ಧಾರವಾಡ

ಪ್ರಥಮ ಡಿವಿಜನ್ ಲೀಗ್ ಕ್ರಿಕೆಟ್

Published On :

ಹುಬ್ಬಳ್ಳಿ: ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಧಾರವಾಡ ವಲಯದ 2013-14 ನೇ ಸಾಲಿನ ಪ್ರಥಮ(ಎ) ಡಿವಿಜನ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಜ. 10ರಿಂದ ಪ್ರಾರಂಭವಾಗಲಿದೆ.
ಅವಳಿ ನಗರ ಹಾಗೂ ಗದಗನ ಹತ್ತು ಅಗ್ರ ತಂಡಗಳು ಈ ಪಂದ್ಯಾವಳಿಯಲ್ಲಿ ಸೆಣಸಲಿದ್ದು, ಪಂದ್ಯಗಳನ್ನು  ರೌಂಡ್ ರಾಬಿನ್ ಲೀಗ್ ಆಧಾರದ ಮೇಲೆ ಏಕಕಾಲಕ್ಕೆ ಇಲ್ಲಿಯ ರಾಜನಗರ ಕೆಎಸ್ಸಿಎ (ಟರ್ಫ್) ಹಾಗೂ ಕರ್ನಾಟಕ ಜಿಮ್ಖಾನಾ ಮೈದಾನಗಳಲ್ಲಿ ನಡೆಯಲಿವೆ. ಮೂರು ಪಂದ್ಯಗಳು ಬಿವಿಬಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯಲಿವೆ.
ಪ್ರತಿ ಪಂದ್ಯ ಆರೂವರೆ ತಾಸು ನಡೆಯಲಿದ್ದು, ಮೊದಲು ಆಡಿದ ತಂಡ ಕನಿಷ್ಠ 55 ಓವರ್ನ್ ಆಡಲಿದೆ. ನಂತರ ಆಡುವ ತಂಡ ಉಳಿದ ಸಮಯದಲ್ಲಿ ಪ್ರತಿ 4 ನಿಮಿಷಕ್ಕೆ ಒಂದರಂತೆ ಲಭ್ಯ ಓವರ್ಗಳನ್ನು ಆಡುವ ಅವಕಾಶ ಪಡೆಯಲಿದೆ.
ನಿಗದಿತ ಸಮಯದಲ್ಲಿ ಓವರ್ಗಳನ್ನು ಬೌಲ್ ಮಾಡಿ ಮುಗಿಸದಿದ್ದಲ್ಲಿ, ಪ್ರತಿ ಓವರ್ಗೆ 10 ಓಟಗಳ ದಂಡ ತೆರಬೇಕಾಗುತ್ತದೆ. ಪ್ರತಿ ಲೀಗ್ ಪಂದ್ಯ ಬೆಳಗ್ಗೆ 9.30 ರಿಂದ 12.30 ಹಾಗೂ ಭೋಜನ ವಿರಾಮದ ನಂತರ 1.30 ರಿಂದ ಸಂಜೆ 5 ರವರೆಗೆ ನಡೆಯಲಿದೆ.
ಪ್ರತಿ ಪಂದ್ಯದ ವಿಜಯಿ ತಂಡ 4 ಪಾಯಿಂಟ್ ಪಡೆದುಕೊಳ್ಳಲಿದ್ದು, ಪಂದ್ಯ ಟೈ ಅಥವಾ ಡ್ರಾ ಆದರೆ ಎರಡೂ ತಂಡಗಳು ತಲಾ ಎರಡು ಅಂಕಗಳನ್ನು ಹಂಚಿಕೊಳ್ಳಲಿವೆ. ಕಳೆದ ಬಾರಿಯ ಚಾಂಪಿಯನ್ ಹುಬ್ಬಳ್ಳಿ ಕ್ರಿಕೆಟ್ ಅಕ್ಯಾಡಮಿ (ಎಚ್ಸಿಎ), ರನ್ನರ್ ಅಪ್ ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ ಫೌಂಡೇಶನ್ ಹೊರತಾಗಿ ಹುಬ್ಬಳ್ಳಿ ಸ್ಪೋರ್ಟ್ಸ ಕ್ಲಬ್ 'ಎ' ಹಾಗೂ 'ಬಿ' ತಂಡಗಳು, ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ(ಸಿಸಿಕೆ) 'ಎ' ಹಾಗೂ 'ಬಿ' ತಂಡಗಳು, ಎಸ್ಡಿಎಂ ಕ್ರಿಕೆಟ್ ಅಕಾಡಮಿ ಹಾಗೂ ವಿಬಿಸಿಎ, ಎರಡನೇ ಡಿವಿಜನ್ನಿಂದ ಬಡ್ತಿ ಪಡೆದ ಮಿಡ್ ಮ್ಯಾಕ್ ಕ್ರಿಕೆಟ್ ಕ್ಲಬ್(ಹುಬ್ಬಳ್ಳಿ) ಹಾಗೂ ಸ್ಪೋರ್ಟ್ಸ್ ಅಕಾಡಮಿ ಆಫ್ ಗದಗ (ಸ್ಯಾಗ್) ಪ್ರಥಮ ಡಿವಿಜನ್ ಪಂದ್ಯಾವಳಿಯಲ್ಲಿ ವಲಯದ ಹಿರಿಮೆಗಾಗಿ ಸೆಣೆಸಲಿವೆ.
ಸದ್ಯದ ಕಾರ್ಯಕ್ರಮದಂತೆ ಪಂದ್ಯಗಳು ಜ. 10 ರಿಂದ ಫೆ. 3ರ ವರೆಗೆ ನಡೆಯಲಿವೆ. ಪಂದ್ಯಾವಳಿಯ ವಿಜೇತ ತಂಡ ರು. 50 ಸಾವಿರ ನಗದು ಬಹುಮಾನ ಗಿಟ್ಟಿಸಲಿದ್ದರೆ, ಎರಡು, ಮೂರು ಹಾಗೂ ನಾಲ್ಕನೇ ಸ್ಥಾನ ಸಂಪಾದಿಸುವ ತಂಡಗಳು ಕ್ರಮವಾಗಿ ರು. 40 ಸಾವಿರ, ರು. 30 ಸಾವಿರ ಹಾಗೂ ರು. 20 ಸಾವಿರ ನಗದು ಬಹುಮಾನ ಪಡೆಯಲಿವೆ.
ಮೊದಲ ದಿನ (ಜ.10) ರಾಜನಗರ ಕೆಎಸ್ಸಿಎ (ಟರ್ಫ್) ಮೈದಾನದಲ್ಲಿ ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ (ಸ್ಯಾಗ್), ಹುಬ್ಬಳ್ಳಿ ಸ್ಪೋರ್ಟ್ಸ ಕ್ಲಬ್ 'ಬಿ' ತಂಡವನ್ನು ಎದುರಿಸಲಿದ್ದರೆ, ಬಿವಿಬಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ ಹಾಗೂ  ವಿಬಿಸಿಎ ತಂಡಗಳು ಸೆಣಸಲಿವೆ ಎಂದು ಕೆಎಸ್ಸಿಎ ಧಾರವಾಡ ವಲಯ ನಿಯಂತ್ರಕ ಬಾಬಾ ಭೂಸದ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.