ತಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ, ಬರಹಗಾರ ರಾಘವೇಂದ್ರ ಪಾಟೀಲ ವಿಷಾದ ವ್ಯಕ್ತಪಡಿಸಿದರು.
ಅಕ್ಷರ ಸಾಹಿತ್ಯ ವೇದಿಕೆ ಭಾನುವಾರ ಸಂಜೆ ಮಹಾರಾಷ್ಟ್ರ ಮಂಡಳದಲ್ಲಿ ಹಮ್ಮಿಕೊಂಡಿದ್ದ ಡಾ. ಪ್ರಹ್ಲಾದ ಅಗಸನಕಟ್ಟೆ ಹಾಗೂ ಮಹಾಂತಪ್ಪ ನಂದೂರ ಅವರುಗಳ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮೌಲ್ಯಗಳ ಉಳಿಸಲು ಉತ್ತಮ ಪುಸ್ತಕಗಳನ್ನು ಓದಿ ಮನಸ್ಸು ಸಂಸ್ಕಾರ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಅಭಿಪ್ರಾಯಪಟ್ಟ ಪಾಟೀಲ, ಬದುಕಿನಲ್ಲಿ ಬಹುತೇಕ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲು ಅಸಾಧ್ಯವಾದ ಸಂದಿಗ್ಧತೆಯಲ್ಲಿ ನಾವು ಸಿಕ್ಕಿ ಹಾಕಿಕೊಂಡಿರುತ್ತೇವೆ ಎಂದರು.
ಬದುಕನ್ನು ಸಂಪೂರ್ಣವಾಗಿ ಅರ್ಥೈಯಿಸಿಕೊಳ್ಳಲು ಸಾಧ್ಯವಾಗುವ ಹಾಗೂ ಅನುಕಂಪ ಹುಟ್ಟಿಸುವ ಕಥೆಗಳು ಹೆಚ್ಚೆಚು ಬರಬೇಕು. ವಿಮರ್ಶಾತ್ಮಕ ಕೃತಿಗಳ ಮುನ್ನಡಿ ಕುತೂಹಲ ಹುಟ್ಟಿಸುವಂತಾಗಿರಬೇಕು. ಅಲ್ಲದೇ ವಿಮರ್ಶಾತ್ಮಕ ಕೃತಿಗಳು ಓದುಗನಲ್ಲಿ ಕುತೂಹಲ ಸೃಷ್ಟಿಸುವಂತಿರಬೇಕು.
ಇಂದು ವಿಮರ್ಶಾತ್ಮಕ ಕೃತಿಗಳ ವಿಮರ್ಶೆಯನ್ನೇ ವಿಮರ್ಶಿಸುವಂತಹ ಪರಿಸ್ಥಿತಿ ಬಹುತೇಕ ಸಂದರ್ಭದಲ್ಲಿ ಕಂಡುಬರುತ್ತಿದೆ ಎಂದೂ ಪಾಟೀಲ ಹೇಳಿದರು.
ಉತ್ತಮ ಪರಿಸರ ಹಾಗೂ ಸಮಾಜ ನಿರ್ಮಾಣಕ್ಕೆ ಮೌಲ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಪುಸ್ತಕಗಳನ್ನು ಓದಿ ಉತ್ತಮ ಸಮಾಜ-ನಾಡು ಕಟ್ಟಲು ಮುಂದಾಗಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಡಾ. ಪ್ರಹ್ಲಾದ ಅಗಸನಕಟ್ಟಿ ರಚಿಸಿದ 'ಸುಳಿಯೋ ಸುಂಟರ ಗಾಳಿಯೋ' ಕಥಾ ಸಂಕಲನ, 'ಅನುಸರಣ' ವಿಮರ್ಶಾ ಸಂಕಲನ ಹಾಗೂ ಮಹಾಂತಪ್ಪ ನಂದೂರ ಅವರ 'ಜೀವ ಕೊಳಲು' ಕವನ ಸಂಕಲ ಬಿಡುಗಡೆಗೊಳಿಸಲಾಯಿತು.
ಅಕ್ಷರ ಸಾಹಿತ್ಯ ವೇದಿಕೆ ಅಧ್ಯಕ್ಷ ಆರೂರ ಲಕ್ಷ್ಮಣ ಶೇಟ್ ಅಧ್ಯಕ್ಷತೆವಹಿಸಿದ್ದರು. ಬರಹಗಾರರಾದ ಡಾ. ಡಿ.ಎಸ್. ಚೌಗಲೆ, ಡಾ. ಬಸು ಬೇವಿನಗಿಡದ, ಡಾ. ಪ್ರಹ್ಲಾದ ಅಗಸನಕಟ್ಟಿ, ಮಹಾಂತಪ್ಪ ನಂದೂರ, ಧಾರವಾಡ ರಾಷ್ಟ್ರೀಯ ಬೇಂದ್ರೆ ಟ್ರಸ್ಟ್‌ನ ಅಧ್ಯಕ್ಷರು ಆಗಿರುವ ವಿಮರ್ಶಕ ಡಾ. ಶಾಮಸುಂದರ ಬಿದರಕುಂದಿ, ಜಗದೀಶ ಮಂಗಳೂರಮಠ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

