ಧಾರವಾಡ

ಶಾರ್ಟ್ ಸರ್ಕ್ಯೂಟ್: ಇಬ್ಬರ ಸಜೀವ ದಹನ

Published On :

ಹುಬ್ಬಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿನ ಮೂರು ಮನೆಗಳಿಗೆ ಬೆಂಕಿ ತಗುಲಿದ ಪರಿಣಾಮ ಇಬ್ಬರು ಮಕ್ಕಳು ಸಜೀವ ದಹನಗೊಂಡಿದ್ದಾರೆ. ಭಾನುವಾರ ರಾತ್ರಿ ಹಿರೇನರ್ತಿ ಗ್ರಾಮದ ಅಮೃತಪ್ಪ ಸಂಕಣ್ಣವರ, ಹನುಮಂತಪ್ಪ ಸಂಕಣ್ಣವರ ಹಾಗೂ ಶಿವಪ್ಪ ಸಂಕಣ್ಣವರ ಅವರ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮಕ್ಕಳಾದ ಬಸವರಾಜ ಶಂಕ್ರಪ್ಪ ಸಂಕಣ್ಣವರ (12), ಸತೀಶ ಶಂಕ್ರಪ್ಪ ಸಂಕಣ್ಣವರ (8) ಸಜೀವ ದಹನಗೊಂಡಿದ್ದಾರೆ. ಪಾಲಕರು ರಾತ್ರಿ ವೇಳೆ ಇವರನ್ನು ಮನೆಯಲ್ಲಿ ಮಲಗಿಸಿ ಗೋದಿ ಕೀಳುವುದಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿರುವುದನ್ನು ನೋಡಿದ ಶಾಂತವ್ವ ಶಂಕ್ರಪ್ಪ ಸಂಕಣ್ಣವರ ಮತ್ತು ಕುಮಾರ್ ನೀಲಿ ಎಂಬ ಮಕ್ಕಳು ಗಾಬರಿಯಿಂದ ಮನೆಗೆ ಹೊರಗೆ ಓಡಿ ಬಂದು ಸಹಾಯಕ್ಕೆ ಕಿರುಚಿಕೊಂಡಿದ್ದಾರೆ. ಸಂಕಣ್ಣವರ ಮನೆಯಲ್ಲಿನ ನಗದು, ಚಿನ್ನ, ಮೆಣಸಿನಕಾಯಿ, ದವಸ ಧಾನ್ಯ ಸೇರಿದಂತೆ ಸುಮಾರು 25-25 ಲಕ್ಷ ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿರಬಹುದು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿ ಎಂ.ಆರ್. ಹಾತರಕಿ ಮತ್ತು ಸಿಬ್ಬಂದಿ ಎಂ.ಎಂ. ಭುಜಂಗನವರ, ವಿ.ಎಸ್. ಪಾಟೀಲ, ಎಂ.ಎಂ. ಕಿಲ್ಲೇದಾರ, ಎಸ್.ಡಿ. ದೊಡಮನಿ, ಎಂ.ಜಿ. ಹಲಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಸಿ.ಎಸ್. ಸಿವಳ್ಳಿ, ತಹಸೀಲ್ದಾರ್ ಎಚ್.ಎಂ. ಓಲೇಕಾರ, ಸಿಪಿಐ ಮುತ್ತಪ್ಪ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.