ಧಾರವಾಡ

ಖರೀದಿ, ವರ್ಗಾವಣೆ: ವಾಣಿಜ್ಯೋದ್ಯಮ ಸಂಸ್ಥೆ ಮನವಿಗೆ ಸ್ಪಂದನೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 20
ಮಾಸಿಕ ರಿಟರ್ನ್ ಜೊತೆಗೆ ಖರೀದಿ, ವಿಕ್ರಿ ಮತ್ತು ಸರಕು ವರ್ಗಾವಣೆ ವಿವರ ದಾಖಲಿಸುವ ವ್ಯವಸ್ಥೆ ಮುಂದೂಡಬೇಕೆಂದು ಹಾಗೂ ಈ ಕುರಿತು ಇನ್ನೂ ಹೆಚ್ಚಿನ ತಿಳಿವಳಿಕೆ ನೀಡುವಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಲ್ಲಿಸಿರುವ ಮನವಿಗೆ ಸ್ಪಂದಿಸಿರುವ ವಾಣಿಜ್ಯ ತೆರಿಗೆ ಇಲಾಖೆ, ಈ ಕುರಿತು ಸುತ್ತೋಲೆ ಹೊರಡಿಸಿದೆ.
ತೆರಿಗೆ ವಿನಾಯಿತಿ ಹೊಂದಿರುವ ವ್ಯಾಪಾರಸ್ಥರಿಗೆ ಸ್ಥಾನಿಕವಾಗಿ ಖರೀದಿ ಹಾಗೂ ವಿಕ್ರಿ ಮಾಡಿರುವ ಬಗ್ಗೆ ಕರ್ನಾಟಕ ವ್ಯಾಟ್ ಆ್ಯಕ್ಟ್ 2003 ಅಡಿ ವ್ಯಾಪಾರಸ್ಥರು ಇ-ಅಂತರ್‌ಜಾಲ ವ್ಯವಸ್ಥೆಯಿಂದ ಹೊರಗಿಡಲಾಗಿದೆ. ಈ ಮೊದಲು ವಿನಾಯಿತಿ ಪಡೆದ ಹಾಗೂ ತೆರಿಗೆ ವಿನಾಯಿತಿಗೊಳಪಟ್ಟ ಸರಕು ವ್ಯಾಪಾರಸ್ಥರಿಗೆ ಅಪ್‌ಲೋಡ್ ಮಾಡಬೇಕೆಂದು ತಿಳಿಸಲಾಗಿತ್ತು. ಆದರೆ ಸುತ್ತೋಲೆ ಪ್ರಕಾರ ವಿನಾಯಿತಿ ಹೊಂದಿದ ಸರಕುಗಳಿಗೆ ಒಟ್ಟು ಮೌಲ್ಯ ಆಧರಿಸಿ ನೋಂದಾಯಿತ ಹೊಂದಿದ ವ್ಯಾಪಾರಸ್ಥರು (ಯುಆರ್‌ಡಿ) ಖರೀದಿ ಅಥವಾ ವಿಕ್ರಿಯೆಂದು ಮಾತ್ರ ಅಪ್‌ಲೋಡ್ ಮಾಡುವ ಅವಕಾಶ ನೀಡಲಾಗಿದೆ.
21-6-2014 ರಿಂದ 29-7-2014ರವರೆಗೆ ವ್ಯಾಪಾರಸ್ಥರಿಗೆ ಶೈಕ್ಷಣಿಕ ಅವಧಿ ಎಂದು ಪರಿಗಣಿಸಲಾಗುವುದು ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು ತಮ್ಮ ಸುತ್ತೋಲಿಯಲ್ಲಿ ತಿಳಿಸಿದ್ದಾರೆ. ರು. 50 ಲಕ್ಷಕ್ಕಿಂತ ಮೇಲ್ಪಟ್ಟು ಹಾಗೂ ರು. 1 ಕೋಟಿವರೆಗೆ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ 21-7-2014 ರಿಂದ 20-9-2014ರವರೆಗೆ ಶೈಕ್ಷಣಿಕ ಅವಧಿಯೆಂದು ಪರಿಗಣಿಸಲಾಗುವುದು. ಮೇ 2014ರ ನಂತರ ಶೈಕ್ಷಣಿಕ ಅವಧಿ ಸಂದರ್ಭದಲ್ಲಿ ವ್ಯಾಪಾರಸ್ಥರು ರಿಟರ್ನ್ ಸಲ್ಲಿಸುವಾಗ ತೆಗೆದುಕೊಂಡ ಶೈಕ್ಷಣಿಕ ಅವಧಿಯ ದಿನಗಳನ್ನು ನಮೂದಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಿದ್ದಾರೆ. ಈ ಅವಧಿಯನ್ನು ವ್ಯಾಪಾರಸ್ಥರ ಶೈಕ್ಷಣಿಕ ಅವಧಿಯೆಂದು ಪರಿಗಣಿಸಿ ಸಂಬಂಧಿಸಿದ ಇಲಾಖೆಯಿಂದ ದಂಡ ಹಾಗೂ ಕ್ರಮ ಜರುಗಿಸುವ ಪ್ರಸ್ತಾವನೆ ಇರುವುದಿಲ್ಲ. ವಿಭಾಗೀಯ ಮಟ್ಟದ ಎಲ್ಲ ವಾಣಿಜ್ಯ ತೆರಿಗೆ ಅಧಿಕಾರಿಗಳು ತಿಳಿವಳಿಕೆ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ರಚನಾತ್ಮಕವಾಗಿ ಹಮ್ಮಿಕೊಳ್ಳಬೇಕೆಂದು ಆಯುಕ್ತರು ಸುತ್ತೋಲೆಯಲ್ಲಿ ಸೂಚಿಸಿದ್ದಾರೆಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.