ಧಾರವಾಡ

ಹೆಚ್ಚುವರಿ ಡಿಜಿಪಿಯಾಗಿ ಧಾರವಾಡದಲ್ಲಿ ಅಧಿಕಾರ ವಹಿಸಿಕೊಂಡ ರವೀಂದ್ರನಾಥ

Published On :

ಧಾರವಾಡ: ಸಂಶೋಧನೆ ಮತ್ತು ಪುನರ್ ರಚನೆ ಇಲಾಖೆಗೆ ಸರ್ಕಾರ ನನ್ನನ್ನು ವರ್ಗಾವಣೆ ಮಾಡಿದೆ. ಆದರೆ, ಅದಕ್ಕಾಗಿ ನಿರ್ದಿಷ್ಟ ಕಚೇರಿ ಇಲ್ಲ. ಹಾಗಾಗಿ ಡಿಜಿಪಿ ಅವರನ್ನು ಭೇಟಿಯಾಗಿ ಅವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಸಂಶೋಧನೆ ಮತ್ತು ಪುನರ್ ರಚನೆ ಇಲಾಖೆ ಹೆಚ್ಚುವರಿ ಡಿಜಿಪಿ ರವೀಂದ್ರನಾಥ ಹೇಳಿದರು.
ಕಾಫಿಶಾಪ್ ಫೋಟೋ ವಿವಾದದ ಬಳಿಕ ಧಾರವಾಡಕ್ಕೆ ವರ್ಗಾವಣೆ ಗೊಂಡಿದ್ದ ಅವರು ನಗರದಲ್ಲಿ ಮಂಗಳವಾರ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಡಿಜಿಪಿ ಸ್ಥಾನದಿಂದ ಈ ಇಲಾಖೆಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಜೂ.14ರ ವರೆಗೆ ಅಧಿಕಾರ ಸ್ವೀಕರಿಸಲು ಸಮಯಾವಕಾಶ ಇತ್ತು. ಈ ಹಿನ್ನೆಲೆಯಲ್ಲಿ ಇಂದು ಧಾರವಾಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದೇನೆ.  ಸದ್ಯ ಫೋಟೋ ವಿವಾದ ಕುರಿತು ತನಿಖೆ ನಡೆದಿರುವುದರಿಂದ, ಆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ರಾಜಿನಾಮೆ ನೀಡಿದ ಕಾರಣ ಸರ್ಕಾರದ ನಿಯಮಗಳ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಸದ್ಯ ಅಧಿಕಾರ ವಹಿಸಿಕೊಂಡಿರುವ ಸಂಶೋಧನೆ ಮತ್ತು ಪುನರ್ ರಚನೆ ಇಲಾಖೆಯಲ್ಲಿ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.