ಕುಂದಗೋಳ ತಾಲೂಕು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶೀಫ್ರದಲ್ಲೇ ಚಾಲನೆ: ಶಿವಳ್ಳಿ
ಕುಂದಗೋಳ: ತಾಲೂಕಿನ ರಸ್ತೆ ಅಭಿವೃದ್ಧಿಗೆ ರು. 16 ಕೋಟಿ ಬಿಡುಗಡೆಯಾಗಿದ್ದು ಶೀಫ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಸಿ.ಎಸ್. ಶಿವಳ್ಳಿ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಗುಡೇನಕಟ್ಟಿಯಿಂದ ಕುಂದಗೋಳವರೆಗಿನ ರಸ್ತೆ 7.5 ಕಿಮೀ ಉದ್ದವಿದ್ದು ಈ ಪೈಕಿ 6 ಕಿಮಿ ಉದ್ದದ ರಸ್ತೆ ಕಾಮಗಾರಿಗೆ ರು. 2.50 ಕೋಟಿ ಮಂಜೂರಾಗಿದೆ. ಮಿಕ್ಕ 1.5 ಕಿಮೀ ರಸ್ತೆ ಅಭಿವೃದ್ಧಿಗೆ ರು. 75 ಲಕ್ಷ ಬೇಕಾಗಲಿದ್ದು ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಇದೇ ರೀತಿಯಾಗಿ ಗುಡಗೇರಿಯಿಂದ ಗೌಡಗೇರಿವರೆಗಿನ ರಸ್ತೆ 7.9 ಕಿಮೀ ಉದ್ದವಿದೆ. ಈ ಪೈಕಿ 6 ಕಿಮೀ ರಸ್ತೆ ಅಭಿವೃದ್ಧಿಗೆ ರು. 2 ಕೋಟಿ ಮಂಜೂರಾಗಿದೆ. ಉಳಿದ 1.9 ಕಿಮೀ ರಸ್ತೆ ಕಾಮಗಾರಿಗೆ ಅವಶ್ಯಕವಿರುವ ರು. 1.50 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ತಿಮ್ಮಾಪುರದಿಂದ ಇಂಗಳಗಿ ಮಧ್ಯದ 6 ಕಿಮೀ ಉದ್ದದ ರಸ್ತೆಗೆ ರು. 3.50 ಕೋಟಿ ಮಂಜೂರಾಗಿದೆ. ಬೆನಕನಹಳ್ಳಿಯಿಂದ ಯರಗುಪ್ಪಿ ಮಾರ್ಗವಾಗಿ ಎನ್‌ಎಚ್ 63 (ಗದಗ ರಸ್ತೆ)ವರೆಗಿನ ಒಟ್ಟು 10.7 ಕಿಮೀ ರಸ್ತೆ ಅಭಿವೃದ್ಧಿಗೆ ರು. 8 ಕೋಟಿ ಮಂಜೂರಾಗಿದೆ ಎಂದೂ ಶಿವಳ್ಳಿ ವಿವರಿಸಿದರು.
ಕೇಂದ್ರ ರಸ್ತೆ ಕಾಮಗಾರಿ ಅನುದಾನದಲ್ಲಿ ಪಶುಪತಿಹಾಳದಿಂದ ರೊಟ್ಟಿಗವಾಡವರೆಗಿನ ರಸ್ತೆ ಅಭಿವೃದ್ಧಿಗೆ ರು. 3.50 ಕೋಟಿ, ನೂಲ್ವಿಯಿಂದ ಕುರಡಿಕೇರಿವರೆಗಿನ ರಸ್ತೆ ಕಾಮಗಾರಿಗೆ ರು. 3 ಕೋಟಿ ಮಂಜೂರಾಗಿದೆ.
ನಬಾರ್ಡ್ ಯೋಜನೆಯಡಿ ಮಂಜೂರಾದ ಕೂಬಿಹಾಳದ ಒಳರಸ್ತೆ ಕಾಮಗಾರಿಗೆ ರು. 90 ಲಕ್ಷ, ಇಂಗಳಗಿ ಗ್ರಾಮದ ಒಳರಸ್ತೆಗೆ ರು. 65 ಲಕ್ಷಗಳ ಕಾಮಗಾರಿಗೆ ಶೀಫ್ರದಲ್ಲೇ ಚಾಲನೆ ನೀಡಲಾಗುವುದೆಂದರು.
ಲೋಕೋಪಯೋಗಿ ಇಲಾಖೆ ಅಧಿಕಾರಿ ಎ.ಆರ್. ಕುಲಕರ್ಣಿ, ಜಿಪಂ ಎಂಜಿನಿಯರ್ ಆರ್.ಎನ್. ಹೆಬ್ಬಾರ್ ಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

