ಧಾರವಾಡ

ನಿರೀಕ್ಷೆ ಮಟ್ಟಕ್ಕೇರದ ಪ್ರಶಸ್ತಿ ಪ್ರದಾನ ಸಮಾರಂಭ

Published On :

ಧಾರವಾಡ: ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದ ನೃತ್ಯ ಕಾರ್ಯಕ್ರಮಗಳು ಸೇರಿದ್ದ ಸಾವಿರಾರು ಜನರ ನಿರೀಕ್ಷೆಗೆ ತಕ್ಕಂತೆ ಮೂಡಿ ಬರದೇ ನಿರಾಸೆ ಉಂಟು ಮೂಡಿದವು.
ಇಡೀ ಕಾರ್ಯಕ್ರಮ ಅಷ್ಟೇನೂ ರಸವತ್ತಾಗಿ ಮೂಡಿ ಬರದ ಕಾರಣ ಬಹಳಷ್ಟು ನಿರೀಕ್ಷೆ ಇಟ್ಟು ಬಂದಿದ್ದ ಪ್ರೇಕ್ಷಕರು ಸಮಾರಂಭದ ಮಧ್ಯದಲ್ಲಿಯೇ ಹೊರ ನಡೆದರು. ದೀರ್ಘವಾದ ಪ್ರಶಸ್ತಿ ಪ್ರದಾನ ಸಮಾರಂಭದಿಂದ, ಪ್ರಶಸ್ತಿ ಪುರಸ್ಕೃತರ ಕುರಿತಂತೆ ಧ್ವನಿಮುದ್ರಿತ ವಿವರಣೆಯಲ್ಲಿ ತಾಂತ್ರಿಕ ಅಡಚಣೆಗಳೂ ಕಂಡು ಬಂದಿದ್ದರಿಂದ ಕಾರ್ಯಕ್ರಮದ ಓಘಕ್ಕೆ ಅಲ್ಲಲ್ಲಿ ತಡೆ ಉಂಟಾಗುತ್ತಿತ್ತು.   ಪ್ರಶಸ್ತಿ ಪ್ರದಾನ ಮಧ್ಯ ಮಧ್ಯ ಹರ್ಷ  ತಂಡದವರು ಬೇಂದ್ರೆಯವರ ಕೆಲವು ಗೀತೆಗಳಿಗೆ ನೃತ್ಯ ಸಂಯೋಜಿಸಿ ಪ್ರದರ್ಶಿಸಿದರು. ಮೂ ಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ.. ಇನ್ನೂ ಯಾಕ ಬರಲಿಲ್ಲಾಂವ ಹುಬ್ಬಳ್ಳಿಯಾಂವ.. ಮತ್ತು ಇಳಿದು ಬಾ ತಾಯಿ... ಗೀತೆಗಳಿಗೆ ಹೆಜ್ಜೆ ಹಾಕಲಾಯಿತು.
ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ಹರ್ಷಿಕಾ ಪೂಣಚ್ಚ ಅವರು ಹಾಡೊಂದಕ್ಕೆ ಹೆಜ್ಜೆ ಹಾಕಿ ಎಲ್ಲರಲ್ಲಿ ಸಂಚಲನ ಮೂಡಿಸಿದರು. ಇನ್ನೊಂದು ಜನಪ್ರಿಯ ಚಿತ್ರ ಸಂಜು ವೆಡ್ಸ್ ಗೀತಾ ಚಿತ್ರದ ಹಾಡಿಗೂ ಹರ್ಷಿಕಾ ಮತ್ತು ತಂಡ ಹೆಜ್ಜೆ ಹಾಕಿತು. ಬಹುತೇಕ ಪ್ರೇಕ್ಷಕರು ಪ್ರಶಸ್ತಿ ಪಡೆದ ಕಲಾವಿದರಾದ ಪುನೀತ ರಾಜಕುಮಾರ, ರಮ್ಯಾ, ಅರ್ಜುನ ಸರ್ಜಾ ಇತರರು ಹಾಡಿ ಕುಣಿಯುತ್ತಾರೆ, ಕೊನೆ ಚಿತ್ರವೊಂದರ ಡೈಲಾಗ್ ಆದರೂ ಹೇಳುತ್ತಾರೆಂದು ನಿರೀಕ್ಷೆ ಇಟ್ಟಿದ್ದರು. ಆದರೆ, ಪ್ರತಿಯೊಬ್ಬರೂ ಪ್ರಶಸ್ತಿ ಬಂದಿರುವ ಸಂತೋಷವನ್ನು ಹಂಚಿಕೊಂಡು ವೇದಿಕೆಯಿಂದ ನಿರ್ಗಮಿಸಿದ್ದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ, ಇತರ ಸಚಿವರು, ಶಾಸಕರು, ರಾಜಕಾರಣಿಗಳು ಪ್ರಶಸ್ತಿ ಪ್ರದಾನ ಮುಗಿಯುತ್ತಿದ್ದಂತೆ ವೇದಿಕೆಯಿಂದ ನಿರ್ಗಮಿಸಿದ್ದು ಕೂಡಾ ಸಮಾರಂಭದ ಗಂಭೀರತೆ ಅಡ್ಡಿ ಮಾಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.