ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ
ಹುಬ್ಬಳ್ಳಿ: ಕಠಿಣ ಪರಿಶ್ರಮ ಹಾಗೂ ಸಾಧನೆ ಮಾಡಬೇಕೆಂಬ ಛಲವಿದ್ದಲ್ಲಿ ಅಂಗವೈಕಲ್ಯವೂ ಅಡ್ಡಿಯಾಗದು.
ಈ ಮಾತು ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಸಿಐಸಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮಾಬುಸಾಬ ಸೈದುನವರ ಅವರಿಗೆ ಸರಿ ಹೊಂದುತ್ತದೆ.
ಕೈ-ಕಾಲುಗಳ ಬೆಳವಣಿಗೆ ಸರಿಯಾಗಿ ಇಲ್ಲದಿದ್ದರೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹೊಂದಿರುವ ಮಾಬುಸಾಬ, ಬುಧವಾರದಿಂದ ಆರಂಭಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಆತ್ಮವಿಶ್ವಾಸದಿಂದ ಹಾಜರಾಗಿದ್ದಾನೆ. ನೂಲ್ವಿಯ ಎಸ್‌ಜೆಆರ್‌ಯು ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಮಾಬುಸಾಬನ ಹಾಜರಾತಿ ವಿಕಲಚೇನರಿಗೆ ಅನುಕಂಪ ಬೇಕಿಲ್ಲ. ಪ್ರೋತ್ಸಾಹ ಬೇಕು ಎಂಬ ವಾಸ್ತವ ಸಾರಿ ಹೇಳುವಂತಿತ್ತು.
ಅದ್ಭುತ ಪ್ರತಿಭೆ: ಮಾಬುಸಾಬ, ವಿಕಲಾಂಗನಾದರೂ ಭಾಷಣ, ಸಂಗೀತ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರತಿಭೆ ಮೆರೆದಿದ್ದಾನೆ. ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾನೆ. ಸಾಮಾನ್ಯ ವಿದ್ಯಾರ್ಥಿಗಳೂ ನಾಚುವಂತೆ ತನ್ನ ಪ್ರತಿಭೆ ಅನಾವರಣಗೊಳಿಸಿ, ಶಿಕ್ಷಕರ ಹಾಗೂ ಸಹವರ್ತಿಗಳ ಪ್ರಶಂಸೆ ಗಳಿಸಿದ್ದಾನೆ.
ಸ್ಪಷ್ಟವಾಗಿ ಮಾತನಾಡಬಲ್ಲ ಮಾಬುಸಾಬ, ಇಂಪಾಗಿ ಹಾಡುಬಲ್ಲ. ಆತನಲ್ಲಿರುವ ಆತ್ಮವಿಶ್ವಾಸ, ನಂಬಿಕೆ, ಶ್ರದ್ಧೆ ಇತರರಿಗೂ ಮಾದರಿಯಾಗಲಿ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಆರ್.ಎಫ್. ಭರಮಗೌಡ್ರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

