ಧಾರವಾಡ

ನಾಳೆ ರುದ್ರಮುನಿ ಶ್ರೀ ರಥೋತ್ಸವ

Published On :

ಅಣ್ಣಿಗೇರಿ: ಇಲ್ಲಿನ ದಾಸೋಹಮಠದ ರುದ್ರಮುನಿ ಶ್ರೀಗಳ 50ನೇ ವಾರ್ಷಿಕ ಪುಣ್ಯತಿಥಿ ಅಂಗವಾಗಿ ಜ. 7ರಂದು 5ಕ್ಕೆ ರಥೋತ್ಸವ ಜರುಗಲಿದೆ. ಜ. 9ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಪುಣ್ಯತಿಥಿ ನಿಮಿತ್ತ ಅಂದು ರಾತ್ರಿ 7ಕ್ಕೆ ಕನಕದಾಸರ ಕುಲ ಕುಲ ಎಂದು ಬಡಿದಾಡದಿರಿ ಎಂಬ ವಿಷಯ ಕುರಿತು ಚಿಂತನಾ ಗೋಷ್ಠಿ ನಡೆಯಲಿದ್ದು, ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಸಾನ್ನಿಧ್ಯ ವಹಿಸುವರು ನರಗುಂದ ಪತ್ರಿವನಮಠದ ಸಿದ್ದವೀರ ಶಿವಯೋಗಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಿದ್ಧೇಶ್ವರ ಸ್ವಾಮೀಜಿ, ಲಕ್ಷ್ಮೇಶ್ವರದ ಸಿದ್ಧರಾಮ ದೇವರು ಭಾಗವಹಿಸುವರು.
ಜ. 8ರಂದು 7ಕ್ಕೆ ಮಠದಿಂದ ಘಟ ಬೆಳೆಯುವುದಕ್ಕಿಂತ ಘಟದಿಂದ ಮಠ ಬೆಳೆಯ ಬೇಕು ಎಂಬ ವಿಷಯದ ಕುರಿತು ಶರಣ ಚಿಂತನಗೋಷ್ಠಿ ಜರುಗಲಿದೆ. ಹರಿಹರದ ಪಂಚಮಸಾಲಿ ಪೀಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗುದ್ನೇಶ್ವರಮಠ ನಿಲಗುಂದ ಪ್ರಭುಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ವೀರೇಶ್ವರ ಪುಣ್ಯಾಶ್ರಮ ಗದಗ ಕಲ್ಲಯ್ಯಜ್ಜ, ವರವಿ ವಿರೂಪಾಕ್ಷಯ್ಯ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.
ಜ. 9 ರಂದು ಬೆಳಗ್ಗೆ ಸಪ್ತಾಹ ಸಮಾಪ್ತಿ ಮಹಾಮಂಗಲಗೊಳ್ಳಲಿದೆ. ಸಂಜೆ 7ಕ್ಕೆ ಗಂಟೆಗೆ ಸಿದ್ಧಾಂತ ಶಿಖಾಮಣಿಯ ಎಕೆಎವ ಶಿವಸಾಕ್ಷಾತ್ ಚಿದಾನಂದೋ ಮಯೋ ವಿಭು ವಿಷಯ ಕುರಿತು ಭಾವೈಕ್ಯ ಸಭೆ ಜರುಗಲಿದೆ. ಬಾಳೆಹೊನ್ನೂರ ರಂಭಾಪುರಿಪೀಠ ಜಗದ್ಗುರು ಸಾನ್ನಿಧ್ಯ ವಹಿಸುವರು ನರಗುಂದ ಪಂಚಗ್ರಹ ಹಿರೇಮಠ ಸಿದ್ದಲಿಂಗ ಶಿವಾಚಾರ್ಯರು, ನಲ್ನುಡಿ ಸೊರಟೂರ ಫಕ್ಕೀರೇಶ್ವರ ಸ್ವಾಮೀಜಿ ಉಪಸ್ಥಿತರಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.