ಇಂದು ಉಚಿತ ನೇತ್ರ ತಪಾಸಣಾ ಶಿಬಿರ
ಹುಬ್ಬಳ್ಳಿ: ಉಣಕಲ್ ಕ್ರಾಸ್ನ ಕಿರೇಸೂರ ಕಾಂಪ್ಲೆಕ್ಸ್ನಲ್ಲಿರುವ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ ಹಾಗೂ ಶ್ರೀ ಜಗದ್ಗುರು ಮೂರುಸಾವಿರ ಮಠದ ಸಂಯುಕ್ತಾಶ್ರಯದಲ್ಲಿ ಏ. 30 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಅಂಗವಾಗಿ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರಸ್ವಾವುಜಿ ವಹಿಸಲಿದ್ದಾರೆ. ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರು ಶಿಬಿರ ನಡೆಸಿಕೊಡಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ಮಾಹಿತಿಗೆ ದೂ. (0836) 2272345, 2272728 ಅಥವಾ ಮೊ. 8722700866ಗೆ ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
ನೇಣು ಬಿಗಿದು ಆತ್ಮಹತ್ಯೆ
ಹುಬ್ಬಳ್ಳಿ: ಸಾರಾಯಿ ವ್ಯಸನಕ್ಕೆ ಬಿದ್ದು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋಕುಲ ರಸ್ತೆಯ ಲಕ್ಷ್ಮಿ ನಗರ ನಿವಾಸಿ ಶಂಕರಸಾ ಯಲ್ಲೂಸಾ ಖಟವಟೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅತಿಯಾದ ಸಾರಾಯಿ ಸೇವನೆ ಮತ್ತು ಬೀಡಿ ಚಟದಿಂದಾಗಿ ಮಾನಸಿಕವಾಗಿ ಆಸ್ವಸ್ಥಗೊಂಡಿದ್ದ ಶಂಕರಸಾ ತಮ್ಮ ಮನೆಯ ಆವರಣದಲ್ಲಿರುವ ಬಾವಿಯ ಗ್ರಿಲ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಮಾರಾಟ: ಬಂಧನ
ಧಾರವಾಡ: ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯ ಕಮಡೊಳ್ಳಿ ಗ್ರಾಮದ ಮೈಲಾರಿ ಹೊಟೇಲ್ ಬಳಿ ಮಂಗಳವಾರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಮಡೊಳ್ಳಿಯ ಶಾಂತು ಮಹಾದೇವಪ್ಪ ಬಾರಕೇರ, ಕುಂದಗೋಳದ ಸುರೇಶ ಕಲಾಲ ಬಂಧಿತ ಆರೋಪಿಗಳು. ಅವರಿಂದ ರು. 4,972 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಹೊಡೆದಾಟ: ಬಂಧನ
ಕಲಘಟಗಿ: ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ಮಲ್ಲೆಶಪ್ಪ ಚುಳಕಿ, ಬಸವಣ್ಣೆಪ್ಪ ಸತ್ತೂರ ಎಂಬುವರು ದೂರುಪ್ರತಿ ದೂರುಗಳನ್ನು ಠಾಣೆಯಲ್ಲಿ ದಾಖಲಿಸಿದ್ದಾರೆ. ಘಟನೆ ಸಂಭವಿಸುತ್ತಿದಂತೆಇನ್ಸ್ಪೆಕ್ಟರ್ ಮಂಜುನಾಥ ನಡುವಿಮನಿ, ಗ್ರಾಮದಲ್ಲಿ ಬೀಗಿ ಬಂದೊಬಸ್ತ್ ಏರ್ಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಪ್ಪ ಸತ್ತೂರ, ಕಲ್ಲಪ್ಪ ಸತ್ತೂರ, ಬಸವರಾಜ ಸತ್ತೂರ, ಮಂಜುನಾಥ ಸತ್ತೂರ, ಬಸವರಾಜ ಅಕ್ಕಿ, ಕೃಷ್ಣಾ ಚುಳಕಿ, ಮಲ್ಲೇಶಪ್ಪ ಚುಳಕಿ, ಪ್ರಹ್ಲಾದ ಚುಳಕಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾರಿಹಾಳ: ಯುವಕ, ಯುವತಿ ನಾಪತ್ತೆ
ಹುಬ್ಬಳ್ಳಿ: ತಾರಿಹಾಳ ಗ್ರಾಮದ ಓರ್ವ ಯುವತಿ ಮತ್ತು ಸುಳ್ಳ ಗ್ರಾಮದ ಓರ್ವ ಯುವಕ ನಾಪತ್ತೆಯಾಗಿರುವ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾರಿಹಾಳ ಗ್ರಾಮದ ನೇತ್ರಾವತಿ ಬಸಪ್ಪ ಅರಿವಾಳ ಎಂಬ ಯುವತಿ ಮನೆಯಲ್ಲಿ ಹುಬ್ಬಳ್ಳಿ ಹೋಗಿ ತನ್ನ ಸ್ನೇಹಿತೆಯರಿಗೆ ಮತ್ತು ಬಂಧು ಬಳಗಕ್ಕೆ ತನ್ನ ಮದುವೆಯ ಆಮಂತ್ರಣ ನೀಡಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ಇನ್ನೂ ಮನೆಗೆ ಮರಳಿಲ್ಲ ಎಂದು ಯುವತಿಯ ತಾಯಿ ಮಲ್ಲವ್ವ ಬಸಪ್ಪ ಅರಿವಾಳ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಸುಳ್ಳ ಗ್ರಾಮದ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ಗಂಗಾಧರ ವಿರೂಪಾಕ್ಷಪ್ಪ ಗೌರಿ ಎಂಬ ಯುವಕ ಊಟಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು ಇಲ್ಲಿಯವರೆಗೆ ಮನೆಗೆ ಮರಳಿಲ್ಲ ಎಂದು ಯುವಕನ ತಂದೆ ವಿರೂಪಾಕ್ಷಪ್ಪ ಕಲ್ಲಪ್ಪ ಗೌರಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

