ಧಾರವಾಡ

ಜಿನ್ನೂರ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ!

Published On :

ಕಲಘಟಗಿ: ತಾಲೂಕಿನ ಜಿನ್ನೂರ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವುದಕ್ಕೆ ಅವಕಾಶ ನೀಡಬೇಕು ಎಂದು ಗ್ರಾಪಂ ಸದಸ್ಯರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಹನ್ನೊಂದು ಸದಸ್ಯರ ಜಿನ್ನೂರ ಗ್ರಾಪಂನಲ್ಲಿ ಗ್ರಾಪಂ ಅಧ್ಯಕ್ಷೆ ಕಮಲವ್ವ ಕುರಿಯವರ ಅವರು ಆಡಳಿತ ಮಂಡಳಿಯ ಗಮನಕ್ಕೆ ತರದೆ, ನಿರ್ಮಲ ಗ್ರಾಮ ಯೋಜನೆ, ಇನ್ನಿತರ ಕಾಮಗಾರಿಗಳ ಕುರಿತು ನಿಯಮ ಉಲ್ಲಂಘಿಸಿ ಏಕ ಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡಿದ್ದಾರೆ ಆದ್ದರಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಬುಧವಾರ ಉಪವಿಭಾಗಾಧಿಕಾರಿಗೆ ಗ್ರಾಪಂ ಸದಸ್ಯರಾದ ಕಲ್ಲಪ್ಪ ವೀರಾಪುರ, ಶಿವಪ್ಪ ಹುಲಮನಿ, ಪಾರವ ಹರಿಜನ, ಹಳೆಪ್ಪ ತಳವಾರ, ಸರೋಜಾ ವಡ್ಡರ ಸೇರಿದಂತೆ ಒಟ್ಟು 9 ಸದಸ್ಯರು  ಮನವಿ ನೀಡಿದ್ದಾರೆ.
ಅಪಘಾತ: ಮಕ್ಕಳು ಸುರಕ್ಷಿತ
ಕಲಘಟಗಿ: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ತಾಲೂಕಿನ ಮುಕ್ಕಲ್‌ದ ಅಂಬೇಡ್ಕರ್ ಪ್ರೌಢಶಾಲಾ ಮಕ್ಕಳು ಸುರಕ್ಷಿತವಾಗಿದ್ದರೆಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. ಹೊನ್ನಾವರ ತಾಲೂಕಿನ ಗೇರುಸೊಪ್ಪ ಬಳಿ ಸಂಭವಿಸಿದ ಅಪಘಾತದಲ್ಲಿ ಮಕ್ಕಳು, ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದು ಪ್ರವಾಸ ಮೊಟಕುಗೊಳಿಸಿ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಪಿ.ಐ. ಕುಂಬಾರ ತಿಳಿಸಿದ್ದಾರೆ.
--
ಮುಖ್ಯಾಧಿಕಾರಿ ಅಮಾನತಿಗಾಗಿ ಪಪಂ ಸದಸ್ಯರು, ಜನರ ಸತ್ಯಾಗ್ರಹ
ಕಲಘಟಗಿ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿನ ಭ್ರಷ್ಟಾಚಾರ ತಡೆಗಟ್ಟಬೇಕು ಹಾಗೂ ಮುಖ್ಯಾಕಾರಿಯನ್ನು ಅಮಾನತುಗೊಳಿಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಸಾರ್ವಜನಿಕರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಕುರಿತು ಸಂಬಂಧಿಸಿದ ಸಚಿವರಿಗೆ, ಅಧಿಕಾರಿಗಳಿಗೆ ಪತ್ರ ನೀಡಿದ್ದು ತನಿಖೆ ಮಾಡಿ, ನಮ್ಮ ಬೇಡಿಕೆಗಳು ಈಡೇರುವವರೆಗೆ ಸತ್ಯಾಗ್ರಹ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ಪಪಂ ಮಾಜಿ ಅಧ್ಯಕ್ಷ ಕೆ.ಐ. ಖಂಡೆಕರ, ಸದಸ್ಯರಾದ ನಾಗರಾಜ ಉಡುಪಿ, ಸಿಕಂದರ ಭಾಷಾ ಬೇಪಾರಿ, ಬೂದಪ್ಪ ಹುರಕಡ್ಲಿ, ತಾನಾಜಿ ನಿಕಂ, ರೂಪಾ ಗೌಳಿ,  ಗೀತಾ ದೈವಜ್ಞ, ಪ್ರವೀಣ ದೈವಜ್ಞ, ಕಿರಣ ದೈವಜ್ಞ, ಗಂಗಾಧರ ಗೌಳಿ, ಟೋಪಣ್ಣ ಲಮಾಣಿ,  ಬಸವರಾಜ ಹಟಿಗಾರ, ಕೃಷ್ಣಾ ಲಮಾಣಿ, ಬಸವರಾಜ ಬೇಗೂರಶೆಟ್ಟಿ, ಅಶೋಕ ಅರ್ಕಸಾಲಿ, ಪ್ರಕಾಶ ಧೂಪದ, ಮಂಜುನಾಥ ಶ್ಯಾನವಾಡ, ಗಂಗಪ್ಪ ವಾಲಿ, ಸುಧೀರ ಬೋಳಾರ ಮುಂತಾದವರು ಇದ್ದರು. ನಿನ್ನೆ ರಾತ್ರಿ ಮಾಜಿ ಕ್ರೆಡಲ್ ಅಧ್ಯಕ್ಷ ಸಿ.ಎಂ.ನಿಂಬಣ್ಣವರ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಗ್ರಹ ನಿರತರ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ ಕೆ.ಆರ್. ಕುಲಕರ್ಣಿಗೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.