ಸರಣಿ ಅತ್ಯಾಚಾರ ಖಂಡಿಸಿ ಸಂಘ-ಸಂಸ್ಥೆಗಳ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 24
ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಘಟನೆಗಳನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಗರದ ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಭಟನೆಗಳು ಮುಂದುವರಿದಿವೆ.
ಗುರುವಾರ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಲಾಯಿತು. ಅಲ್ಲದೇ, ಸರ್ಕಾರ ಕೂಡಲೇ ಕ್ರಮ ಕೊಳ್ಳುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಮರೀಶ ನಾಗಣ್ಣವರ, ಪರಶುರಾಮ ಪತ್ತಡ್ಡಿ, ಹಾಲುಂಡಯ್ಯ ರಾಮಯ್ಯನವರ ಇದ್ದರು.
ಪ್ರಜ್ಞಾ ಮಂಡಳ: ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಸರಣಿ ಅತ್ಯಾಚಾರ, ದೌರ್ಜನ್ಯ ಇಲ್ಲಿನ ಪ್ರಜ್ಞಾ ಮಹಿಳಾ ಮಂಡಳ ಕಪ್ಪುಬಟ್ಟೆ ಧರಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಇಂಥ ಅಮಾನವೀಯ ಕೃತ್ಯಗಳನ್ನು ತಡೆಯಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಮಹಿಳೆಯರು ಪ್ರತಿದಿನ ಆತಂಕದಿಂದಲೇ ಬದುಕಬೇಕಾಗಿದೆ. ಮಹಿಳೆಯರು ನಿರ್ಭಯದಿಂದ ಓಡಾಡಲು ಅನುಕೂಲವಾಗುವ ರೀತಿಯಲ್ಲಿ ಹೆಚ್ಚಿನ ಮಹಿಳಾ ಪೊಲೀಸ್ ಠಾಣೆಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷರಾದ ಆರತಿ ಪಾಟೀಲ, ಉಪಾಧ್ಯಕ್ಷೆ ನಿರ್ಮಲಾ ಸಾರಂಗಮಠ, ಪ್ರಧಾನ ಕಾರ್ಯದರ್ಶಿ ಲತಾ ಮಂಟಾ, ಕಾರ್ಯದರ್ಶಿ ಮಂಜುಳಾ ಮಡಿವಾಳರ, ಭಾಗ್ಯಶ್ರೀ ಎಂ, ದೀಪಾ ಪಾಟೀಲ, ಸ್ವಾತಿ ರಾಯ್ಕರ, ಲತಾ ಕುಂಬಾರ, ಹೇಮಾ ಕಿರೇಸೂರ, ಸುಜಾತಾ ಕಳ್ಳಿಮಠ, ಅನಿತಾ ಪತ್ತೆಪೂರ, ರೇಣುಕಾ ಪಾಟೀಲ ಇದ್ದರು.
ಮೃತ್ಯುಂಜಯ ಕಾಲೇಜು: ಕೆಎಲ್‌ಇ ಸಂಸ್ಥೆಯ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಕಾಲೇಜಿನ ರೆಡ್‌ಕ್ರಾಸ್, ಎನ್ನೆಸ್ಸೆಸ್ ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಅತ್ಯಾಚಾರ ಪ್ರಕರಣಗಳನ್ನು ವಿರೋಧಿಸಿ ಮೌನ ಮೆರವಣಿಗೆ ನಡೆಯಿತು. ಪ್ರಾಚಾರ್ಯರಾದ ಡಾ. ಕೆ.ಸಿ. ಪಾಂಗಿ ಮಾತನಾಡಿದರು. ಎನ್ನೆಸ್ಸೆಸ್ ಘಟಕದ ಅಧಿಕಾರಿ ರಮೇಶ ನಾಯ್ಕ, ಪ್ರೊ. ಸಂಧ್ಯಾ ಕುಲಕರ್ಣಿ, ಪ್ರೊ. ಚೇತನಕುಮಾರ, ಡಾ. ಹೊನಗಣ್ಣನವರ, ಪ್ರೊ. ಪಿ.ಎಸ್. ಹೆಗಡೆ ಇದ್ದರು. ಅದೇ ರೀತಿ ಸಮತಾ ಸೇನೆ ನಡೆಸಿದ ಪ್ರತಿಭಟನೆಯಲ್ಲಿ ನಾಗರಾಜ ಸಣ್ಣಮನಿ, ದಿವಾನ ಬಳ್ಳಾರಿ, ಕೃಷ್ಣಾ ಗುಮ್ಮಗೋಳ, ಪರಶುರಾಮ ಲೋಖಂಡೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

