ಕ್ರೈಸ್ತ ಎಂಬಿಎ ಕಾಲೇಜ್ಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 16
ನಗರದ ಕೆಎಲ್ಇ ಐಎಂಎಸ್ಆರ್ನಲ್ಲಿ ನಡೆದ ಬಾಂಬೂಜಲ್-2014 ರಾಷ್ಟ್ರ ಮಟ್ಟದ ಜಾಹೀರಾತು ಉತ್ಸವದಲ್ಲಿ ಬೆಂಗಳೂರಿನ ಕ್ರೈಸ್ತ ಎಂಬಿಎ ಕಾಲೇಜ್ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು.
ಇದಕ್ಕೂ ಮೊದಲು ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಧಾರವಾಡ ಆಕಾಶವಾಣಿ ನಿಲಯ ನಿರ್ದೇಶಕ ಸಿ.ಯು. ಬೆಳ್ಳಕ್ಕಿ, ಜೀವನದಲ್ಲಿ ಹಾಸು ಹೊಕ್ಕಾಗಿರುವ ಜಾಹೀರಾತು ಹಾಗೂ ಮಾಧ್ಯಮ ರಹಿತ ಜೀವನವನ್ನು ಕಲ್ಪಿಸಿಕೊಳ್ಳಲು ಅಸಾಧ್ಯ ಎಂದರು.
ಜಾಹೀರಾತು ಜಗತ್ತು ರಚನಾತ್ಮಕ ಮಾಧ್ಯಮದ ಒಂದು ಅಂಗವಾಗಿದ್ದು ಇಲ್ಲಿ ಸೃಜನಾತ್ಮಕತೆ ಹಾಗೂ ರಚನಾತ್ಮಕತೆ ಹೆಚ್ಚಿನ ಮಹತ್ವವಿರುವ ಕಾರಣದಿಂದ ಕೌಶಲ್ಯಗಳ ಮೂಲಕ ಪರಿಣಾಮಕಾರಿ ಜಾಹೀರಾತುಗಳನ್ನು ರೂಪಿಸಿ ಜನಜೀವನ ಜಗತ್ತಿನಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಅತಿಥಿಯಾಗಿದ್ದ ಕಮಲ್ ಟ್ರೇಡಿಂಗ್ ಕಾರ್ಪೋರೇಶನ್ನ ಮೋಹಿತ ಮೆಹತಾ, ಪರಿಪೂರ್ಣ ವ್ಯಕ್ತಿತ್ವದ ಜತೆಗೆ ಪರಿಪೂರ್ಣ ಮಾನವನಾಗಲು ನಿರಂತರ ಪರಿಶ್ರಮ ಮುಖ್ಯ. ಅಂತೆಯೇ, ಜಾಹೀರಾತು ಜಗತ್ತಿನಲ್ಲಿ ಮುನ್ನಡೆಯಲು ವಿದ್ಯಾರ್ಥಿಗಳು ಸೃಜನಶೀಲರಾಗಬೇಕೆಂದರು.
ಅಧ್ಯಕ್ಷತೆವಹಿಸಿದ್ದ ಐಎಂಎಸ್ಆರ್ ನಿರ್ದೇಶಕ ಡಾ. ಪಿ.ಬಿ. ರೂಢಗಿ, ಮ್ಯಾನೇಜ್ಮೆಂಟ್ ವಲಯದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಇಂತಹ ಉತ್ಸವಗಳನ್ನು ಆಯೋಜಿಸುವುದು ಅವಶ್ಯಕವಾಗಿದ್ದು, ವಿದ್ಯಾರ್ಥಿಗಳಲ್ಲಿ ಹೊಸತನವನ್ನು ತರುವಲ್ಲಿ ಸಹಾಯಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕೊನೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಕರ್ಟನ್ ರೈಸರ್ ವಿಭಾಗದಲ್ಲಿ ಹುಬ್ಬಳ್ಳಿಯ ಐಬಿಎಂಆರ್ ರನ್ನರ್ಸ್ ಅಪ್ ಹಾಗೂ ಬೆಂಗಳೂರಿನ ಕ್ರೈಸ್ತ ಎಂಬಿಎ ಕಾಲೇಜ್ ವಿನ್ನರ್ಸ್, ಆ್ಯಡ್ ಪ್ಲಿಕ್ಸ್ಟರ್ ವಿಭಾಗದಲ್ಲಿ ಬೆಂಗಳೂರಿನ ಎಲ್.ಎನ್. ವೆಲಿಂಗಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ರನ್ನರ್ಸ್ ಅಪ್ ಹಾಗೂ ಧಾರವಾಡದ ಕೌಸಾಳಿ ಇನ್ಸ್ಟಿಟ್ಯೂಟ್ ವಿನ್ನರ್ಸ್ ಪ್ರಶಸ್ತಿ, ಆ್ಯಡೋ ಮೇನಿಯಾ ವಿಭಾಗದಲ್ಲಿ ಹುಬ್ಬಳ್ಳಿಯ ಐಬಿಎಂಆರ್ ರನ್ನರ್ಸ್ ಅಪ್ ಹಾಗೂ ವಿಜಾಪೂರದ ಬಿಎಲ್ಡಿಇ ಸಂಸ್ಥೆಯ ಎ.ಎಸ್. ಪಾಟೀಲ ಇನ್ಸ್ಟಿಟ್ಯೂಟ್ ವಿನ್ನರ್ಸ್ ಪ್ರಶಸ್ತಿ, ಆ್ಯಡ್ ವಿಜ್ ವಿಭಾಗದಲ್ಲಿ ಬೆಂಗಳೂರಿನ ಕ್ರೈಸ್ತ್ ಎಂಬಿಎ ಕಾಲೇಜ್ ರನ್ನರ್ಸ್ ಅಪ್, ಬೆಳಗಾವಿ ಭರತೇಶ ಜಿಬಿಎಸ್ ಕಾಲೇಜ್ ಮತ್ತು ಕೆಎಲ್ಎಸ್ ಐಎಂಇಆರ್ ಕಾಲೇಜ್ ವಿನ್ನರ್ಸ್ ಹಾಗೂ ಆ್ಯಡ್-ಗೋಸಾಮರ್ ಪ್ರಶಸ್ತಿಯನ್ನು ಚೇತನಾ ಬಿಜಿನೆಸ್ ಸ್ಕೂಲ್, ಹುಬ್ಬಳ್ಳಿಯ ಭಾಗ್ಯಶ್ರೀ ಪಡೆದರು.
ಪ್ರೊ. ನಿತೀನ ಧೋಪೇಶ್ವರ, ನಮೃತಾ, ರೀನಾ, ಪ್ರೊ. ಶ್ವೇತಾ ಮೆಣಸಿನಕಾಯಿ, ಚಾಂದನಿ ಕೋಠಾರಿ, ಬೆಂಜಾಮಿನ್, ನಿಶಾಂತ್ ಶೆಟ್ಟಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

