ಆ ದ್ಯಾವ್ರಿಗೂ ಜೈ ಈ ದ್ಯಾವ್ರಿಗೂ ಜೈ...
ಹುಬ್ಬಳ್ಳಿ: ಲೋಕಸಭೆ ಚುನಾವಣೆಯಿಂದ ಯಾರಿಗೆ ಲಾಭವಾಗಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ. ಪ್ರಸಿದ್ಧ ದೇವಸ್ಥಾನಕ್ಕೆ, ಪೂಜಾರಿಗಳಿಗೆ ಮಾತ್ರ ಭರಪೂರ ಆದಾಯ ತಂದಿದೆ.
ಪ್ರಚಾರಕ್ಕೆ ತೆರಳುತ್ತಿರುವ ಅಭ್ಯರ್ಥಿಗಳು ದಾರಿ ಮಧ್ಯೆ ಸಿಗುವ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಪುನಸ್ಕಾರ ಸಲ್ಲಿಸಿ, ದೇವರ ಹುಂಡಿಗೆ ಭರಪೂರ ದೇಣಿಗೆ ಹಾಕುತ್ತಿದ್ದಾರೆ. ಪೂಜಾರಿಗೂ ಕೈ ಬಿಚ್ಚಿ ದಕ್ಷಿಣೆ ನೀಡುತ್ತಿದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ದೇವಸ್ಥಾನ, ಪೂಜಾರಿ ಸಮೃದ್ಧ.
ಆಧುನಿಕ ಯುಗದಲ್ಲಿ ದೇವ್ರು-ದಿಂಡ್ರು ಎಂಬ ನಂಬಿಕೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ ರಾಜಕಾರಣಿಗಳಿಗೆ ಮಾತ್ರ ಈ ನಂಬಿಕೆ ಕೈಬಿಟ್ಟಿಲ್ಲ. ರಾಜಕೀಯದ ಎಲ್ಲ ಏಳು-ಬೀಳುಗಳ ಬಗ್ಗೆ ಚಿಂತಿಸುವ ರಾಜಕಾರಣಿಗಳು ಪ್ರತಿ ಕ್ಷಣಕ್ಕೂ ದೇವರ ಆಶೀರ್ವಾದ ಬಯಸುತ್ತಾರೆ, ಜೋತಿಷಿಗಳ ಅಭಿಪ್ರಾಯ ಪಡೆದೇ ಮುನ್ನಡೆಯುತ್ತಾರೆ. ಚುನಾವಣೆಯ ಬಂದ ಮೇಲಂತೂ ರಾಜಕಾರಣಿಗಳು ಗುಡಿ-ಗುಂಡಾರ ಸುತ್ತಿದ್ದೇ ಸುತ್ತಿದ್ದು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗಿದೆ. ನಾಮಪತ್ರ ಸಲ್ಲಿಕೆಯಿಂದ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುವ ಕಾರ್ಯ ಶುರುವಾಗಿ, ಪ್ರಚಾರದ ಅಬ್ಬರದ ಮಧ್ಯೆಯೂ ಸಾಂಗೋಪಾಂಗವಾಗಿ ನಡೆದಿದೆ. ಸಹ ಪರಿವಾರ ಕುಟುಂಬ ಸಮೇತರಾಗಿ ವಿಶೇಷ ಪೂಜೆಗಳು ನಡೆಯುತ್ತಿವೆ. ಕುಂಕುಮಾರ್ಚನೆ, ಹಸ್ತೋದಕ, ಪಂಚಾಮೃತ ಅಭಿಷೇಕದಂತಹ ವಿಶೇಷ ಸೇವೆಗಳನ್ನೂ ಮಾಡಿಸಲಾಗುತ್ತಿದೆ.
ದೇವರಿಗೂ ಡಿಮ್ಯಾಂಡು: ಧಾರವಾಡ ಕ್ಷೇತ್ರದ ದೇವರಿಗೂ ಡಿಮ್ಯಾಂಡು ಬಂದು ಬಿಟ್ಟಿದೆ. ಸಿದ್ಧಾರೂಢ, ಕೆಲಗೇರಿ ಹನುಮಪ್ಪ, ಸೋಮೇಶ್ವರ, ಉದಯನಗರದ ಗಣಪ್ಪ, ಯಮನೂರಿನ ಚಾಂಗದೇವ ಮುಂತಾದ ಪ್ರಸಿದ್ಧ ಕ್ಷೇತ್ರಗಳಿಗೆ ಹೋಗಿ ಅಭ್ಯರ್ಥಿಗಳು ಮತ್ತವರು ಕುಟುಂಬ ಪರಿವಾರದವರು ಪೂಜೆ, ಪುನಸ್ಕಾರ ಕೈಗೊಳ್ಳುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಗಣೇಶ ದೇವಸ್ಥಾನಕ್ಕೆ ಎಲ್ಲ ಅಭ್ಯರ್ಥಿಗಳೂ ಆದ್ಯತೆ ನೀಡುತ್ತಿದ್ದಾರೆ. ವಿಘ್ನ ನಿವಾರಕನಾಗಿರುವ ಗಣೇಶನಿಗೆ ಪೂಜೆ ಮಾಡಿಸಿದ್ದೇ ಆದಲ್ಲಿ ಎಲ್ಲ ಕಾರ್ಯವೂ ನಿರ್ವಿಘ್ನವಾಗಿ ನೆರವೇರುವುದು ಎಂಬ ನಂಬಿಕೆಯಿಂದ ಗಣೇಶನಿಗೆ ಮೊದಲ ವಂದನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

