ಸುದ್ದಿ ಸಂಕ್ಷೇಪ
ವಕ್ಫ್ ಕಮಿಟಿಗೆ ಆಯ್ಕೆ
ಧಾರವಾಡ: ರಾಜ್ಯ ವಕ್ಫ್ ಮಂಡಳಿಯ ಜಿಲ್ಲಾ ಕಮಿಟಿಗೆ ಎನ್.ಎಫ್. ಇಕ್ಬಾಲ ಜಮಾದಾರ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಆಡಳಿತಾಧಿಕಾರಿಯಾಗಿ ಎನ್.ಎಫ್. ಮೂಹಸೀನ ನೇಮಕಗೊಂಡಿದ್ದಾರೆ. ಮಾಜಿ ಮಹಾಪೌರ ಐ.ಎಂ ಆವಳಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಐ.ಡಿ. ನವಲಗುಂದಕರ, ನಜೀರ್ ಮನಿಯಾರ, ಹಾಜಿ ಹಿಂಡಸಗೇರಿ, ಗೌಸ ಕಿತ್ತೂರ ಮತ್ತಿತರು ಅಭಿನಂದಿಸಿದ್ದಾರೆ.
ಸಿಎಂಗೆ ಅಭಿನಂದನೆ
ಧಾರವಾಡ: ಶ್ರೀ ಗುರು ಸಿದ್ದರಾಮೇಶ್ವರ ಜಯಂತಿಯನ್ನು ಸರ್ಕಾರ ವತಿಯಿಂದ ಆಚರಿಸಿದ ಹಿನ್ನೆಲೆಯಲ್ಲಿ ರಾಜ್ಯ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ ಅಭಿನಂದನೆ ಸಲ್ಲಿಸಿದೆ. ಸಿದ್ದರಾಮೇಶ್ವರ ಅವರ 841ನೇ ಜಯಂತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಿರುವುದು ಸಂತಸದ ಸಂಗತಿ ಎಂದು ಸಂಘದ ನಾಗಪ್ಪ ಮೊರಬ, ಡಿ.ಡಿ. ವಡ್ಡರ, ವಿ.ಎನ್. ಮನ್ನಿಕೇರಿ, ಜಿ.ಎಚ್. ಶಿವಳ್ಳಿ, ಎಸ್.ಎಂ. ಬಂಕಾಪುರ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.
ನಾಳೆ ಜಿಲ್ಲೆಗೆ ಸಚಿವ ದಿನೇಶ ಗುಂಡೂರಾವ್
ಧಾರವಾಡ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಅವರು ಜ. 16ರಂದು ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 9ರಿಂದ 12ರ ವರೆಗೆ ನಿಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.40ಕ್ಕೆ ವಿಮಾನ ಮೂಲಕ ಮುಂಬೈಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಬನಶಂಕರಿದೇವಿ ರಥೋತ್ಸವ
ಹೆಬ್ಬಳ್ಳಿ: ತಾಲೂಕಿನ ಹೆಬ್ಬಳ್ಳಿ ಗ್ರಾಮದ ಬ್ರಹ್ಮಚೈತನ್ಯ ಮಠದ ದತ್ತಾವಧೂತರ ಅಧ್ಯಕ್ಷತೆಯಲ್ಲಿ ಗ್ರಾಮದ ಬನಶಂಕರಿ ದೇವಿಯ ರಥೋತ್ಸವ ಜ.16ರಂದು ಸಂಜೆ 4ಕ್ಕೆ ಜರುಗಲಿದೆ. ಜ.15ರಂದು ಕಳಸಾರೋಹಣ ಜರುಗುವುದು. 17ರಂದು ಕಡುಬಿನ ಕಾಳಗ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ವಿರೂಪಾಕ್ಷಯ್ಯ ಹಿರೇಮಠ ಅವರ ಸಾನ್ನಿಧ್ಯದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಬನಶಂಕರಿದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ರೋಣದ 9986859520 ಅವರನ್ನು ಸಂಪರ್ಕಿಸಬಹುದು.
ಪುಷ್ಪಲತಾ ಮಹಾಳಂಕಗೆ ಪ್ರೇಮಕವಿ ಪ್ರಶಸ್ತಿ
ಹುಬ್ಬಳ್ಳಿ: ಕೆ.ಎಸ್. ನರಸಿಂಹಸ್ವಾಮಿ ಅವರ 99ನೇ ಜನ್ಮದಿನೋತ್ಸವ ನಿಮಿತ್ತ ಮೈಸೂರಿನ ಗ್ರಾಮಾಂತರ ಬುದ್ಧಿಜೀವಿ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಪ್ರೇಮಕವನ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಪುಷ್ಪಲತಾ ಮಹಾಳಂಕ ಅವರಿಗೆ ಪ್ರೇಮಕವಿ ಪ್ರಶಸ್ತಿ ಲಭಿಸಿದೆ. ಫೆಬ್ರವರಿ 2ರಂದು ಮೈಸೂರಿನಲ್ಲಿ ನಡೆಯಲಿರುವ ಸಾಹಿತ್ಯೋತ್ಸವದಲ್ಲಿ ರಾಜ್ಯಮಟ್ಟದ ಪ್ರೇಮಕವಿ ಪ್ರಶಸ್ತಿಯನ್ನು ಪುಷ್ಪಲತಾ ಮಹಾಳಂಕ ಅವರಿಗೆ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

