ಧಾರವಾಡ

ದಾಸ ಸಾಹಿತ್ಯದಲ್ಲಿ ಎಲ್ಲ ವಿಧದ ಸಾಹಿತ್ಯ

Published On :

ಧಾರವಾಡ: ಜಗತ್ತಿನ ಎಲ್ಲ ರೀತಿಯ ಸಾಹಿತ್ಯಗಳಲ್ಲಿ ಅಭಿವ್ಯಕ್ತಗೊಂಡಿರುವ ಎಲ್ಲ ಪ್ರಕಾರಗಳು ದಾಸ ಸಾಹಿತ್ಯದಲ್ಲಿವೆ. ಇದು ತತ್ವಜ್ಞಾನಕ್ಕೆ ಮೀಸಲವಾಗದೇ, ವೈಭವಪೂರ್ಣ ನವರಸಗಳು ದಾಸ ಸಾಹಿತ್ಯದಲ್ಲಿ ಲಭ್ಯವಿದೆ ಎಂದು ಧಾರವಾಡ ಜೆಎಸ್‌ಎಸ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಪ್ರೊ. ವೆಂಕಟನರಸಿಂಹಾಚಾರ್ಯ ಜೋಶಿ ಹೇಳಿದರು. ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನ ಧಾರವಾಡ ಉತ್ತರಾಧಿಮಠದ ದತ್ತಿ ಅಂಗವಾಗಿ ಹಮ್ಮಿಕೊಂಡ ದಾಸ ವೈಭವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಸಾಹಿತ್ಯದಲ್ಲಿ ಭಕ್ತಿರಸ ಅಡಗಿಸಿಕೊಂಡಿರುವುದೇ ದಾಸ ಸಾಹಿತ್ಯವೆಂದು ತಿಳಿಸಿದರು. ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ತೆಲುಗು, ತಮಿಳು ಸಾಹಿತ್ಯದ ಹಾಡುಗಳನ್ನು ಹಾಡಲಾಗುವುದಿಲ್ಲ. ಅದಕ್ಕೆ ಮೂಲವಾಗಿ ಬೇಕಾದುದು ಕರ್ನಾಟಕದಿಂದ ಬಂದ ಕನ್ನ್ನಡ ಸಾಹಿತ್ಯದ ಕರ್ನಾಟಕ ಸಂಗೀತವೇ ಮೂಲಾಧಾರ ಎಂದರು. ಅತಿಥಿಯಾಗಿದ್ದ ಡಾ. ಅಶೋಕ ಚಚಡಿ ಮಾತನಾಡಿ, ದಾಸತ್ವದ ಬಗ್ಗೆ ವಿವರಿಸಿದರು. ಶ್ರೀ ಸತ್ಯಪ್ರಮೋಧ ಹರಿದಾಸ ಪ್ರತಿಷ್ಠಾನದ ಸಂಚಾಲಕ ಎಸ್.ಬಿ. ಗುತ್ತಲ ಮಾತನಾಡಿ, ಪುರಂದರದಾಸರ ಕೃತಿಗಳಲ್ಲಿಯ ಸಾಮಾಜಿಕ ಹಾಗೂ ಪರಿಸರ ಕಾಳಜಿಯ ಬಗ್ಗೆ ಪುರಂದರ ದಾಸರ ಸಾಹಿತ್ಯದಲ್ಲಿಯ ಹಾಡುಗಳಲ್ಲಿ ಅಡಕವಾಗಿರುವ ಸಂಗತಿಗಳನ್ನ್ನು ವಿವರಿಸಿದರು. ಸಂಘದ ಕಾರ್ಯಾಧ್ಯಕ್ಷ ಪ್ರೊ. ಬಿ.ವಿ. ಗುಂಜೆಟ್ಟಿ ಅಧ್ಯಕ್ಷತ್ನೆ ವಹಿಸಿದ್ದರು. ಶಿವಣ್ಣ ಬೆಲ್ಲದ, ಪ್ರೊ. ಕೆ.ಎ. ಕುಲಕರ್ಣಿ, ಪ್ರೊ. ಎಸ್.ಬಿ. ಜೋಶಿ, ಪ್ರೊ. ಸಂಗುಂಡಿಮಠ, ಪ್ರೊ. ಪೂಜಾರ, ಪ್ರೊ. ಎಚ್.ಎ. ಕಟ್ಟಿ, ಪಂ. ಭೀಮಸೇನ ಆಚಾರ್ ಜೋಶಿ, ಕಲ್ಲಾಪುರ ದೇಸಾಯಿ, ಇಟ್ಟಗಂಟಿ ದೇಸಾಯಿ, ಜಿ. ಜಿ. ಬೆಳಗಾಂವಕರ, ಎಸ್.ವಿ. ಕುಲಕರ್ಣಿ, ಎಸ್.ಕೆ . ಕುಲಕರ್ಣಿ, ಡಿ.ಎಸ್. ಯಲವಿಗಿ ಮತ್ತಿತರರು ಉಪಸ್ಥಿತರಿದ್ದರು. ಶಂಕರ ಹಲಗತ್ತಿ  ಸ್ವಾಗತಿಸಿದರು. ಕೃಷ್ಣ ಜೋಶಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.