ಜಿಎಸ್ಸೆಸ್ ಸ್ಮರಣೆ ನಾಟಕೋತ್ಸವಕ್ಕೆ ನೀರಸ ಪ್ರತಿಕ್ರಿಯೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 3
ಇಲ್ಲಿನ ರಂಗಾಯಣ ಬಯಲು ರಂಗಮಂದಿರಲ್ಲಿ ಗುರುವಾರದಿಂದ ನಡೆಯುತ್ತಿರುವ ಜಿ.ಎಸ್. ಶಿವರುದ್ರಪ್ಪ ಸ್ಮರಣಾರ್ಥ ನಾಟಕೋತ್ಸವಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಂಗ ಪರಿಸರ, ರಂಗ ಪಯಣ ತಂಡಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ನಾಟಕೋತ್ಸವದಲ್ಲಿ ಮೊದಲನೇ ದಿನ ರಂಗ ಪರಿಸರ ತಂಡ ಕುವೆಂಪು ವಿರಚಿತ ಮಹಾರಾತ್ರಿ ನಾಟಕ ಪ್ರಸ್ತುತ ಪಡಿಸಿದೆ. ಪ್ರೇಕ್ಷಕರ ಕೊರತೆಯಿಂದಾಗಿ ನಾಟಕ ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿತು. ಪ್ರದರ್ಶನ ಪೂರ್ವ ಸಮಾರಂಭಕ್ಕೂ ಅತಿಥಿಗಳು ವಿಳಂಬವಾಗಿದ್ದರಿಂದ ಕೊನೆ ಕ್ಷಣದಲ್ಲಿ ನಾಟಕಕ್ಕೆ ಬಂದ ಕೆಲವರನ್ನು ಅತಿಥಿ, ಅಧ್ಯಕ್ಷರನ್ನಾಗಿ ಮಾಡಿದ ಸಂದರ್ಭನಡೆಯಿತು.
2ನೇ ದಿನದ ರಂಗ ಪಯಣ ತಂಡದ ಬಿರುಗಾಳಿ ನಾಟಕ ಪ್ರದರ್ಶನಗೊಂಡಿತು. ಆದರೆ, ಪರಿಸ್ಥಿತಿ ಏನೂ ಭಿನ್ನವಾಗಿರಲಿಲ್ಲ. ಪ್ರೇಕ್ಷಕರ ಕೊರತೆಯ ಜೊತೆಗೆ ನಾಟಕದ ಗುಣಮಟ್ಟ ಕೂಡ ಕಳಪೆಯಾಗಿತ್ತು. ನಾಟಕೋತ್ಸವವನ್ನು ಸಮರ್ಪಕ ಸಿದ್ಧತೆ ಇಲ್ಲದೇ ಆಯೋಜಿಸಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ನಾಟಕ ವೀಕ್ಷಿಸಲು ಬಂದ ಹಿರಿಯ ರಂಗಕರ್ಮಿಯೊಬ್ಬರು ಬೇಸರ ವ್ಯಕ್ತಪಡಿಸಿದರು. ಶನಿವಾರ ಒಳಸುಳಿಗಳು ಹಾಗೂ ಭಾನುವಾರ ಪದರುಗಳು ಎಂಬ ನಾಟಕ ಪ್ರದರ್ಶನಗೊಳ್ಳಲಿದ್ದು ಈ ನಾಟಕಗಳಾದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
ನೇರವಾಗಿ ನಾಟಕೋತ್ಸವದಲ್ಲಿ ನಾನೇ ಭಾಗವಹಿಸಲು ಕಾರಣಾಂತರಗಳಿಂದ ಆಗಲಿಲ್ಲ. ಸಂಘಟನೆ ಸದಸ್ಯರು ಸರಿಯಾಗಿ ಪ್ರಚಾರ ಮಾಡದಿರುವುದು ಜನರ ಕೊರತೆಗೆ ಕಾರಣವಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಿ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆಂದು ನಾಟಕೋತ್ಸವದ ಸಂಘಟಕ ವಿಠ್ಠಲ ಕೊಪ್ಪದ ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

