ನಾಳೆ ಐವರು ಉದ್ಯಮಿಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 30
ಉತ್ತರ ಕರ್ನಾಟಕದ ಅಭಿವೃದ್ಧಿ ಪರ ಹೋರಾಟಗಳಿಂದಲೇ ಹೆಸರು ಗಳಿಸಿರುವ ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 86ನೇ ಸಂಸ್ಥಾಪಕರ ದಿನಾಚರಣೆ ಆ. 1ರಂದು ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಐವರು ಉದ್ಯಮಿಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.
ಮಧ್ಯಾಹ್ನ್ನ 3.30ಕ್ಕೆ ಜರುಗುವ ಈ ಕಾರ್ಯಕ್ರಮವನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ವಸಂತ ಲದವಾ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಸಂಸ್ಥೆಯಿಂದ ಸಂಸ್ಥಾಪಕರ ದಿನಾಚರಣೆಯ ನಿಮಿತ್ತ ವಾಣಿಜ್ಯ ರತ್ನ್ನ ಪ್ರಶಸ್ತ್ನಿ ನೀಡಲಾಗುತ್ತಿದೆ. ಫಾಸ್ಟನರ್ಸ್ ಆ್ಯಂಡ್ ಅಲೈಡ್ ಪ್ರೊಡಕ್ಟ್ಸ್‌ನ ಮುಖ್ಯಸ್ಥ ವೀರೇಂದ್ರ ಕೌಜಲಗಿ, ಪ್ರೊಸಿಟ್ರಾನ್ ಎಂಜಿನಿಯರಿಂಗ್ ಕಾರ್ಪೊರೇಶನ್‌ನ ಶ್ರೀಧರ ಉಪ್ಪಿನ, ಎಂ.ಎಂ. ಇಂಡಸ್ಟ್ರೀಯಲ್ ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸುಧೀರ ಮಾಂಡೆ, ಎಕ್ಸ್‌ಲ್ ಫುಡ್ಸ್‌ನ ಪ್ರಕ್ರಾಶ ಕನ್ನೂರ, ನಿರ್ಮಲ ಜ್ಯುವೆಲರ್ಸ್‌ನ ಓಂಕಾರಮಲ್ ರಾಠೋಡಗೆ ಈ ಬಾರಿ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಹಿರೋ ಮೋಟ್‌ರ್ಸ್ ಧಾರವಾಡದಲ್ಲಿ ಸ್ಥಾಪನೆಯಾಗುವ ಆಶಾಭಾವನೆ ಇದೆ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳ ನಿಯೋಗ ಚರ್ಚಿಸಿದೆ. ಧಾರವಾಡದ ಮುಮ್ಮಿಗಟ್ಟಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಂಪನಿಗೆ ತಾಂತ್ರಿಕ ತಜ್ಞರು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ ಎಂದರು. ಸಂಸ್ಥೆಯ ಉಪಾಧ್ಯಕ್ಷರಾದ ರಮೇಶ ಪಾಟೀಲ, ಕೆ.ಡಿ. ಕೊಟೇಕರ್, ಅಜ್ಜಂಪುರ ಶೆಟ್ರು ಇದ್ದರು.
ಪ್ರಶಸ್ತಿಗೆ ಆಯ್ಕೆಯಾದವರು
ಫಾಸ್ಟನರ್ಸ್ ಆ್ಯಂಡ್ ಅಲೈಡ್ ಪ್ರೊಡಕ್ಟ್ಸ್‌ನ ಮುಖ್ಯಸ್ಥ ವೀರೇಂದ್ರ ಕೌಜಲಗಿ, ಪ್ರೊಸಿಟ್ರಾನ್ ಎಂಜಿನಿಯರಿಂಗ್ ಕಾರ್ಪೊರೇಶನ್‌ನ ಶ್ರೀಧರ ಉಪ್ಪಿನ, ಎಂ.ಎಂ. ಇಂಡಸ್ಟ್ರೀಯಲ್ ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸುಧೀರ ಮಾಂಡೆ, ಎಕ್ಸ್‌ಲ್ ಫುಡ್ಸ್‌ನ ಪ್ರಕ್ರಾಶ ಕನ್ನೂರ, ನಿರ್ಮಲ ಜ್ಯುವೆಲರ್ಸ್‌ನ ಓಂಕಾರಮಲ್ ರಾಠೋಡ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

