ಧಾರವಾಡ

ಕನಕ ಹತ್ತಿ ಬೀಜ ಪರಿಹಾರದಲ್ಲಿ ತಾರತಮ್ಯ ತಪ್ಪಿತಸ್ಥರ ವಿರುದ್ಧ ಕ್ರಮ: ಶಾಸಕ ಕೋನರಡ್ಡಿ

Published On :

ನವಲಗುಂದ: ನಕಲಿ ಕನಕ ಹತ್ತಿ ಬೀಜ ಬಿತ್ತಿ ಹಾನಿಗೊಳಗಾದ ರೈತರಿಗೆ ಬಂದ ಪರಿಹಾರ ವಿತರಣೆಯಲ್ಲಿ ನಡೆದ ತಾರತಮ್ಯ ಕುರಿತು ಶಾಸಕ ಎನ್.ಎಚ್. ಕೋನರಡ್ಡಿ ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪರಿಹಾರ ಹಣವನ್ನು ಕೃಷಿ ಅಧಿಕಾರಿಗಳು ತಮಗೆ ಇಷ್ಟ ಬಂದ ಹಾಗೆ ಹಂಚಿಕೆ ಮಾಡಿದ್ದಾರೆಂದು ರೈತರು ಶಾಸಕ ಮುಂದೆ ಗೋಳು ಹೇಳಿಕೊಂಡರು.
ಆಗ ಶಾಸಕರು, ಎಲ್ಲ ರೈತರಿಗೂ ಸಮನಾಗಿ ಹಂಚಿಕೆ ಮಾಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಬೇರೆ ತಾಲೂಕಿನಲ್ಲಿ ಯಾವ ರೀತಿ ಪರಿಹಾರಧನವನ್ನು ಹಂಚಿಕೆ ಮಾಡಿರುವುದನ್ನು ಗಮನಿಸಿ ರೈತರಿಗೆ ಪರಿಹಾರಧನವನ್ನು ಹಂಚಿಕೆ ಮಾಡಬೇಕೆಂದು ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿಗೆ ಒಟ್ಟು 4237 ಹೆಕ್ಟೇರ್ ಪ್ರದೇಶಕ್ಕೆ ಪ್ರತಿ ಹೆಕ್ಟೇರ್‌ಗೆ ರು. 6 ಸಾವಿರದಂತೆ ರು. 2.54 ಕೋಟಿ ಬಿಡುಗಡೆಯಾಗಿದೆ. ಆದರೆ, ಕೃಷಿ ಇಲಾಖೆಯ ಅಧಿಕಾರಿಗಳು ತಮ್ಮದೆಯಾದ ಮಾನದಂಡ ರೂಪಿಸಿಕೊಂಡು ಖಾತೆಗೆ ರು. 6 ಸಾವಿರ ಹಾಗೂ ಅದಕ್ಕೂ ಕಡಿಮೆ ಹಣದ ಚೆಕ್‌ಗಳನ್ನು ನೀಡಿದ್ದಾರೆಂದು ರೈತರು ಆರೋಪಿಸಿದರು.
ಕೃಷಿ ಅಧಿಕಾರಿಗಳಿಂದ ಸಮಸ್ಯೆಗಳ ಬಗ್ಗೆ ಉತ್ತರ ಬರದೆ ಇದ್ದಾಗ ಸ್ಥಳದಲ್ಲಿ ಜಿಲ್ಲಾಧಿಕಾರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಕನಕ ಹತ್ತಿ ಬೀಜ ಬಿತ್ತಿ ಹಾನಿಗೊಳಗಾದ ರೈತರಿಗೆ ನೀಡಿದ ಪರಿಹಾರ ಹಣದ ಚೆಕ್‌ನ್ನು ಸರಿಯಾಗಿ ವಿತರಿಸಿಲ್ಲ. ಇದರಲ್ಲಿ ಯಾರು ತಪ್ಪಿತಸ್ಥರಿದ್ದಾರೆಂದು ಜಿಲ್ಲಾಧಿಕಾರಿ ಒಂದು ಸಮಿತಿ ರಚಿಸಿ ತನಖೆ ಮಾಡಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.