ದಲಿತರು ಹಿಂದುಳಿಯಲು ಕಾಂಗ್ರೆಸ್ ಕಾರಣ: ಬಂಡಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 7
ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಓಟ್ ಬ್ಯಾಂಕ್ಗಾಗಿ ಬಳಸಿಕೊಂಡ ಕಾಂಗ್ರೆಸ್ ತನ್ನ ಅಧಿಕಾರಾಧಿಯಲ್ಲಿ ದೀನ-ದಲಿತರ ಏಳ್ಗೆ ಮರೆತು, ಜನಪರ ಕಾರ್ಯಗಳನ್ನು ಜಾರಿ ಮಾಡುವಲ್ಲಿ ವಿಫಲವಾಯಿತು. ಪರಿಣಾಮ ರಾಜ್ಯದಲ್ಲಿ ದಲಿತರು, ಹಿಂದುಳಿದವರು, ಕೂಲಿ ಕಾರ್ಮಿಕರು ಮತ್ತಷ್ಟು ಹಿಂದೆ ಉಳಿಯುವಂತಾಯಿತು ಎಂದು ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸ್ಥಳೀಯ ವಾಜಪೇಯಿ ನಗರ, ವಾರ್ಡ್ ನಂ. 2 ಮತ್ತು 3 ಹಾಗೂ ಜಕ್ಕಲಿ ಗ್ರಾಮದ ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಕಾಂಗ್ರೆಸ್ ಸರ್ಕಾರದಿಂದ ಆಗದಂತ ಜನಪರ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸರ್ಕಾರ ಕೇವಲ 5 ವರ್ಷದಲ್ಲಿ ಮಾಡಿ ತೋರಿಸಿದ ತೃಪ್ತಿ ಬಿಜೆಪಿ ಸರ್ಕಾರಕ್ಕಿದ್ದು, ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಜಯಭೇರಿ ಭಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ರೋಣ ತಾಲೂಕಿನಲ್ಲಿ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು. ಜಕ್ಕಲಿ ಗ್ರಾಮದ ಶರಣಪ್ಪ ಜೋಗಿನ, ಯಲ್ಲಪ್ಪ ತಿಲಗಾರ, ರಾಮಣ್ಣ ಚಲವಾದಿ, ದೇವಪ್ಪ ಜೋಗಿನ, ಪಕೀರಪ್ಪ ಹಿರೇಮನಿ, ವೀರಪ್ಪ ತಿಲಗಾರ, ಬಸವರಾಜ ಚಲವಾದಿ, ಗಜೇಂದ್ರಗಡ ವಾಜಪೇಯಿ ನಗರ ನಿವಾಸಿಗಳಾದ ಜಗದೀಶ ಮಡಿವಾಳರ, ಮಹೇಶ ನೆಲ್ಲೂರ, ಗವಿಸಿದ್ದಯ್ಯ ಗೊಂಗಡಶೆಟ್ಟಿಮಠ, ದತ್ತಾತ್ರೇಯ ಶೀಗೆ, ವೀರೇಶ ಬೆಟಗೇರಿ, ಮಾದೇವಪ್ಪ ಹುಣಸಿಕಟ್ಟಿ, ದ್ಯಾಮನಗೌಡ ಗೌಡರ, ವಿಠ್ಠಲ ಮಿಸ್ಕಿನ್, ಕೆ.ಕೆ. ತಾಳಿಕೋಟಿ, ನಾಗಪ್ಪ ರಾಮಜಿ, ಮಹೇಶ ಹೂಗಾರ, ಶಿವು ರಾಮಜಿ, ಶ್ರೀಕಾಂತ ಗೋಸಾವಿ, ಶಿವಾಜಿ ಕಲ್ಗುಡಿ ಮುಂತಾದವರು ಬಿಜೆಪಿ ಸೇರಿದರು. ಭಾಸ್ಕರ ರಾಯಬಾಗಿ, ಪ್ರಭು ಚವಡಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

