ಜನರ ಕಣ್ಣೆದುರು ಇತಿಹಾಸ ತರುವ ದೊಡ್ಡಾಟ: ಅರ್ಕಸಾಲಿ
ಧಾರವಾಡ: ಆಕರ್ಷಕ ವೇಷ ಭೂಷಣಗಳಿಂದ ಜನರಿಗೆ ಕಣ್ಣೆದುರಿಗೆ ಇತಿಹಾಸ ತಂದಿಡುವ ವೇದಿಕೆಯೆಂದರೆ ಅದು ದೊಡ್ಡಾಟ ಎಂದು ಉಪನ್ಯಾಸಕ ಶಂಕರ ಅರ್ಕಸಾಲಿ ಅಭಿಪ್ರಾಯಪಟ್ಟರು.
ಇಲ್ಲಿಯ ಮುರುಘಾಮಠದ ಆವರಣದಲ್ಲಿ ಜರುಗಿದ ಮೂಡಲಪಾಯ ದೊಡ್ಡಾಟ ರಂಗ ತರಬೇತಿ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು. ನಮ್ಮಲ್ಲಿನ ದೊಡ್ಡಾಟದ ವೇಷಭೂಷಣಗಳಿಗೆ ಸುಮಾರು 150 ವರ್ಷಗಳ ಇತಿಹಾಸವಿದ್ದು, ಮೊದಲು ಬೋರಂಗಿ ಕೀಟದ ರೆಕ್ಕೆಗಳನ್ನು ಬಳಸಿ ಮಾಡಿದ ವೇಷಭೂಷಣಗಳನ್ನು ಬಳಸುತ್ತಿದ್ದರು. ಬಳಿಕ ಮುತ್ತು, ಗಾಜಿನ ಕೊಳವೆ, ಹರಳುಗಳನ್ನು ಬಳಸಿದ ವೇಷಬೂಷಣಗಳನ್ನು ತಯಾರಿಸುತ್ತಿದ್ದರು. ಸದ್ಯ ಅದೇ ವೇಷಭೂಷಣಗಳನ್ನು ನಾವು ಮುಂದುವರಿಸಿಕೊಂಡು ಹೊರಟಿದ್ದೇವೆ. ಈಗ ದೊಡ್ಡಾಟ ವೇಷ ಭೂಷಣಗಳ ಪರಿಷ್ಕರಣೆ ಅಗತ್ಯವಿದೆ. ಆದರೆ ದೊಡ್ಡಾಟದ ಬಣ್ಣಗಾರಿಕೆಯಿಂದ ಉಪಜೀವನ ಕಷ್ಟವಾಗಿರುವುದರಿಂದ ಈ ಉದ್ಯೋಗ ಕೈ ಬಿಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಬಿರದ ನಿರ್ದೇಶಕ ವೀರೇಶ ಬಡಿಗೇರ ಮಾತನಾಡಿ, ಚಲನಚಿತ್ರ, ದೂರದರ್ಶನಗಳ ಹಾವಳಿಯಿಂದ ಮೂಲ ದೊಡ್ಡಾಟವನ್ನು ಯುವಕರು ನೋಡಲಾಗದೆ ಪಾಶ್ಚಾತ್ಯ ಕಲೆಗಳಿಗೆ ಮಾರುಹೋಗಿ ಗ್ರಾಮೀಣ ಜಾನಪದ ಕಲೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರಯುವ ಪ್ರಶಸ್ತಿ ಪುರಸ್ಕೃತ ಈಶ್ವರ ಅರಳಿ, ಶಿಬಿರದ ನಿರ್ದೇಶಕ ಬಸವರಾಜ ಶಿಗ್ಗಾಂವ, ರಾಜಶೇಖರ ಮಾಳವಾಡ, ಅಡವಯ್ಯಸ್ವಾಮಿ ಹಿರೇಮಠ, ರಕ್ಷಿತಾ ಬಡಿಗೇರ ಇದ್ದರು. ಮೋಹನ ಪಾಟೀಲ ನಿರೂಪಿಸಿದರು. ಶರಣಪ್ಪ ಅಯ್ಯಣ್ಣನವರ ಸ್ವಾಗತಿಸಿದರು. ಮಾಹಾಂತೇಶ ಮಾಳವಾಡ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

