ಧಾರವಾಡ

ರಾಜ್ ಜನ್ಮದಿನ: ಜನರಿಗೆ ಗೋದಿ ಹುಗ್ಗಿ ಉಣಿಸಿದ ಅಭಿಮಾನಿ ರಾಮಣ್ಣ

Published On :

ನರೇಗಲ್ಲ: ಅಭಿಮಾನಕ್ಕೆ ಮೇರೆನೇ ಇಲ್ಲವೆನ್ನುವುದಕ್ಕೆ ಸ್ಥಳೀಯ ರಾಮಣ್ಣ ಬೈರಗೊಂಡನೇ ಸಾಕ್ಷಿ. ಇಲ್ಲಿ ಚಿಕ್ಕಹೋಟೆಲ್ ಇಟ್ಟು ವ್ಯಾಪಾರ ಮಾಡುವ ರಾಮಣ್ಣ ಪ್ರತಿವರ್ಷ ರಾಜ್ ಪುಣ್ಯತಿಥಿ ಆಚರಿಸುತ್ತಾ ಬಂದಿದ್ದು, ಈ ವರ್ಷ ಬೃಹತ್ ಪ್ರಮಾಣದಲ್ಲಿ ಮಗನ ಹುಟ್ಟು ಹಬ್ಬದ ಜೊತೆಗೆ ರಾಜ್ ಹುಟ್ಟುಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿದರು. 1 ವರ್ಷದ ಹಿಂದೆ ರಾಜ್ ಹುಟ್ಟುಹಬ್ಬದ ದಿನ ರಾಮಣ್ಣನಿಗೆ ಗಂಡುಮಗು ಜನಿಸಿದ್ದು ಅದಕ್ಕೆ ಮುತ್ತುರಾಜ್ ಎಂದೇ ಹೆಸರಿಟ್ಟಿದ್ದಾನೆ. ಇಂದು ಆತನ ಮೊದಲಹುಟ್ಟುಹಬ್ಬ. ರಾಜ್ ಜನ್ಮದಿನವನ್ನು ಈ ವರ್ಷ ರಾಜ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಗನ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸುವ ಮೂಲಕ ಜನರಿಗೆ ಗೋದಿ ಹುಗ್ಗಿ, ಅನ್ನ ಸಾಂಬಾರಿನ ವ್ಯವಸ್ಥೆ ಮಾಡಿದ್ದರು.
ಕ್ರಿಕೆಟ್: ಹುಬ್ಬಳ್ಳಿ-ಗದಗ ತಂಡಗಳಿಗೆ ಜಯ
ಹುಬ್ಬಳ್ಳಿ: ನಗರದಲ್ಲಿ ಗುರುವಾರ ಆರಂಭವಾದ 14 ವರ್ಷದೊಳಗಿನ ಕೆಎಸ್ಸಿಎ ಧಾರವಾಡ ವಲಯ ಮಟ್ಟದ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯ ಮೊದಲ ದಿನದಾಟದಲ್ಲಿ ಹುಬ್ಬಳ್ಳಿ, ಗದಗ ತಂಡ ಜಯ ಸಾಧಿಸಿವೆ. ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಾರವಾರ ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗದಗ ತಂಡ, 49 ರನ್ ಗೆಲವು ಪಡೆಯಿತು. ವೈಭವ ಬಿದರೂರ (24), ಸಮೀರ ಬಳ್ಳಾರಿ (21), ಮನೋಹರ ಹೊಸಳ್ಳಿ (19) ಆಟದ ನೆರವಿನಿಂದ ಗದಗ ತಂಡ 32 ಓವರ್ಗಳಲ್ಲಿ 118 ರನ್ ಗಳಿಸಿ, ಆಲೌಟಾಯಿತು. ಕಾರವಾರ ತಂಡದ ತೇಜಸ್ ನಾಯಕ 7 ಓವರ್ಗಳಲ್ಲಿ 18 ರನ್ ನೀಡಿ 5 ವಿಕೆಟ್ ಕಬಳಿಸಿದರು. ರಾಹುಲ್ ನಾಯಕ, ವಿಘ್ನೇಶ ಮೆಹತಾ ತಲಾ 2 ವಿಕೆಟ್ ಪಡೆದರು. ಕಾರವಾರ ತಂಡ 27.1 ಓವರ್ಗಳಲ್ಲಿ 69 ರನ್ಗೆ ಸರ್ವಪತನ ಕಂಡಿತು. ಸನ್ನಿ ಭೋವಿ (11 ರನ್) ಎರಡಂಕೆ ಮೊತ್ತ ತಲುಪಿದರು. ಗದಗ ತಂಡದ ಸಮೀರ ಬಳ್ಳಾರಿ 4 ವಿಕೆಟ್ ಪಡೆದರೆ, ರಾಹಿಲ್ ಕಾಗದಗಾರ, ತೌಫಿಕ್ ಬಳ್ಳಾರಿ ತಲಾ 2 ವಿಕೆಟ್ ಪಡೆದರು. ಕೆಎಸ್ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಧಾರವಾಡ ವಿರುದ್ಧ ಹುಬ್ಬಳ್ಳಿ ತಂಡ 2 ವಿಕೆಟ್ ಜಯ ಪಡೆಯಿತು. ಟಾಸ್ ಗೆದ್ದು ಬ್ಯಾಟ್ ಮಾಡಿದ ಧಾರವಾಡ ತಂಡ 40 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ಸುಧಾನವ್ ಕುಲಕರ್ಣಿ (58) ಉತ್ತಮ ಆಟ ಪ್ರದರ್ಶಿಸಿದರು. ಹುಬ್ಬಳ್ಳಿ ತಂಡದ ಸಾತ್ವಿಕ್ ಆರ್.ಜಿ. 2 ವಿಕೆಟ್ ಪಡೆದರೆ, ಮುದಸಾರ ಶೇಖ್, ದರ್ಶನ್ ಭಾವೆ ತಲಾ 1 ವಿಕೆಟ್ ಪಡೆದರು. ಹುಬ್ಬಳ್ಳಿ ತಂಡ 40 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ, ಗೆದ್ದಿತು. ಸಾಯಿ ಪ್ರಸನ್ 42, ಸಾತ್ವಿಕ್ ಆರ್.ಜಿ. 20 ರನ್ ಗಳಿಸಿದರು. ಧಾರವಾಡ ತಂಡ ವಿಶಾಲ್ ಹುಬ್ಬಳ್ಳಿ 1 ವಿಕೆಟ್ ಹಾಗೂ ಹರ್ಷಾ ಕನವಳ್ಳಿ ಮತ್ತು ಸುಧಾನವ್ ಕುಲಕರ್ಣಿ ತಲಾ 2 ವಿಕೆಟ್ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.