ಧಾರವಾಡ

ರಸ್ತೆ ಅಪಘಾತ-ಪ್ರಾಣಹಾನಿಗೆ ಕೊಂಚ ಬ್ರೇಕ್: ಪೊಲೀಸ್ ಇಲಾಖೆ ಕ್ರಮ

Published On :

ಹುಬ್ಬಳ್ಳಿ: ಮಹಾನಗರ ಪೊಲೀಸ್ ಇಲಾಖೆ, ಸಂಚಾರ ವ್ಯವಸ್ಥೆಯಲ್ಲಿ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ ರಸ್ತೆ ಅಪಘಾತದಲ್ಲಿ ಮೃತಪಡುವವರ ಸಂಖ್ಯೆಯಲ್ಲಿ 2013ನೇ ಸಾಲಿನಲ್ಲಿ ಕಮ್ಮಿಯಾಗಿದೆ.
2011ರಿಂದ 2013ರ ಅವಧಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ, ಗಂಭೀರ ಸ್ವರೂಪದ ಗಾಯ, ಸಾದಾ ಗಾಯ, ಮೋಟಾರ್ ವಾಹನ ಕಾಯ್ದೆ ಉಲ್ಲಂಘಿಸಿದ ಪ್ರಕರಣಗಳಲ್ಲಿ ಸಂಗ್ರಹವಾಗಿರುವ ದಂಡಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮೂರು ವರ್ಷಗಳ ಅವಧಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಅಂಕಿ-ಸಂಖ್ಯೆ ಕ್ರಮವಾಗಿ 103, 109 ಹಾಗೂ 101 ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಮಾರಣಾಂತಿಕ ಗಾಯ-105, 107 ಹಾಗೂ 94. ಮಾರಣಾಂತಿಕವಲ್ಲದ- 535, 478 ಹಾಗೂ 450. ಅತಿವೇಗ ಮತ್ತು ನಿರ್ಲಕ್ಷ್ಯತನ- 98, 104 ಹಾಗೂ 90. ತೀವ್ರ ಸ್ವರೂಪ-105, 107 ಹಾಗೂ 95. ತೀವ್ರ ಸ್ವರೂಪವಲ್ಲದ- 564, 582 ಹಾಗೂ 540. ಸಾದಾ ಗಾಯ- 753, 764 ಹಾಗೂ 786. ರಾತ್ರಿ ವೇಳೆಗಿಂತಲೂ ಹಗಲಿನಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿರುವುದು ವಿಷಾದನೀಯ.
ಹಗಲು ಹೊತ್ತಿನಲ್ಲಿ 391, 407 ಹಾಗೂ 409. ರಾತ್ರಿ ವೇಳೆಯಲ್ಲಿ- 556, 282 ಹಾಗೂ 226.
ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಕ್ರಮವಾಗಿ 2,35,119, 2,07,267 ಹಾಗೂ 3,26,126. ದಂಡ ಆಕರಣೆ- ರು. 3,32,95,700, ರು. 2,97,85,950 ಹಾಗೂ ರು. 4,56,67,850. ಉತ್ತರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ವರ್ಷಗಳ ಅವಧಿಯಲ್ಲಿ ಕ್ರಮವಾಗಿ 71807, 56597 ಹಾಗೂ 83,499 ಪ್ರಕರಣಗಳು. ರು. 1,06,56,300, ರು. 81,72,700 ಹಾಗೂ ರು. 1,27,71,100 ದಂಡ ವಸೂಲಿ ಮಾಡಲಾಗಿದೆ.
