ಧಾರವಾಡ

ಧಾರವಾಡದಲ್ಲೂ ಬ್ಯಾಂಕ್ ನೌಕರರ ಧರಣಿ

Published On :

ಧಾರವಾಡ: ವೇತನ ಪರಿಷ್ಕರಣೆಗೆ ಆಗ್ರಹಿಸಿ ನಗರದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಿಬ್ಬಂದಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಎದುರು ಸೋಮವಾರ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿಂಗ್ ನೌಕರರ ಮುಖ್ಯಸ್ಥ ಸಿ. ಭಗವಾನ್, ವಿದೇಶಿ ಬಂಡವಾಳ ಶಾಹಿಗಳು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬರದಂತೆ ಸರ್ಕಾರ ನೋಡಿಕೊಳ್ಳಬೇಕು. ಅಲ್ಲದೇ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ. 11ರಂದು ಬ್ಯಾಂಕ್ಗಳ ಸೇವೆ ಸ್ಥಗಿತಗೊಳಿಸಿ, ಸುಭಾಷ್ ರಸ್ತೆಯ ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟಿಸಲಾಗುವುದು ಎಂದು ಹೇಳಿದರು. ಬ್ಯಾಂಕ್ ನೌಕರರ ಮುಖ್ಯಸ್ಥ ಆರ್.ಕೆ. ಬಸವರಾಜ, ಸರ್ಕಾರ ಬ್ಯಾಂಕುಗಳ ವಿಲೀನ ಮಾಡುವ ಕೆಟ್ಟ ವಿಚಾರ ಮಾತನಾಡುವುದನ್ನು ಬಿಡಬೇಕು. ವೇತನ ಪರಿಷ್ಕರಣೆ ವಿಷಯವನ್ನು ಆದಷ್ಟು ಬೇಗನೆ ಇತ್ಯರ್ಥಗೊಳಿಸಬೇಕು ಎಂದರು. ಈ ಸಂದರ್ಭದಲ್ಲಿ ಧಾರವಾಡದ ಸುಮಾರು 400 ಬ್ಯಾಂಕ್ ನೌಕರರು ಸೇರಿದ್ದರು. ಈ ವಿಷಯ ಇತ್ಯರ್ಥಗೊಳ್ಳದಿದ್ದರೆ, ಮಾರ್ಚ್ನಲ್ಲಿ ಉಗ್ರ ಹೊರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಬೆಂಡಿಗೇರಿ, ಏರಿ, ಸಾಂಬ್ರಾಣಿ, ಪ್ರದೀಪ್ ಇದ್ದರು. ಬ್ಯಾಂಕ್ ಬಂದ್ ಆಗಿರುವುದು, ಕೆಲವೆಡೆ ಎಟಿಎಂ ಕೇಂದ್ರಗಳು ಬಂದ್ ಆಗಿದ್ದರಿಂದ ಗ್ರಾಹಕರಿಗೆ ತೊಂದರೆಯಾದ ಘಟನೆಗಳು ನಡೆದವು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.