ಅಹಿಂದ ಒಲವಿದ್ದರೆ ಗೆಲವು ಸುಲಭ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 19
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿದ್ದರೂ, ಅಹಿಂದ ಮತಗಳನ್ನು ಸೆಳೆಯುವವರ ಗೆಲುವು ಸಲೀಸು.
ಒಟ್ಟು 8 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಧಾರವಾಡ ಲೋಕಸಭೆ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 15,31,478. ಈ ಪೈಕಿ ಲಿಂಗಾಯತ ಸಮುದಾಯದ ಮತಗಳು 4 ಲಕ್ಷಕ್ಕೂ ಹೆಚ್ಚು. ಇತರ ಎಲ್ಲ ಸಮುದಾಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರಿದ್ದಾರೆ. ಆದರೆ ಅಹಿಂದ ಸಮುದಾಯಗಳ ಲೆಕ್ಕ ಹಾಕಿದರೆ, ಮತದಾರರ ಸಂಖ್ಯೆ 10 ಲಕ್ಷ ಮೀರುತ್ತದೆ. ಹೀಗಾಗಿ ಅಹಿಂದ ಪಂಗಡಗಳ ಮತದಾರರ ಒಲವು ಪಡೆಯುವ ಅಭ್ಯರ್ಥಿಯ ಕೊರಳಿಗೆ ಜಯಮಾಲೆ ಸರಳವಾಗಿ ಬೀಳುವುದು.
ಕ್ಷೇತ್ರದಲ್ಲಿ ಎರಡನೇ ದೊಡ್ಡ ಸಮುದಾಯ ಮುಸ್ಲಿಮರದು. ಸುಮಾರು 3.25 ಲಕ್ಷ ಮುಸ್ಲಿಂ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಪರಿಶಿಷ್ಟ ಜಾತಿಯ 1.50 ಲಕ್ಷ, ಪರಿಶಿಷ್ಠ ಪಂಗಡದ 70 ಸಾವಿರ, ಕ್ರಿಶ್ಚಿಯನ್ ಸಮುದಾಯದ 60 ಸಾವಿರ, ಕುರುಬ ಜನಾಂಗದ 1 ಲಕ್ಷ, ಮರಾಠಾ ಸಮಾಜದ 60 ಸಾವಿರ, ಬ್ರಾಹ್ಮಣ ಸಮುದಾಯದ 60 ಸಾವಿರ ಮತದಾರರು, ಎಸ್ಎಸ್ಕೆ ಕ್ಷತ್ರಿಯ ಪಟೇಗಾರರ 20 ಸಾವಿರ, ಸಿಕ್ಕಲಿಗಾರ ಹಾಗೂ ಇತರ 20 ಸಾವಿರ, ಜೈನ ಸಮುದಾಯದ 20 ಸಾವಿರ ಮತದಾರರು ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಇದ್ದಾರೆ.
ಧಾರವಾಡ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಸವರ್ಣೀಯ ಸಮುದಾಯಗಳು ಚುನಾವಣೆ ವೇಳೆ ಒಂದಾಗಿ ಮತ ಚಲಾಯಿಸಿದರೂ ಆ ಅಭ್ಯರ್ಥಿಯ ಗೆಲುವು ಕಷ್ಟಸಾಧ್ಯ. ಅಹಿಂದ ವರ್ಗದ 10 ಲಕ್ಷಕ್ಕೂ ಹೆಚ್ಚು ಮತಗಳು ಇರುವುದರಿಂದ, ಅವುಗಳ ಕೃಪೆಗೆ ಪಾತ್ರರಾಗಲೇ ಬೇಕು. ಅಲ್ಲದೆ, ಗೆಲ್ಲಬೇಕಾದರೆ ಲಿಂಗಾಯತ ಹಾಗೂ ಮುಸ್ಲಿಂ ಮತದಾರರ ಒಲವೂ ಗಳಿಸಬೇಕು.
ಪಕ್ಷ ಯಾವುದೇ ಇರಲಿ, ಪಕ್ಷದ ಘೋಷಣೆಗಳು ಎಷ್ಟೇ ಆಕರ್ಷಕವಾಗಿರಲಿ, ಆ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರೇ ಇರಲಿ, ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗೆ ಮಾತ್ರ ಲಿಂಗಾಯತ, ಮುಸ್ಲಿಂ ಹಾಗೂ ಅಹಿಂದ ಮತದಾರರ ಆಶೀರ್ವಾದ ಬೇಕು. ಒಂದೇ ಸಮುದಾಯ ನೆಚ್ಚಿಕೊಂಡು ಚುನಾವಣೆ ಕಣಕ್ಕಿಳಿಯುವ ಅಭ್ಯರ್ಥಿಗೆ ಸೋಲು ಕಟ್ಟಿಟ್ಟ ಬುತ್ತಿ.
-ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

