ಧಾರವಾಡ

ಮೌಲ್ಯವೃದ್ಧಿ ಉದ್ಯಮ ಬೆಳೆಯಲಿ: ಜಯಂತ್

Published On :

ಹುಬ್ಬಳ್ಳಿ:  ಉದ್ಯಮ ಕ್ಷೇತ್ರ ಕೇವಲ ಹಣಗಳಿಕೆಗೆ ಮಾತ್ರ ಸೀಮಿತವಾಗಿರದೆ ಮೌಲ್ಯವೃದ್ಧಿಸಿಕೊಂಡು ಹೋಗುವುದಾಗಿದೆ ಎಂದು ಆರ್ಎಡಿ ಡಾಟಾ ಕಮ್ಯುನಿಕೇಶನ್ ಇಂಡಿಯಾದ ಅಧ್ಯಕ್ಷ ಜಯಂತ್ ಡಿಯೋ ಹೇಳಿದರು.ಟೈ ಹುಬ್ಬಳ್ಳಿ ಹಾಗೂ ಕೆಎಲ್ಇ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಉದ್ಯಮ ಕ್ಷೇತ್ರದಲ್ಲಿ ಎದುರಾಗುವ ಸವಾಲನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಅದನ್ನು ಪರಿಹರಿಸಲು ಕಠಿಣ ಶ್ರಮವಹಿಸಿದಾಗ ಯಶಸ್ಸು ಕಟ್ಟಿಟ ಬುತ್ತಿ ಎಂದೂ ಡಿಯೋ ವಿಶ್ವಾಸದಿಂದ ಹೇಳಿದರು. ಉದ್ಯಮ ಕ್ಷೇತ್ರದಲ್ಲಿ ಸೋಲು ಎಂಬುದು ಇಲ್ಲವೇ ಇಲ್ಲ. ಯಾವುದೇ ಕಾರ್ಯದಲ್ಲಿ ಉದ್ಯಮಿ ವಿಫಲನಾದಾಗ ಅದರಿಂದಲೇ ಹೊಸ ಕಲ್ಪನೆ ಮೂಡುತ್ತದೆ ಎಂದರು. ಯುವ ಬರಹಗಾರರು ಆಗಿರುವ ಉದ್ಯಮಿ ವಿಶ್ವಾಸ ಮುದಗಲ್ ಮಾತನಾಡಿದರು.


ಶಿವಾಜಿ ಜಯಂತಿ
 ಪ್ರಯುಕ್ತ ಇಂದು ಬೈಕ್ ರ್ಯಾಲಿ

ಹುಬ್ಬಳ್ಳಿ:  ನಗರದ ಕ್ರಾಂತಿಸೇನಾ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಮಹಾರಾಜರ ಜಯಂತ್ಯೋತ್ಸವ ನಿಮಿತ್ತ ಏ. 27ರಂದು ಮಧ್ಯಾಹ್ನ 3.30ಕ್ಕೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಹಳೆಹುಬ್ಬಳ್ಳಿ ಅಗಸಾರ ಹೊಂಡದ ಶ್ರೀ ಭವಾನಿ ಶಂಕರ ಪುರಾತನ ದೇವಸ್ಥಾನದಿಂದ ಬೈಕ್ ರ್ಯಾಲಿ ಆರಂಭಗೊಳ್ಳಲಿದೆ. ಸಮಸ್ತ ಹಿಂದುಪರ ಸಂಘಟನೆಯ ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕೆಂದು ಸೇನಾದ ರಾಜ್ಯಾಧ್ಯಕ್ಷ ವಿಠ್ಠಲ ಪವಾರ ವಿನಂತಿಸಿದ್ದಾರೆ. ಶ್ರೀ ಭವಾನಿ ಶಂಕರ ದೇವಸ್ಥಾನದಿಂದ ರ್ಯಾಲಿ ಆರಂಭಗೊಂಡು, ಪ್ರಮುಖ ಪ್ರದೇಶಗಳಲ್ಲಿ ರ್ಯಾಲಿ ಸಂಚರಿಸಿ ದಾಜಿಬಾನಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನದ ಬಳಿ ಮುಕ್ತಾಯಗೊಳ್ಳಲಿದೆ. ಮುಖ್ಯಅತಿಥಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪ್ರದೀಪ ಶೆಟ್ಟರ್, ಶಂಕರಪ್ಪ ಬಿಜವಾಡ, ಲಿಂಗರಾಜ ಪಾಟೀಲ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.