ಅಭಿಮಾನಿ ದೇವರುಗಳ ದರ್ಶನ ಸಿಕ್ಕಿದ್ದೇ ದೊಡ್ಡ ಪ್ರಶಸ್ತಿ: ಪುನೀತ್ರಾಜಕುಮಾರ್
ಧಾರವಾಡ: ರಾಗ ರತಿಗೆ ರಂಗೇರ ತೊಡಗಿದ್ದ ಗೋಧೋಳಿ ಸಮಯದಲ್ಲಿ ಧಾರವಾಡದ ಕರ್ನಾಟಕ ಕಾಲೇಜು ಮೈದಾನಕ್ಕೆ ವಿವಿಧೆಡೆಯಿಂದ ಸಾವಿರಾರು ಸಿನಿ ಪ್ರಿಯರ ಲಗ್ಗೆ ಇಟ್ಟಿದ್ದರು. ತಮ್ಮ ಅಚ್ಚುಮೆಚ್ಚಿನ ಸಿನಿಮಾ ತಾರೆಯರನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಸಿನಿ ಅಭಿಮಾನಿಗಳ ಮುಖದ ಮೇಲೆ ಮಂದಸ್ಮಿತ ಲಾಸ್ಯವಾಡುತ್ತಿತ್ತು.
ಮೊದಲ ಬಾರಿಗೆ ಧಾರವಾಡದಲ್ಲಿ ವಾರ್ತಾ ಇಲಾಖೆಯು ಭಾನುವಾರ ಸಂಜೆ ಹಮ್ಮಿಕೊಂಡಿದ್ದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಡು ಬಂದ ದೃಶ್ಯವಿದು. ಇಷ್ಟು ದಿನ ಬರೀ ಟಿವಿ ಹಾಗೂ ಸಿನಿಮಾ ಮಂದಿರಗಳ ಪರದೆ ಮೇಲೆ ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಿ ಒಳಗೊಳಗೆ ಆನಂದಿಸಿದ್ದ ಧಾರವಾಡದ ಜನತೆ ಭಾನುವಾರ ಹತ್ತಿರದಿಂದ ನೋಡಿ ಪುಳಕಿಕರಾದರು. ಅದರಲ್ಲೂ ಅತ್ಯುತ್ತಮ ನಟ, ನಟಿ ಪ್ರಶಸ್ತಿಗೆ ಭಾಜನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಮ್ಯಾ ಅವರನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದರು.
2010ರ ಅತ್ಯುತ್ತಮ ನಟ ಸುಬ್ಬಯ್ಯ ನಾಯ್ಡು ಪ್ರಶಸ್ತಿ ಪಡೆದ ಪುನೀತ್ ರಾಜಕುಮಾರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಧಾರವಾಡದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ಹಾಗೂ ಅಭಿಮಾನಿ ದೇವರುಗಳ ದರ್ಶನ ಸಿಕ್ಕಿದ್ದೇ ದೊಡ್ಡ ಪ್ರಶಸ್ತಿ. ಧಾರವಾಡಿಗರು ಸದಾ ಈ ಪ್ರೀತಿ- ವಿಶ್ವಾಸ ಚಿತ್ರರಂಗ ಮೇಲೆ ಇಟ್ಟಿರುವುದನ್ನು ಯಾವತ್ತೂ ಮರೆಯೋದಿಲ್ಲ. ಧಾರವಾಡದಲ್ಲಿ ಆದಷ್ಟು ಬೇಗ ಒಂದು ಶೂಟಿಂಗ್ ಆಗಲಿ. ಎಲ್ಲ ಅಭಿಮಾನಿಗಳ ಜತೆಗೆ ಸಮಯ ಕಳೆಯುತ್ತೇನೆ ಎಂದಾಗ ಚಪ್ಪಾಳೆಯ ಸುರಿಮಳೆ.
ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

