ಕನ್ನಡ ಕಾಯಕದಲ್ಲಿ ವಿದ್ಯಾವರ್ಧಕ ಸಂಘ
ಧಾರವಾಡ: ಕನ್ನಡ ಭಾಷೆಯನ್ನು ಉಳಿಸುವುದರೊಂದಿಗೆ ನಾಡಿನ ಸಂಸ್ಕೃತಿ ಬೆಳೆಸಿ, ಪೋಷಿಸುವ ತಾಯಿ ಸ್ಥಾನದ ಕೆಲಸವನ್ನು ವಿದ್ಯಾವರ್ಧಕ ಸಂಘ ಮಾಡುತ್ತಿದೆ ಎಂದು ವಿಶ್ರಾಂತ ಕುಲಪತಿ ಹಾಗೂ ಶಿಕ್ಷಣ ತಜ್ಞ ಡಾ. ಎಂ.ಐ. ಸವದತ್ತಿ ಹೇಳಿದರು.
ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ದಿ. ಮಹಾಲಿಂಗಮ್ಮ ನಿಂಗಪ್ಪ ಸಾವಳಗಿ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾವರ್ಧಕ ಸಂಘದಿಂದಾಗಿಯೇ ಧಾರವಾಡದಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿಯ ಜಾತ್ರೆಗಳು ನಡೆಯುತ್ತಿವೆ ಎಂದರು.
ಹೆಣ್ಣು ಸಮಾಜದ ಕಣ್ಣು, ಹೆಣ್ಣು ಮಕ್ಕಳಿಗೆ ಜೀವನ ಎದುರಿಸುವ ಸಾಮರ್ಥ್ಯವಿದೆ. ಸಮಾಜದಲ್ಲಿ ನಮ್ಮ ಸಂಸ್ಕೃತಿ ಉಳಿದಿದೆ ಹಾಗೂ ಉಳಿಯುತ್ತಿದೆ ಎಂದರೆ ಅದಕ್ಕೆ ಮಹಿಳೆಯೇ ಕಾರಣ. ಕುಟುಂಬದ ಎಲ್ಲ ಪರಿಸ್ಥಿತಿಯನ್ನು ತೂಗಿಸಿಕೊಂಡು ಕುಟುಂಬವನ್ನು ಮೇಲೆತ್ತುವ ಕಾರ್ಯ ಮಾಡುವಲ್ಲಿ ಮಹಿಳೆಯರದ್ದೇ ಸಿಂಹಪಾಲು. ಆದರೂ ಇಂದು ಹಲವು ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಒಳಗಾಗಿರುವುದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ. ಮದರ ಥೇರೆಸಾ ಅವರ ನುಡಿಯಂತೆ ಪ್ರತಿಯೊಬ್ಬ ಮನುಷ್ಯ ಸಾವಿನಲ್ಲೂ ಘನತೆ, ಗೌರವ ಹೊಂದಿದಾಗ ಜೀವನ ಸಾರ್ಥಕ ಎಂದರು.
ಸಾಹಿತಿ ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ಮಹಿಳೆಯರಿಗೆ ಇಂದು ಎಲ್ಲ ರಂಗಗಳಲ್ಲಿಯೂ ವಿಫುಲ ಅವಕಾಶಗಳಿವೆ. ಅದನ್ನು ಯಶಸ್ವಿಯಾಗಿ ನಿಭಾಯಿಸಿ ಸಾಧನೆಗೈಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಅರವಿಂದ ದಳವಾಯಿ, ಬಿ.ವಿ. ಮಲ್ಲಾಪುರ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂಡೆ ಮಾತನಾಡಿದರು. ಸಂಘದ ಕಾರ್ಯಾಧ್ಯಕ್ಷ ಪ್ರೊ. ಬಿ.ವಿ. ಗುಂಜೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಯು.ಜಿ. ನಲವಡಿ, ಡಾ. ಟಿ.ಜಿ. ಪಾಟೀಲ, ಡಾ. ಎಸ್.ಎನ್. ಮ್ಯಾಗೇರಿ, ದತ್ತಿ ದಾನಿ ರಾಜೇಂದ್ರ ಸಾವಳಗಿ, ಶಿವಣ್ಣ ಬೆಲ್ಲದ, ಕೃಷ್ಣ ಜೋಶಿ ಮುಂತಾದವರು ಉಪಸ್ಥಿತರಿದ್ದರು.
ಸಂಗೀತಗಾರ ಡಾ. ಜಯದೇವಿ ಜಂಗಮಶೆಟ್ಟಿಯವರಿಂದ ಸಂಗೀತ ಕಾರ್ಯಕ್ರಮ ಮೂಡಿಬಂದಿತು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಡಾ. ಸುರೇಖಾ ಸಂಕನಗೌಡರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

