ಗದಗ

ಬಿಎಸ್ಸಾರ್ ಕಾಂಗ್ರೆಸ್ ಗೆಲವು ನಿಶ್ಚಿತ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಏ. 13
ರಾಜ್ಯದಲ್ಲಿ ಆಡಳಿತ ನಡೆಸಿರುವ ಬಿಜೆಪಿ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ. ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡದೆ ಸ್ವಜನ ಪಕ್ಷಪಾತದಲ್ಲಿ ಮೇಲುಗೈ ಸಾಧಿಸಿದೆ ಎಂದು ಮಾಜಿ ಶಾಸಕ, ಬಿಎಸ್ಸಾರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ ಅಭಿಪ್ರಾಯ ಪಟ್ಟರು.
ಸಮೀಪದ ಬಾಳೆಹೊಸೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರ, ಬಡವರ, ದೀನ ದಲಿತರ, ನೊಂದವರ ಧ್ವನಿಯಾಗಿರುವ ಬಿ. ಶ್ರೀರಾಮುಲು ಜನಪರ ಕಾಳಜಿಯನ್ನು ರಾಜ್ಯದ ಜನತೆ ಬಲ್ಲರು. ಜನರ ಕಷ್ಟಗಳಿಗೆ ಮರುಗುವ ಗುಣವನ್ನು ಹೊಂದಿರುವ ಶ್ರೀರಾಮುಲು ರಾಜ್ಯವನ್ನು ಮುನ್ನಡೆಸುವ ಶಕ್ತಿಯಾಗಬೇಕು ಎಂಬುದು ನಮ್ಮ ಧ್ಯೇಯ ಎಂದರು. ಪಕ್ಷದ ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ ಮಾತನಾಡಿ, ಶಿರಹಟ್ಟಿ ಮತ ಕ್ಷೇತ್ರ ತೀರಾ ಹಿಂದುಳಿದ ಪ್ರದೇಶ. ಈ ಕ್ಷೇತ್ರವನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಮಾಡಿ ಮಾದರಿಯಾಗಿಸುವ ಕನಸು ಹೊಂದಿರುವೆ. ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಸಣ್ಣೀರಪ್ಪ ಹಳ್ಳೆಪ್ಪನವರ, ಸೋಮಣ್ಣ ಡಾಣಗಲ್, ಅಶೋಕ ಪಲ್ಲೇದ, ಶಿವಾನಂದ ದೇಸಾಯಿ, ಮದನಲಾಲ್ ಬಾಫಣಾ ಹಾಜರಿದ್ದರು. ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರಾದ ಗೋಪಾಲರಾವ್ ಕುಬೇರ, ವಿನಾಯಕ ಶಿರೋಳ, ಮಂಜಪ್ಪ ಹಾವೇರಿ, ಪ್ರಕಾಶ ಗುಳ್ಳಣ್ಣವರ, ಹನುಮಂತ ಬಡ್ನಿ, ಮಲ್ಲೇಶ ಚೆಪ್ಪರಮನಿ, ವಿಜಯ ಕಡೇಮನಿ, ಕರಬಸಪ್ಪ ಅಂಗೂರ, ಶ್ರೀಕಾಂತ ಉದ್ದಣ್ಣವರ, ಗೋವಿಂದಪ್ಪ ಹಂಗನಕಟ್ಟಿ, ಭರಮಪ್ಪ ಚಿಗರಿ, ದುದ್ದುಸಾಬ ಮುಲ್ಲಾನವರ, ಹೊನ್ನಪ್ಪ ಮಕರಬ್ಬಿ, ಮಂಜುನಾಥ ಜಿಂಗಳಿ, ಸುರೇಶ ಜಿಂಗಳಿ, ಪೀರಸಾಬ ನದಾಫ, ಸಣ್ಣಹನುಮಪ್ಪ ತಿರಕಣ್ಣವರ ಬಿಎಸ್ಸಾರ್ ಕಾಂಗ್ರೆಸ್ ಸೇರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.