ಜಾತಿ ಆಧಾರಿತ ಮತ ಯಾಚನೆ ದುರ್ದೈವ
ಹುಬ್ಬಳ್ಳಿ: ಕರ್ನಾಟಕದಲ್ಲಿ ಬಹುಸಂಖ್ಯಾತರಾದ ವೀರಶೈವರು ಸರ್ವ ಜನಸಮಾನತೆ ಆಧರಿತ ಉನ್ನತಮಟ್ಟದ ಸಾಮಾಜಿಕ ಚಿಂತನೆಯ ಹರಿಕಾರರಾಗಿ ಬಸವಾದಿ ಪ್ರಥಮರು ನೀಡಿದ ದಿವ್ಯ ಸಂದೇಶದ ಪಾಲಕರಾಗಿ ರಾಷ್ಟ್ರೀಯ ಮುಖ್ಯ ವಾಹಿನಿಯಲ್ಲಿ ಬೆರೆತವರು. ದೇಶ ಹಾಗೂ ಕರ್ನಾಟಕ ರಾಜ್ಯ ನಿರ್ಮಾಣದಲ್ಲಿ ತಮ್ಮದೇ ಕೊಡುಗೆ ನೀಡಿದವರು ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶಾಸಕ ಬೆಲ್ಲದ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಈ ಚಿಂತನೆಯ ತಳಹದಿ ಮೇಲೆ ಸಮಾಜದ ಎಲ್ಲ ವರ್ಗದ ಜನರಿಗೂ ನ್ಯಾಯ ದೊರಕಿಸುವ ರಾಜಕೀಯ ಪಕ್ಷಗಳಿಗೆ ಹಾಗೂ ಅದರ ಅಭ್ಯರ್ಥಿಗಳಿಗೆ ಜಾತಿಮತ ಪಂಥರಹಿತರಾಗಿ ಚುನಾವಣೆಯಲ್ಲಿ ಉತ್ತಮ ಜನಪ್ರತಿನಿಧಿಗಳನ್ನು ಬೆಂಬಲಿಸುತ್ತ ಬಂದ ಕೀರ್ತಿ ವೀರಶೈವರದ್ದು. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಕಳೆದ ಯಾವುದೇ ಚುನಾವಣೆ ಜಾತಿ ಆಧಾರದಲ್ಲಿ ನಿರ್ಧಾರವಾಗಿಲ್ಲ ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ಧಾರವಾಡ ಲೋಕಸಭೆ ಕ್ಷೇತ್ರವನ್ನೇ ತೆಗೆದುಕೊಂಡಲ್ಲಿ 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ವೀರಶೈವರಿಗೆ ಟೀಕೆಟ್ ನೀಡಿ ಗೆಲ್ಲಿಸಿದ್ದು ನೆನಪಿಡಬೇಕಿರುವ ಸಂಗತಿ. ಈ ಚುನಾವಣೆ ದೇಶದ ಭವಿಷ್ಯ ರೂಪಿಸಲಿದೆ. 10 ವರ್ಷಗಳಲ್ಲಿ ಯುಪಿಎ ಆಡಳಿತದಿಂದ ದೇಶದಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸಿವೆ. ಇಂಥ ಸ್ಥಿತಿಯಲ್ಲಿ ಬಲಿಷ್ಠ ನಾಯಕತ್ವ ದೇಶದ ಚುಕ್ಕಾಣಿ ಹಿಡಿಯದಿದ್ದಲ್ಲಿ ದೇಶದ ಭವಿಷ್ಯ ಇನ್ನಷ್ಟು ಮಂಕಾಗಲಿದೆ.
ಇಂದಿನ ಪರಿಸ್ಥಿತಿಯಲ್ಲಿ ದೇಶವನ್ನು ಅಭಿವೃದ್ಧಿ, ನಿಜವಾದ ಸರ್ವಜನ ಸಮಭಾವದತ್ತ ಕೊಂಡೊಯುವಲ್ಲಿ ಸಮರ್ಥರಾಗಿರುವ ಮೋದಿ ನಾಯತ್ವದ ಬಿಜೆಪಿ ಬೆಂಬಲಿಸಿ ಎಂದಿನ ತಮ್ಮ ಪ್ರಬುದ್ಧತೆ ಮೆರೆಯುವುದು ಸಮಸ್ತ ವೀರಶೈವರ ಕರ್ತವ್ಯವಾಗಲಿ ಎಂದು ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮೇಯರ್ ಶಿವು ಹಿರೇಮಠ, ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಎಸ್.ಐ. ಚಿಕ್ಕನಗೌಡ್ರ, ಮೋಹನ ಲಿಂಬಿಕಾಯಿ, ಸೀಮಾ ಮಸೂತಿ, ಲಿಂಗರಾಜ ಪಾಟೀಲ, ಎಂ.ಆರ್. ಪಾಟೀಲ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