ದಕ್ಷಿಣ ಸಂಚಾರ ಠಾಣೆ- 74044, 46809 ಹಾಗೂ 71974 ಪ್ರಕರಣಗಳು. ಕ್ರಮವಾಗಿ ರು. 1,08,84,400, ರು. 78,69,350, ರು. 1,06,61,350. ಪೂರ್ವ ಸಂಚಾರ ಠಾಣೆ- 8558, 36688 ಹಾಗೂ 72871. ದಂಡ ಕ್ರಮವಾಗಿ ರು. 91,7,500, ರು. 48,10,400, ರು. 87,94,150.  ಧಾರವಾಡ ಸಂಚಾರ ಠಾಣೆ- 80710, 67173, 89597 ಪ್ರಕರಣಗಳು. ರು. 1,08,37,500, ರು. 89,33,500 ಹಾಗೂ ರು. 1,27,68,550 ದಂಡ ಆಕರಿಸಲಾಗಿದೆ.
01-01-2013ರಿಂದ 31-12-2013ರವರೆಗೆ ಪೊಲೀಸ್ ನೋಟಿಸ್ ಹಾಗೂ ದಂಡ ಆಕರಣೆ ಮಾಡಿರುವ ಪ್ರಕರಣಗಳು- ಹುಬ್ಬಳ್ಳಿ- 4620 ಪ್ರಕರಣ, ದಂಡ ರು. 465200. ಧಾರವಾಡ-2052 ದಂಡ ರು. 207500. ಡಿಡಿ ಕೇಸ್ (ಮದ್ಯಪಾನ ಮಾಡಿ ವಾಹನ ಚಾಲನೆ) ಮತ್ತು ದಂಡ ಕ್ರಮವಾಗಿ 4,441, 3,707, 4,756. ದಂಡ ಆಕರಣೆ ರು. 53,52,500, ರು. 45,08,350 ಹಾಗೂ ರು. 55,11,850. ಇಂಟರ್‌ಸೆಪ್ಟರ್ ವಾಹನದ ಸಹಾಯದಿಂದ ಕ್ರಮವಾಗಿ 26594, 18019 ಹಾಗೂ 21505 ಪ್ರಕರಣ ಪತ್ತೆ ಹಚ್ಚಿ ರು. 5,02,800, ರು. 16,08,900, ರು. 30,93,600 ದಂಡ ವಸೂಲಿ ಮಾಡಲಾಗಿದೆ. ಓವರ್‌ಸ್ಪೀಡ್ ಮಶೀನ್ ಸಹಾಯದಿಂದ-8347 ಪ್ರಕರಣ ಹಾಗೂ ಇತರೆ 1216. ದಂಡ- ರು. 25,04,100, ರು. 3,34,600.  9439 ಹಾಗೂ ಇತರೆ 3267 ದಂಡ- 28,31,400, ರು. 6,53,400. ಹಾಗೂ 2013ರಲ್ಲಿ 4798 ಹಾಗೂ ಇತರೆ 5127 ದಂಡ- ರು. 25,49,400, ರು. 10,26,300. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ನೋಂದಣಿಯಾದ ಒಟ್ಟು ವಾಹನ ಸಂಖ್ಯೆ 4,27,706 ಇರುವ ಬಗ್ಗೆ ಪೊಲೀಸ್ ಇಲಾಖೆ ನೀಡಿದ ಮಾಹಿತಿಯಿಂದ ದೃಢಪಟ್ಟಿದೆ. ಮಹಾನಗರ ಪೊಲೀಸ್ ಇಲಾಖೆ ಜ. 21ರಿಂದ ಹಮ್ಮಿಕೊಂಡಿರುವ ಸಂಚಾರ ರಸ್ತೆ ಸುರಕ್ಷಾ ಸಪ್ತಾಹದ ಬಗ್ಗೆ ಜನಸಾಮಾನ್ಯರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಮೂಲಕ ಅಮೂಲ್ಯ ಜೀವಗಳ ಹಾನಿ ಮುಂಬರುವ ವರ್ಷಗಳಲ್ಲಿ ಮತ್ತಷ್ಟು ತಗ್ಗಲಿ ಎಂಬುದೇ ಸಾರ್ವಜನಿಕರ ಸದಾಶಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.