ಸಮಾಜ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ ಇಂದು
ಧಾರವಾಡ: ಹುಬ್ಬಳ್ಳಿ ವಿದ್ಯಾನಗರದ ಬಿ.ವಿ. ಭೂಮರಡ್ಡಿ ಕಾಲೇಜಿನ ದೇಶಪಾಂಡೆ ಫೌಂಡೇಶನ್ ಸಭಾಭವನದಲ್ಲಿ ಜು. 28ರ ಬೆಳಗ್ಗೆ 9.30ಕ್ಕೆ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಪ್ರೌಢಶಾಲೆ ಸಮಾಜ ವಿಜ್ಞಾನ ವಿಷಯ ಬೋಧಕರಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 10ನೇ ತರಗತಿಯ ನೂತನ ಪಠ್ಯಪುಸ್ತಕದ ಪರಿಚಯ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪ್ರಸಕ್ತ ಸಾಲಿನಿಂದ ಅಳವಡಿಸಲಾದ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ, ಪ್ರಸಕ್ತ ಸಾಲಿನ ಶಿಕ್ಷಣ ಗುಣವರ್ಧನಾ ವರ್ಷಾಚರಣೆಯನ್ವಯ ಸಮಾಜ ವಿಜ್ಞಾನ ವಿಷಯದ ಕ್ರಿಯಾಯೋಜನೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆಯಾಗಲಿದೆ ಎಂದು ಸಮಾಜ ವಿಜ್ಞಾನ ವಿಷಯ ಬೋಧಕರ ಪರಿವಾರ ಅಧ್ಯಕ್ಷ ವೀರಣ್ಣ ಒಡ್ಡಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂಇಎಸ್ ಕಿಡಿಗೇಡಿತನ ನಿಲ್ಲಲಿ: ವಿದ್ಯಾವರ್ಧಕ ಸಂಘ
ಧಾರವಾಡ: ಹೈಕೋರ್ಟ್ ಆದೇಶದನ್ವಯ ತೆರವುಗೊಳಿಸಿದ ಯಳ್ಳೂರು ನಾಮಫಲಕ ಸಂಬಂಧ ಕೆಲವು ಮರಾಠಿ ಭಾಷಿಕರು ಪುಂಡಾಟಿಕೆ ನಡೆಸಿರುವದಲ್ಲದೇ ಮತ್ತೆ ಶಹಾಪುರದಲ್ಲಿ ಮರಾಠಿ ನಾಮಫಲಕ ಹಾಕುವ ದುಷ್ಕೃತ್ಯ ನಡೆಸಿದ್ದನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಭಾನುವಾರ ನಡೆಸಿದ ಕಾರ್ಯಕಾರಿ ಸಮಿತಿಯಲ್ಲಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಭೀಮಪ್ಪ ಗಡಾದಗೆ ಸೂಕ್ತ ರಕ್ಷಣೆ ನೀಡಲು ರಾಜ್ಯ ಸರ್ಕಾರಕ್ಕೆ ಸಂಘ ಒತ್ತಾಯಿಸುತ್ತದೆ. ಎಂಇಎಸ್ನ ಕಿಡಿಗೇಡಿತನ ಕುರಿತು ಸರ್ಕಾರ ಸದಾ ನಿಗಾ ವಹಿಸಿ ಕಾನೂನು ಸುವ್ಯವಸ್ಥೆಗಾಗಿ ಧಕ್ಕೆ ತರುವವರನ್ನು ಶೀಘ್ರ ಬಂಧಿಸಲು ಸಂಘವು ಆಗ್ರಹಿಸಿದೆ.
ಕಟ್ಟಿಮನಿ ಪುಸ್ತಕಗಳ ಕಳಿಸಲು ಮನವಿ
ಧಾರವಾಡ: ಬೆಳಗಾವಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಅವರ ಎಲ್ಲ 66 ಕೃತಿಗಳನ್ನು 16 ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ವರೆಗೆ 64 ಪುಸ್ತಕಗಳು ಲಭ್ಯವಾಗಿವೆ. ಅವುಗಳ ಬೆರಳಚ್ಚು-ಕರಡು ಓದುವಿಕೆ ಮುಗಿಸಿದ್ದೇವೆ. ಆದರೆ, ಕಟ್ಟಿಮನಿ ಅವರ ಮಗನ ತಾಯಿ (ಕಾದಂಬರಿ) ಮತ್ತು ಲೆನಿನ್ (ಲೇಖನ ಸಂಗ್ರಹ) ಕೃತಿಗಳು ಸಿಗುತ್ತಿಲ್ಲ. ಯಾರ ವಶದಲ್ಲಿದ್ದರೆ ತಿಳಿಸಬೇಕು. ಸಾಧ್ಯವಾದರೆ ಕಳಿಸಿಕೊಡಬೇಕು. ಈ ಸಹಾಯಕ್ಕಾಗಿ ಸಂಬಂಧಪಟ್ಟವರಿಗೆ ಮುದ್ರಿತ ಹೊಸ ಪ್ರತಿಯನ್ನು ನೀಡಲಾಗುವುದು ಮತ್ತು ಸಂಪುಟದಲ್ಲಿ ಅವರ ನೆರವನ್ನು ನೆನೆಯಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

