ಹಿಂದಿನ ಸಭೆ ಠರಾವು ದೃಢೀಕರಿಸದಿದ್ರೆ ಮುಂದಿನ ಸಭೆ ನಡೆಸಲು ಬಿಡಲ್ಲ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 23
ಮಹಾನಗರ ಪಾಲಿಕೆ ಕಳೆದ ಮೂರು ಸಾಮಾನ್ಯ ಸಭೆಗಳಲ್ಲಿ ಕೈಗೊಂಡ ಠರಾವುಗಳನ್ನ್ನು ದೃಢೀಕರಿಸದ ಹೊರತು ಮುಂದಿನ ಸಾಮಾನ್ಯ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ಪಾಲಿಕೆ ಪ್ರತಿಪಕ್ಷ ನಾಯಕ ಯಾಸೀನ್ ಹಾವೇರಿಪೇಟ, ಸಮರ್ಪಕ ಆಡಳಿತ ನಡೆಸುವಲ್ಲಿ ಮೇಯರ್ ಶಿವು ಹಿರೇಮಠ ವಿಫಲರಾಗಿದ್ದಾರೆಂದು ದೂರಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸಾಮಾನ್ಯ ಸಭೆಯಲ್ಲಿ ನೀಡಿದ ಸೂಚನೆಯಂತೆ ಮೇಯರ್ ಶಿವು ಹಿರೇಮಠ ಪ್ರತಿ ವಾರ್ಡ್ಗಳಿಗೆ ತಕ್ಷಣ ರು. 20 ಲಕ್ಷ ಬಿಡುಗಡೆ ಮಾಡಬೇಕು. ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
ಮೇಯರ್ ಆಗಿ ಶಿವು ಹಿರೇಮಠ ಅಧಿಕಾರ ವಹಿಸಿಕೊಂಡು ಏಳು ತಿಂಗಳು ಕಳೆದರೂ ಅಭಿವೃದ್ಧಿ ಕಾಮಗಾರಿಗಳಿಗಾಗಿ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ. ಮಳೆಗಾಲಕ್ಕೆ ಮುಂಚೆ ರಸ್ತೆಗಳಲ್ಲಿನ ತಗ್ಗು ಮುಚ್ಚುವ ಕೆಲಸವೂ ಈ ಮೇಯರ್ ಅವರಿಂದ ಆಗಿಲ್ಲ ಎಂದು ಆರೋಪಿಸಿದರು.
ಹಂದಿಗಳನ್ನು ಅವಳಿ ನಗರದಿಂದ ಸಂಪೂರ್ಣವಾಗಿ ತೆರವುಗೊಳಿಸುವುದಾಗಿ ಮಾಧ್ಯಮದಲ್ಲಿ ನೀಡಿದ್ದ ಹೇಳಿಕೆಯಂತೆ ಮೇಯರ್ ನಡೆದುಕೊಳ್ಳುತ್ತಿಲ್ಲ. ಹೊಸದಾಗಿ ಪಾರ್ಕಿಂಗ್ಗೆ ಗುತ್ತಿಗೆ ನೀಡಲು ಟೆಂಡರ್ ಆಹ್ವಾನಿಸಲು ಮೀನಮೇಷ ಎಣಿಸಲಾಗುತ್ತಿದು,್ದ ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸಾಕಷ್ಟು ಹಾನಿಯಾಗಿದೆ ಎಂದು ದೂರಿದರು.
ಧಾರವಾಡದ ಕಲಾಭವನ, ಟೌನ್ಹಾಲ್, ಸ್ವಿಮಿಂಗ್ಫೂಲ್ಗಳು ಸಂಪೂರ್ಣ ದುರಸ್ತಿಗೊಳಿಸಲು ಮೇಯರ್ ಆಸಕ್ಕಿ ತೋರುತ್ತಿಲ್ಲ. ಮಹಾನಗರದಲ್ಲಿ ಸ್ವಚ್ಛತೆ ಕಾಣದಂತಾಗಿದೆ. ಶಿವಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ. ಅವಳಿನಗರದಲ್ಲಿ ಸತತವಾಗಿ ಮಳೆ ಬೀಳುತ್ತಿರುವ ಪರಿಣಾಮ ಕಾರವಾರ ರಸ್ತೆಯ ಬಳಿ ಸಂಗ್ರಹಿಸಲಾಗುವ ತ್ಯಾಜ್ಯ ರಸ್ತೆ ತುಂಬೆಲ್ಲ ಹರಡಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತೆರಳಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರು.
ಪಾಲಿಕೆ ಸದಸ್ಯರಾದ ದೀಪಕ ಚಿಂಚೋರೆ, ಅಬ್ದುಲ್ವಹಾಬ್ ಮುಲ್ಲಾ ಹಾಜರಿದ್ದರು.
ಕಾರ್ನಲ್ಲಿ ಇಟ್ಟಿದ್ದ ರು. 48 ಸಾವಿರ ಕಳ್ಳತನ
ಹುಬ್ಬಳ್ಳಿ: ಕಾರಲ್ಲಿಟ್ಟ ರು. 48 ಸಾವಿರ ಚಾಲಕನೇ ಕದ್ದಿದ್ದಾಗಿ ಬೆಂಗಳೂರಿನ ಅಣ್ಣಾಸಾಹೇಬ ಪಾಟೀಲ ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಳೇಬಸ್ ನಿಲ್ದಾಣ ಎದುರಿನ ಅಯೋಧ್ಯಾ ಹೋಟೆಲ್ ಬಳಿ ಕಾರ್ ನಿಲ್ಲಿಸಿ ಹೋದಾಗ ಚಾಲಕ ಬಸವರಾಜ ಕಾರಲ್ಲಿದ್ದ ಹಣ ಕದ್ದಿದ್ದಾಗಿ ದೂರಿದ್ದಾರೆ. ಪ್ರಕರಣ ದಾಖಲಾಗಿದೆ.
ಪಾರ್ಕ್ ಮಾಡಿದ ಬೈಕ್ ಕಳ್ಳತನ
ಹುಬ್ಬಳ್ಳಿ: ನಗರದ ಸ್ವಿಮಿಂಗ್ಫೂಲ್ ಕಾಂಪ್ಲೆಕ್ಸ್ನಲ್ಲಿರುವ ಪ್ರಿಯದರ್ಶಿನಿ ಹ್ಯಾಂಡ್ಲೂಮ್ ಅಂಗಡಿಯಲ್ಲಿ ಖಾಲಿಜಾಗದ ಬಳಿ ಪಾರ್ಕ್ ಮಾಡಿದ್ದ ಬೈಕ್ನ್ನು ಕಳ್ಳರು ಕದ್ದಿದ್ದಾರೆ. ವಿದ್ಯಾನಗರದ ಬಸವರಾಜ ಕುರಹಟ್ಟಿ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

