ಪವಾಡ ಮಾಡುವವರ ಬಗ್ಗೆ ಎಚ್ಚರವಿರಲಿ: ಜಂಪಣ್ಣನವರ
ಗದಗ: ಪವಾಡಗಳ ಹೆಸರಿನಲ್ಲಿ ಕಪಟ, ಮೋಸ, ಸುಳ್ಳುಗಳನ್ನು ಸೃಷ್ಟಿಸಿ ಜನರನ್ನು ಮೋಸಗೊಳಿಸುವವರ ಬಗ್ಗೆ ಬಹಳ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ಗದಗನ ಕೆಎಸ್‌ಎಸ್ ಕಾಲೇಜಿನ ಶಿಕ್ಷಣಶಾಸ್ತ್ರ ವಿಷಯದ ಸಹಪ್ರಾಧ್ಯಾಪಕ ಪ್ರೊ. ಜೆ.ಸಿ. ಜಂಪಣ್ಣನವರ ಅಭಿಪ್ರಾಯಪಟ್ಟರು.
ಈಚೆಗೆ ಅವರು ಸ್ಥಳೀಯ ಡಯಟ್‌ನಲ್ಲಿ ನಡೆದ ಭೀಮಾಂಬಿಕಾ ಡಿಇಡಿ ಕಾಲೇಜಿನ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಿಶೇಷ ಶಿಬಿರದಲ್ಲಿ ಮಾತನಾಡಿದರು. ಪವಾಡ ಪುರುಷರ ಹಾಗೂ ಅವರು ಕೈಗೊಳ್ಳುವ ಪವಾಡದ ಕುರಿತು ಎಚ್ಚರ ವಹಿಸುವುದು ಅತ್ಯವಶ್ಯಕವಾಗಿದೆ ಎಂದರು. ಪ್ರೊ. ಎಸ್.ಬಿ. ಗಾವರವಾಡ ಜನಪದ ಸಾಹಿತ್ಯ ಮತ್ತು ಗ್ರಾಮೀಣರ ಬದುಕು ಕುರಿತು ಅನೇಕ ಜನಪದಗಳ ಮೂಲಕ ತಿಳಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಸುಭಾಷ ಎಂ. ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ದೇಶಪಾಂಡೆ ವಹಿಸಿದ್ದರು. ಮೇಘಾ ಪಾಂಡೆ ಪ್ರಾರ್ಥಿಸಿದರು. ಗಂಗಮ್ಮ ತಿಮ್ಮನಗೌಡ್ರ ಸ್ಲಾಗತಿಸಿದರು. ಭೀಮವ್ವ ತಳವಾರ ನಿರೂಪಿಸಿದರು. ಅಶ್ವಿನಿ ಮನ್ನಾಪುರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

