ಸಂಸತ್‌ನಲ್ಲೂ ಮಹಿಳಾ ಮೀಸಲಾತಿ ಬರಲಿ
ಧಾರವಾಡ: ಪಂಚಾಯತ್ ರಾಜ್ ಮಟ್ಟದಲ್ಲಿ ಸಾಧ್ಯವಾಗಿರುವ ಮಹಿಳಾ ಮೀಸಲಾತಿ ಸಂಸತ್ತಿನಲ್ಲೂ ಜಾರಿಗೊಂಡರೆ ಮಾತ್ರ ಮಹಿಳಾ ಸಮಾನತೆಯ ಪ್ರಮುಖ ಹಂತ ತಲುಪಿದಂತಾಗುತ್ತದೆ ಎಂದು ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ. ಶಾಲಿನಿ ರಘುನಾಥ ಹೇಳಿದರು.
ಇಲ್ಲಿಯ ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಲೀಲಾವತಿ ನಾಗಮ್ಮನವರ ದತ್ತಿ ಅಂಗವಾಗಿ ಹಮ್ಮಿಕೊಂಡ ಮಹಿಳಾ ದಿನಾಚರಣೆಯ ಸಾಧಕಿಯರ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹಿಳೆಯ ಅವಕಾಶ ತಪ್ಪಿಸಿ ಏನೇ ಯೋಜನೆ ರೂಪಿಸಿದರೂ ಅದು ತೋರಿಕೆಯ ಅನುಕಂಪ. ಮಹಿಳೆಗೆ ಎಲ್ಲ ಹಂತದಲ್ಲೂ ಮೀಸಲಾತಿ ಅಗತ್ಯ ಎಂದರು.
ಪೇಟೆಯಲ್ಲಿ ತರಕಾರಿ ಎಲ್ಲರಿಗೂ ಬೇಕು. ಆದರೆ ಮಾರುವ ಮಹಿಳೆಗೆ ಯಾವ ಪ್ರಾಥಮಿಕ ಸೌಲಭ್ಯವೂ ಇರುವುದಿಲ್ಲ. ಪುರಾಣಗಳನ್ನು ನೋಡಿದರೆ ಎಲ್ಲ ದೇವರುಗಳ ಶಕ್ತಿ ಕೇಂದ್ರ ಸ್ತ್ರೀ ದೇವತೆಗಳು. ಪ್ರಾಧಾನ್ಯತೆ ಮಾತ್ರ ಪುರುಷ ಅವತಾರಗಳಿಗೆ ಸೃಷ್ಟಿಯಾಗಿದೆ. ಭಾಷೆ ಎಂಬುದು ಪುರುಷ ಪ್ರಾಧಾನ್ಯತೆಯ ಸೃಷ್ಟಿಯಾದ ಕಾರಣ ಸ್ತ್ರೀ ಅಭಿವ್ಯಕ್ತಿ ಸಂವೇದನೆಯಲ್ಲಿ ಸಾಧ್ಯವಾಗುವುದಿಲ್ಲ. ಆದರೆ ಮಹಿಳೆ ಆತಂಕ ಪಡಬೇಕಿಲ್ಲ. ಜೈವಿಕ ವೈವಿಧ್ಯತೆಯೆ ಸ್ತ್ರೀ ಕುಲದ ಅನನ್ಯತೆ ಎಂದು ಹೇಳಿದರು.
ಹಿರಿಯ ಶಿಕ್ಷಣ ತಜ್ಞೆ ಶಾಂತಲಾ ಹಿರೇಮಠ, ಭಾರತೀಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದ ಪಠ್ಯಕ್ರಮದ ಪೂರ್ವಾಗ್ರಹ ಪೀಡಿತ ಲಿಂಗ ಸಮಾನತೆ ಬಗ್ಗೆ ರಾಷ್ಟ್ರೀಯ ಶಿಕ್ಷಣ ಮಂಡಳಿ ಈಗ ಎಚ್ಚೆತ್ತುಕೊಂಡಿದೆ. ಅದಕ್ಕೆ ಕಾರಣ ಮಹಿಳಾ ಪರ ಆಂದೋಲನಗಳು ಎಂದರು. ವೀಣಾ ಕುಲಕರ್ಣಿ ಸ್ಮರಣೆಯಲ್ಲಿ ಎಚ್.ಎಫ್. ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದಿಂದ ಕೃತಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಂತಲಾ ಹಿರೇಮಠ ದತ್ತಿ ಅಂಗವಾಗಿ ವಾಚನಾಲಯ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಮಲ್ಲಪ್ಪ ಶಿಂತ್ರಿ ದತ್ತಿ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ ಅಚ್ಯುತ ರಾವಳ ಹಾಗೂ ಮಾಲತೇಶ ಮಾಳಗಿ ದತ್ತಿ ಅಂಗವಾಗಿ ವಿಜೇತ ವಿದ್ಯಾರ್ಥಿಯರಿಗೆ ಬಹುಮಾನ ನೀಡಲಾಯಿತು. ಸಂಸ್ಥೆಯ ಪ್ರಾಚಾರ್ಯೆ ವಿದ್ಯಾ ನಾಡಿಗೇರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸುಧಾರಣಾ ಸಮಿತಿಯ ಉಪಾಧ್ಯಕ್ಷ ಮೋಹನ ನಾಗಮ್ಮನವರ, ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಶಿಕ್ಷಕಿ ಲಲಿತಾ ಹರ್ಲಾಪುರ ಇದ್ದರು. ಎನ್.ಎ. ಮುಲ್ಲಾ ಸ್ವಾಗತಿಸಿದರು. ಜಯಶ್ರೀ ವಡವಡಗಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

