ಧಾರವಾಡ

ಧಾರವಾಡ: ನಾಳೆಯಿಂದ ನಗೆ ನಾಟಕೋತ್ಸವ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 19
ಇಲ್ಲಿಯ ಶರಣವೈಭವ ನಾಟ್ಯ ಕಲಾ ಸಂಘದ ವತಿಯಿಂದ ಹಿರಿಯ ರಂಗ ಕಲಾವಿದ ಎಲ್.ಜಿ. ದೇವಾಂಗಮಠರ ನಗೆ ನಾಟಕೋತ್ಸವವನ್ನು ಏ. 21 ರಿಂದ 23ರ ವರೆಗೆ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಲಾವಿದ ಪ್ರಭು ಹಂಚಿನಾಳ, ಏ. 21ರ ಸಂಜೆ 6.30ಕ್ಕೆ ಪಾಲಿಕೆ ಸದಸ್ಯ ಸುಭಾಸ ಶಿಂಧೆ ನಾಟಕೋತ್ಸವಕ್ಕೆ ಚಾಲನೆ ನೀಡುವರು ಎಂದು ಹೇಳಿದರು.
ಡಾ. ಮಲ್ಲಿಕಾರ್ಜುನ ಪಾಟೀಲ, ಡಾ. ಕೆ.ಎಂ. ಅಂಜನಪ್ಪ, ಎಸ್.ಎಸ್. ಚಿಕ್ಕಮಠ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾಹಿತಿ ಡಾ. ಮಹೇಶ ಹೊರಕೇರಿ ಅಧ್ಯಕ್ಷತೆ ವಹಿಸುವರು. ನಂತರ ಎಲ್.ಜಿ. ದೇವಾಂಗಮಠ ಅವರ ರಚನೆ ಮತ್ತು ನಿರ್ದೇಶನದ 'ನನಗೆಲ್ಲ ಗೊತ್ತೈತಿ' ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಏ. 22ರಂದು ಅಸಂಗತ ಕಥೆ ಆಧರಿಸಿದ ಇದು ಹಿಂಗ್ಯಾಕ್ ಆತು ಹಾಗೂ 23ರಂದು ಹೆಂಡ್ತಿ ಬೇಕು ಹೆಂಡ್ತಿ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಂತರ ನಾಟಕೋತ್ಸವದ ಸಮಾರೋಪ ನಡೆಯಲಿದೆ ಎಂದು ತಿಳಿಸಿದ್ದಾರೆ.
ಅಂದು ಶಿಷ್ಯಬಳಗದಿಂದ ಎಲ್.ಜಿ. ದೇವಾಂಗಮಠರಿಗೆ ಸನ್ಮಾನ ಮತ್ತು ಸಹಾಯಧನ ಸಮರ್ಪಣೆ ನಡೆಯಲಿದೆ. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.