ಅಡುಗೆ ಸ್ಪರ್ಧೆ ನಾರಾಯಣಸಾ ಲದ್ವಾಗೆ ಅಂತಾರಾಷ್ಟ್ರೀಯ ಪ್ರಶಸ್ತಿ
ಧಾರವಾಡ: ಸಿಂಗಾಪುರದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ನಗರದ ಅಭಿಷೇಕ್ ಫುಡ್ ವೆಂಡರ್ಸ್ ಮಾಲೀಕ ನಾರಾಯಣಸಾ ಲದ್ವಾ ಅವರಿಗೆ ಆಹಾರ ಸುರಕ್ಷತೆ ಪ್ರಶಸ್ತಿ ಲಭಿಸಿದೆ ಎಂದು ಸಾಹಿತಿ ಮೋಹನ ನಾಗಮ್ಮನವರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸಿಂಗಾಪುರನಲ್ಲಿ ವರ್ಲ್ಡ್ ಸ್ಟ್ರೀಟ್ ಫುಡ್ ಕಾಂಗ್ರೆಸ್ ಆಯೋಜಿಸಿದ್ದ ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾರತದ ನಾಲ್ವರ ಪೈಕಿ ನಾರಾಯಣಸಾ ಲದ್ವಾ ಮೊದಲ ಸ್ಥಾನ ಗಳಿಸಿದ್ದಾರೆ ಎಂದರು.
ಪ್ರಪಂಚದ ವಿವಿಧ ದೇಶಗಳ 350ಕ್ಕೂ ಹೆಚ್ಚು ಅಡುಗೆ ತಯಾರಿಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ನಾರಾಯಣಸಾ ಅವರ ಅಡುಗೆ ರುಚಿಗೆ ಪ್ರಥಮ ಬಹುಮಾನ ಬಂದಿರುವುದು ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಹಮ್ಮೆಯ ಸಂಗತಿ ಎಂದರು. ನಗರದಲ್ಲಿ ಅಭಿಷೇಕ್ ಫುಡ್ ವೆಂಡರ್ಸ್ ಮೂಲಕ ಅತ್ಯುತ್ತಮ ಗುಣಮಟ್ಟದ ಚಿಕನ್ 65 ಮತ್ತು ಎಲ್ಲ ವಿಧದ ಮಟನ್ ಬಿರಿಯಾನಿ ತಯಾರಿಕೆ ವೃತ್ತಿಯಲ್ಲಿ ತೊಡಗಿದ್ದಾರೆ. ಲಾಭದ ಉದ್ದೇಶ ಇರದಿದ್ದರೂ ಗ್ರಾಹಕರ ಮನ ತಣಿಯುವಂತೆ ಅಡುಗೆ ಮಾಡುತ್ತಾರೆ. ಸಭೆ, ಸಮಾರಂಭಗಳಿಗೆ ಉತ್ತಮ ಅಡುಗೆ ತಯಾರಿಸಿ ಜೀವನ ಸಾಗಿಸುತ್ತಿರುವ ನಾರಾಯಣಸಾ ಲದ್ವಾ, ಬೀದಿ ಬದಿಯ ವ್ಯಾಪಾರಸ್ಥರ ಪರವಾಗಿ 2008ರಲ್ಲಿ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ಹುಟ್ಟುಹಾಕಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಬೀದಿ ವ್ಯಾಪಾರಿಗಳ ಹಿತರಕ್ಷಣೆಗೆ ಶ್ರಮಿಸುತ್ತಿರುವ ನಾರಾಯಣ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ ಎಂದು ನಾಗಮ್ಮನವರ ವಿವರಿಸಿದರು. ನಾರಾಯಣಸಾ ಲದ್ವಾ ಮಾತನಾಡಿ, ಶೇಂಗಾ ಎಣ್ಣೆ, ಮನೆಯಲ್ಲಿ ಸಿದ್ಧಗೊಳಿಸಿದ ಮಸಾಲಾ ಹಾಗೂ ಶುಚಿ ಮತ್ತು ರುಚಿಯಾದ ಅಡುಗೆ ತಯಾರಿಕೆಯಿಂದ ನನಗೆ ಪ್ರಶಸ್ತಿ ಬಂದಿದೆ. ನನ್ನ ಈ ಪರಿಶ್ರಮಕ್ಕೆ ಕುಟುಂಬದ ಸಹಾಯವೂ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಬಕ್ಕಾಯಿ, ಸಿದ್ಧರಾಮ ಹಿಪ್ಪರಗಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

