ಸಂಸ್ಕಾರವಿಲ್ಲದ ಶಿಕ್ಷಣಕ್ಕೆ ಬೆಲೆ ಇಲ್ಲ: ರಮೇಶ ಉಮರಾಣಿ
ಧಾರವಾಡ: ಶಿಕ್ಷಣ ಸಂಸ್ಥೆಗಳು ಕೇವಲ ಯೋಗ್ಯತಾ ಪತ್ರಗಳನ್ನು ನೀಡಬಹುದೆ, ಹೊರತು ಯೋಗ್ಯತೆಯನ್ನಲ್ಲ. ಸಂಸ್ಕಾರ ಇಲ್ಲದ ಶಿಕ್ಷಣಕ್ಕೆ ಯಾವುದೇ ಬೆಲೆಯಿಲ್ಲ ಎಂದು ಚಿಂತಕ ರಮೇಶ ಉಮರಾಣಿ ಹೇಳಿದರು.
ಶನಿವಾರ ಇಲ್ಲಿಯ ಜೆಎಸ್ಸೆಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಉನ್ನತ ಪದವಿ ಪಡೆದ ಯುವ ಸಮೂಹದಲ್ಲಿ ಕೌಟುಂಬಿಕ ಕಲಹ, ವಿವಾಹ ವಿಚ್ಛೇದನದಂತಹ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪ್ರಮುಖ ಸಂಸ್ಕಾರದ ಕೊರತೆ ಎಂದು ಹೇಳಿದರು. ಪಾಶ್ಚಿಮಾತ್ಯ ಶಿಕ್ಷಣದೊಂದಿಗೆ ನಮ್ಮ ಸಂಸ್ಕಾರ ಸಮ್ಮಿಲತವಾದರೆ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ. ಪಠ್ಯಕ್ರಮ ಕೇವಲ ಶಿಕ್ಷಣದ ಒಂದು ಮುಖ ಮಾತ್ರ. ವಿದ್ಯಾರ್ಹತೆಯಿಂದಲೇ ಉತ್ತಮ ಜೀವನ ನಿರ್ವಹಣೆ ಸಾಧ್ಯವಿಲ್ಲ. ಏಕಾಗ್ರತೆಯ ಕೊರತೆಯಿಂದ ಇಂದಿನ ಯುವ ಜನಾಂಗ ಖಿನ್ನತೆಯತ್ತ ಜಾರುತ್ತಿದೆ ಎಂದರು. ಪ್ರಾಚಾರ್ಯ ಅಜೀತ ಪ್ರಸಾದ ಮಾತನಾಡಿ, ಮಿಡಿಯುವ ಹೃದಯ, ವಿಚಾರ ಮಾಡುವ ಮೆದಳು, ಸಹಾಯ ಮಾಡುವ ಹಸ್ತಗಳು ಇಂದಿನ ಅವಶ್ಯಕತೆಯಾಗಿದೆ. ಹಣವೇ ಸರ್ವಸ್ವವಲ್ಲ. ಆದರ್ಶಗಳಿಲ್ಲದ ಜೀವನ ಬರಡು ಎಂದರು. ಸೂರಜ್ ಜೈನ್, ಶರದ್ ದೇಸಾಯಿ, ಜೀನೆಂದ್ರ ಕುಂದಗೋಳ, ಶ್ರವಣ ಯೋಗಿ ವಿವೇಕ ಲಕ್ಷ್ಮೇಶ್ವರ, ಪಲ್ಲವಿ ಕಟ್ಟಿ, ಮಂಜುನಾಥ ಜೆ.ಸಿ, ಜ್ಯೋತಿ ಹುದ್ದಾರ, ದಿವ್ಯಾಂಶ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

