ಧಾರವಾಡ

ದೂರವಾಣಿಯಲ್ಲಿ ಮತ ಜಾಗೃತಿ ಸಂದೇಶ

Published On :

ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಮತದಾರರು ವ್ಯಾಪಕವಾಗಿ ಭಾಗವಹಿಸುವಂತೆ ಜಾಗೃತಿ ಮೂಡಿಸಲು ಬಿಎಸ್‌ಎನ್‌ಎಲ್ ಇಲಾಖೆಯಿಂದ ದೂರವಾಣಿಯಲ್ಲಿ ಜಾಗೃತಿ ಸಂದೇಶವನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.
ಸ್ವೀಫ್ ಚಟುವಟಿಕೆ ಯೋಜನೆಯಡಿ ಭಾರತೀಯ ದೂರವಾಣಿ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ಅವಳಿನಗರದ ದೂರವಾಣಿ ಸಂಪರ್ಕ ಹೊಂದಿದ ಗ್ರಾಹಕರಿಗೆ ಏ. 17ರಂದು ಮತದಾನದಲ್ಲಿ ಭಾಗವಹಿಸಿ ಮತ ಚಲಾಯಿಸುವಂತೆ ಜ್ಞಾಪಿಸಲು ಮಹಾನಗರ ಪಾಲಿಕೆ ವತಿಯಿಂದ ದೂರವಾಣಿ ಸಂದೇಶ ಬಿಡುಗಡೆ ಮಾಡಲಾಯಿತು.
ನಗರದ ಸ್ಟೇಶನ್ ರಸ್ತೆಯ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಚುನಾವಣಾ ಆಯೋಗದ ಸ್ವೀಫ್ ಚಟುವಟಿಕೆಯ ವಿಕ್ಷಕರು ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ವೈ.ಕೆ. ಭವೇಜಾ ಸಂದೇಶ್ನ ಬಿಡುಗಡೆ ಮಾಡಿದರು. ಬಿಡುಗಡೆ ಮಾಡಿದ ಸಂದೇಶವು ಏ. 17 ರಂದು ಮತದಾನದಲ್ಲಿ ಭಾಗವಹಿಸಿ ಯಶಸ್ವಿ ಪ್ರಜಾಪ್ರಭುತ್ವಕ್ಕೆ ಮತ ಚಲಾಯಿಸಿ ಎಂದು ನುಡಿಯುವುದು. ಈ ಸಂದೇಶವು ಪ್ರಾಯೋಗಿಕವಾಗಿ ಈ ದಿನದಿಂದ ಪ್ರಾರಂಭಿಸಲಾಗಿದ್ದು,   ಏ. 12ರಿಂದ 17ರವರೆಗೆ ಒಂದು ವಾರ ಕಾಲ ನಿರಂತರವಾಗಿ ಕಾರ್ಯನಿರತದಲ್ಲಿರುತ್ತದೆ. ಈ ಸಂದೇಶ ಅವಳಿನಗರದ ಅಂದಾಜು 90 ಸಾವಿರ ಸ್ಥಿರ ದೂರವಾಣಿ ಗ್ರಾಹಕರಿಗೆ ಹಾಗೂ 25 ಸಾವಿರ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಒಂದು ವಾರಗಳ ಕಾಲ ತಲುಪಲಿದೆ. ಸಂದೇಶ್ನ ಉದ್ಘಾಟಿಸಿ ಮಾತನಾಡಿದ ಚುನಾವಣಾ ವಿಕ್ಷಕ ವೈ.ಕೆ. ಭವೇಜಾ, ಉತ್ತಮ ಪ್ರಜಾಪ್ರಭುತ್ವದ ನಿರ್ಮಾಣಕ್ಕಾಗಿ ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಮತದಾನ ಮಾಡುವುದು ಸರ್ವಶೇಷ್ಠ. ಆದಕಾರಣ ಪ್ರತಿಯೊಬ್ಬರೂ ತಮ್ಮ ಕುಟುಂಬದ ಸದಸ್ಯರೊಂದಿಗೆ ತಪ್ಪದೆ ಮತದಾನದ ದಿನ ಮತದಾನ ಮಾಡಲು ಮನವಿ ಮಾಡಿದರು. ನಂತರ ಮಾತನಾಡಿದ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಮತದಾನದಲ್ಲಿ ಪಾಲ್ಗೊಂಡು ಅವಳಿನಗರದ ಮತದಾನದ ಸರಾಸರಿ ಹೆಚ್ಚಿಸಲು ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.  ಬಿಎಸ್‌ಎನ್‌ಎಲ್ ಪ್ರಧಾನ ವ್ಯವಸ್ಥಾಪಕ ಕೃಷ್ಣ ಶರ್ಮಾ ಮಾತನಾಡಿ, ಬಿಎಸ್‌ಎನ್‌ಎಲ್ ತನ್ನದೇ ಆದ ಸೇವೆಗಳ ಮೂಲಕ ಗ್ರಾಹಕರ ಗಮನ ಸಳೆಯುತ್ತಿದೆ. ಮತದಾನದಲ್ಲಿ ಪಾಲ್ಗೊಳ್ಳುವ ಸಂದೇಶ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಒಂದು ಉತ್ತಮ ಪದ್ಧತಿಯಾಗಿದೆ ಎಂದರು.
ಬಿಎಸ್‌ಎನ್‌ಎಲ್ ಇಲಾಖೆಯ ಹಿರಿಯ ಅಧಿಕಾರಿಗಳು, ಪಾಲಿಕೆಯ ವಿಶೇಷ ಅಧಿಕಾರಿಗಳು ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.