ಧಾರವಾಡ

ಪ್ರಯಾಣಿಕನಿಂದ ನಿರ್ವಾಹಕನ ಥಳಿತ

Published On :

ಹುಬ್ಬಳ್ಳಿ: ಫುಟ್ ಬೋರ್ಡ್ ಮೇಲೆ ನಿಲ್ಲಬೇಡಿ ಒಳಗೆ ಬನ್ನಿ ಎಂದು ಹೇಳಿದ ನಿರ್ವಾಹಕನೊಬ್ಬನನ್ನು ಪ್ರಯಾಣಿಕನೊಬ್ಬ ಥಳಿಸಿದ್ದಾನೆ.  ಹುಬ್ಬಳ್ಳಿಯಿಂದ ಬ್ಯಾಹಟ್ಟಿಗೆ ಹೋಗುವ ಬಸ್ನ ನಿರ್ವಾಹಕ ದಾವಲಸಾಬ್ ಕಳ್ಳಿಮನಿ ಅವರನ್ನು ಕುಸುಗಲ್ನ ಪ್ರಯಾಣಿಕ ಹನುಮಂತ ಬಸಪ್ಪ ಮೋಗಲಿ ಥಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಇಲ್ಲಿನ ಹಳೇ ಬಸ್ ನಿಲ್ದಾಣದಿಂದ ಬ್ಯಾಹಟ್ಟಿಗೆ ಹೋರಟ ಬಸ್ನಲ್ಲಿ ಪ್ರಯಾಣ ಆರಂಭಿಸಿದ ಹನುಮಂತಪ್ಪ ಫುಟ್ ಬೋರ್ಡ್ ಮೇಲೆ ನಿಂತಿದ್ದರು. ಸುರಕ್ಷತೆ ಗಮನದಲ್ಲಿರಿಸಿಕೊಂಡು ಫುಟ್ಬೋರ್ಡ್ ಮೇಲೆ ನಿಲ್ಲಬೇಡಿ ಎಂದು ಹೇಳಿದ ಕಂಡಕ್ಟರ್ ದಾವಲಸಾಬ್ನೊಂದಿಗೆ ಜಗಳ ತೆಗೆದಿದ್ದಾನೆ. ಕುಸುಗಲ್ನಲ್ಲಿ ಇಳಿದ ಹನುಮಂತಪ್ಪ ಬ್ಯಾಹಟ್ಟಿಯಿಂದ ಮರಳುತ್ತಿದ್ದ ಬಸ್ ತಡೆದು ಹಲ್ಲೆ ಮಾಡಿದ್ದಾನೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಂಗಡಿ ಕಳ್ಳತನ
ಕಲಘಟಗಿ:  ಪಟ್ಟಣದ ದತ್ತಾತ್ರೇಯ ಅಣವೇಕರ ಎಂಬುವರ ಬಟ್ಟೆ ಅಂಗಡಿ ಕಳ್ಳತನವಾದ ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಭಾನುವಾರ ರಾತ್ರಿ ಅಂಗಡಿಯ ಮೇಲ್ಛಾವಣಿ ಮುರಿದು ನುಗ್ಗಿದ ಕಳ್ಳರು, ಲಕ್ಷಾಂತರ ರು. ಗಳ ಬಟ್ಟೆಗಳನ್ನು ಕಳ್ಳತನ ಮಾಡಿದ್ದಾರೆಂದು ಅಂಗಡಿಯ ಮಾಲೀಕರು ದೂರು ಸಲ್ಲಿಸಿದ್ದಾರೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.