ಧಾರವಾಡ

ಸ್ತ್ರೀಗೆ ಕಾನೂನು ಜ್ಞಾನ ಅಗತ್ಯ

Published On :

ಧಾರವಾಡ: ಈ ಆಧುನಿಕ ಜಗತ್ತಿನಲ್ಲಿ ಮಹಿಳೆಗೆ ಕೇವಲ ತಾಂತ್ರಿಕ ಜ್ಞಾನ ಇದ್ದರೆ ಸಾಲದು, ಕಾನೂನಿನ ಪರಿಜ್ಞಾನವೂ  ಅವಶ್ಯಕ ಎಂದು ಹಿರಿಯ ನ್ಯಾಯವಾದಿ ಪ್ರಫುಲ್ಲಾ ನಾಯಕ ಪ್ರತಿಪಾದಿಸಿದರು.
ನಗರದ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಿತ್ಯ ಜೀವನ ಹಾಗೂ ಸಂಸಾರದಲ್ಲಿ ಕಾನೂನಿನ ಅರಿವು ಇದ್ದಾಗ ಮಾತ್ರ ಯಾವುದೇ ಅಡ್ಡಿ ಆತಂಕವಿಲ್ಲದೆ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.
ಹೆಣ್ಣು ಹುಟ್ಟಿದಾಗಿನಿಂದ ಕೊನೆಯ ಉಸಿರು ಇರುವವರಿಗೂ ತನ್ನ ಬೇಕು ಬೇಡಿಕೆಗಳಿಗೆ ಹೋರಾಟ ಮಾಡಿಯೇ ಪಡೆಯಬೇಕು. ತಂದೆಯ ಮನೆಯಿಂದಲೇ ಹೆಣ್ಣು-ಗಂಡೆಂಬ ಭೇದ ಶುರುವಾಗುತ್ತದೆ. ಗಂಡನ ಮನೆಯಲ್ಲಿ ಎಲ್ಲ ರೀತಿಯ ಕಷ್ಟ ನುಂಗಿ ಅತ್ತೆ, ಮಾವ, ಪತಿ ಹಾಗೂ ನಾದಿನಿ ಎಲ್ಲರ ಸೇವೆ ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಸಭೆ ಮತ್ತು ಸಂಸತ್ತಿನಲ್ಲಿ ಇಲ್ಲಿಯವರೆಗೂ ಶೇ. 30 ಮೀಸಲಾತಿ ಮರೀಚಿಕೆಯಾಗಿದೆ. ಮಹಿಳೆಯರಿಗೆ ನೀಡಿರುವ ವಿಶೇಷ ಕಾನೂನನ್ನು ಬಳಸಿಕೊಂಡು ಧೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಸಮಾಜ ಅವಳನ್ನು ಗೌರವದಿಂದ ಕಾಣಲು ಸಾಧ್ಯ. ಸಮಾನ ಹಕ್ಕು, ಮಹಿಳಾ ಶೋಷಣೆಯ ವಿರುದ್ಧ ಕಾನೂನು, ಆಸ್ತಿಯ ಸಮಪಾಲು ಕಾನೂನು, ವಿವಾಹ ಕಾನೂನು ಸರಿಯಾಗಿ ಅರಿತು ಕೊಂಡಾಗ ಮಾತ್ರ ಮಹಿಳೆ ಸಬಲಳಾಗಲು ಸಾಧ್ಯ ಎಂದು ಹೇಳಿದರು.
ಕಾಲೇಜಿನ ಶೈಕ್ಷಣಿಕ ಡೀನ್ ಡಾ. ವಿಜಯಾ ಸಿ. ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಮೋಹನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೇಘಾ ಹುಕ್ಕೇರಿ, ವರ್ಷಾ ಜೋಶಿ ಪ್ರತಿಭಾ ಸೂರ್ಯವಂಶಿ, ಭಾರತಿ ಸುಣಗಾರ, ವೀಣಾ ದೇಸಾಯಿ, ಅಪರ್ಣಾ ಪೂಜಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.