ಧಾರವಾಡ

ಅಸ್ವಸ್ಥರತ್ತ ಕೀಳು ಭಾವನೆ ಸಲ್ಲದು

Published On :

ಹುಬ್ಬಳ್ಳಿ: ಚಲನಚಿತ್ರ ಮಾಧ್ಯಮಗಳು ಮಾನಸಿಕ ರೋಗಿಗಳನ್ನು ಕೆಟ್ಟದಾಗಿ ಬಿಂಬಸುತ್ತಿವೆ, ಇದರಿಂದಾಗಿ ಮನೋರೋಗಿಗಳ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ ಎಂದು ಡಿಮಾನ್ಸ್‌ನ ನಿರ್ದೇಶಕ ಡಾ. ನಾಗರಾಜ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಜನರಲ್ ಪ್ರಾಕ್ಟಿಶನರ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿದ್ದ  34ನೇ ವೈದ್ಯಕೀಯ ಶಿಕ್ಷಣದ ನಿರಂತರ ಕಲಿಕಾ ಕಾರ್ಯಕ್ರಮದ ವಾರ್ಷಿಕೋತ್ಸವ ಉದ್ಘಾಟಿಸಿ  ಅವರು ಮಾತನಾಡಿದರು.
ಮಾನಸಿಕ ರೋಗಿಗಳನ್ನು ಕೀಳಾಗಿ ನೋಡುವಂತೆ ಮಾಡಿದ್ದು ಚಲನಚಿತ್ರ ಮಾಧ್ಯಮ, ಮಾನಸಿಕರೊಗಿಗಳು ಇತರ ರೋಗಿಗಳಂತೆಯೇ ಎಂದು ಭಾವಿಸಬೇಕು. ಇಂದು ಮಾನಸಿಕ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಲಭ್ಯವಿದ್ದು, 15-20 ವರ್ಷಗಳ ಹಿಂದೇ ಇದ್ದ ಪರಿಸ್ಥಿತಿ ಈಗಿಲ್ಲ, ಮಾನಸಿಕ ರೋಗ ಚಿಕಿತ್ಸಕರಿಗೆ ಅತ್ಯುತ್ತಮ ತಂತ್ರಜ್ಞಾನ ಈಗ ಲಭ್ಯವಿದೆ ಎಂದು ಅವರು ಹೇಳಿದರು.
ಮಾನಸಿಕ ರೋಗವನ್ನ್ನು ಔಷಧಿಗಳಿಲ್ಲದೆ ಕೇವಲ, ರೋಗಿಗೆ ಪ್ರೀತಿ ಸಾಂತ್ವನದಿಂದ ಗುಣಪಡಿಸಬಹುದಾಗಿದೆ. ಎಲ್ಲ  ರೀತಿಯ ಮಾನಸಿಕರೋಗಗಳಿಗೆ ಇಂದು ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ. ಹಿಂದೆ ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದವರು ಮಾನಸಿಕ ರೋಗವನ್ನ್ನು ಅಧ್ಯಯನ ಮಾಡಲು ಹಿಂದೇಟು ಹಾಕುತ್ತಿದ್ದರು, ಇಂದು ಸೈಕಿಯಾಟ್ರಿ ವ್ಯಾಸಂಗಕ್ಕೆ ಯುವಕರು ಮುಂದೆ ಬರುತ್ತಿರುವುದು ಉತ್ತಮ ಲಕ್ಷಣ ಎಂದು ನುಡಿದರು.
ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ, ಮಾನವನ ಜೀವನದಲ್ಲಿ ಒತ್ತಡ ಒಂದು ರೀತಿಯಲ್ಲಿ ಒಳ್ಳೆಯದೇ ಇದರಿಂದ ಮನುಷ್ಯ ಅಭಿವೃದ್ಧ್ನಿ ಸಾಧಿಸುತ್ತಾನೆ, ಅಲೋಪಥಿಕ್ ಔಷಧಿಯ ಜತೆ ಜತೆಯಲ್ಲಿಯೇ ವೈದ್ಯರು ಅಯುರ್ವೇದ, ಯೋಗ, ನಿಸರ್ಗ ಚಿಕಿತ್ಸೆ ಬಗ್ಗೆಯು ವೈದ್ಯರು ತಿಳಿ ಹೇಳಬೇಕು ಇದರಿಂದ ಮಾನವನ ಆರೋಗ್ಯದ ಮೇಲೆ ಕಡಿಮೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ.
ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನವ್ನು ಅಭ್ಯಾಸ ಮಾಡುವುದರ ಬಗ್ಗೆ ಒಲವು ತೋರಿಸಬೇಕು ಎಂದು ಹೇಳಿದರು.
ಒತ್ತಡ ಜೀವನವನ್ನ್ನು ನಿರ್ವಹಿಸುವುದು ಹೇಗೆ, ಮಾನಸಿಕ ಒತ್ತಡಕ್ಕೆ ಪರಿಣಾಮಕಾರಿ ಚಿಕಿತ್ಸೆಯ ಬಗ್ಗೆ ನಿಮಾನ್ಸ್ ವೈದ್ಯಕೀಯ ಸಂಸ್ಥೆಯ ಮಾನಸಿಕ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ  ಡಾ. ರಘುರಾಂ ಉಪನ್ಯಾಸ ನೀಡಿದರು. ಈ ಸಂಧರ್ಭದಲ್ಲಿ ಜಿ.ಪಿ.ಎ  ಅಧ್ಯಕ್ಷ ಡಾ.ವಿ.ಬಿ. ನಿಟಾಲಿ, ಕೆ.ಎಂ.ಸಿ ಉಪಾಧ್ಯಕ್ಷ ಡಾ.ಪಿ.ವಿ. ಕಾಂಚಿ, ಡಾ.ವಿ.ಜಿ. ಕುಲಕರ್ಣಿ, ಡಾ. ಭೂಷಣ. ಜಿ  ಸೇರಿದಂತೆ ಇನ್ನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.