ಇಂದು ಕಾಂಗ್ರೆಸ್ಸೆತರ ಕಾರ್ಯಕರ್ತರ ಸಭೆ
ಗದಗ: ನಗರದ ಲಾಯನ್ಸ್ ಕ್ಲಬ್ ಸಭಾಭವನದಲ್ಲಿ ಏ.16ರಂದು ಸಂಜೆ 4ಕ್ಕೆ ಕಾಂಗ್ರೆಸ್ಸೆತರ ಮುಖಂಡರ ಸಭೆ ಕರೆಯಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ, ಬಿಜೆಪಿ, ಜೆಡಿಎಸ್. ಬಿಎಸ್ಆರ್ ಹಾಗೂ ಕೆಜೆಪಿಯ ಎಲ್ಲ ಮುಖಂಡರ ಸಭೆಯನ್ನು ಕರೆಯಲಾಗಿದ್ದು ಸಭೆಯಲ್ಲಿ ಎಲ್ಲರೂ ಪಾಲ್ಗೊಂಡು ಗದಗ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮತ ಅಭ್ಯರ್ಥಿ ನಿರ್ಧರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು.
ಅದಕ್ಕಾಗಿ ಎಲ್ಲಾ ಕಾಂಗ್ರೆಸ್ಸೆತರರು ಹಾಗೂ ಅಭಿವೃದ್ಧಿ ಪರ ಚಿಂತಕರು ಪಾಲ್ಗೊಳ್ಳಬೇಕು ಎಂದು ಸಮಾನ ಮನಸ್ಕ ವೇದಿಕೆಯ ಅರವಿಂದ ಹುಲ್ಲೂರ, ಶ್ರೀನಿವಾಸ ಹುಬ್ಬಳ್ಳಿ, ನಾಗಲಿಂಗ ಐಲಿ, ಜಗನ್ನಾಥಸಾ ಭಾಂಡಗೆ, ಮಹೇಶ ಕರಬಿಷ್ಠಿ, ಮಂಜು ಹೇಮಣ್ಣ ಮುಳಗುಂದ, ವಿ.ಕೆ.ಗುರಮಠ, ಪೊಜಾ ಬೇವೂರ, ಸಂತೋಷ ಮೇಲಗೇರಿ ಮುಂತಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಅಂಬೇಡ್ಕರ್ ಸಮಾನತೆಯ ಹರಿಕಾರ
ಗಜೇಂದ್ರಗಡ: ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಪ್ರಜಾಪ್ರಭುತ್ವ ವ್ಯವಸ್ಥೆಯ ಬಾನಂಗಳದಲ್ಲಿ ಮಿನುಗುವ ದ್ರುವತಾರೆ ಎಂದು ಮಾಜಿ ಸಂಸದ ಆರ್.ಎಸ್. ಪಾಟೀಲ ಹೇಳಿದರು.
ಅವರು ಭಾನುವಾರ ಸ್ಥಳೀಯ ಕಾಂಗ್ರೆಸ್ ಜನಸಂಪರ್ಕ ಕಾರ್ಯಾಲಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ 122ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ಬೆಳ್ಳಿ ನಕ್ಷತ್ರದಂತೆ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಡಾ. ಅಂಬೇಡ್ಕರ್ ಅವರು ಸಮಾಜದಲ್ಲಿನ ಅಸ್ಪೃಶ್ಯತೆ, ಅಂಧಕಾರದ ವಿರುದ್ಧ ಹೋರಾಡಿ, ಸಮಾನತೆ ಹಕ್ಕನ್ನು ನೀಡಿದ್ದಾರೆ. ಅವರು ರಚಿಸಿರುವ ಸಂವಿಧಾನ ಮಾದರಿಯನ್ನು ಪ್ರಪಂಚದ ಇತರೆ ದೇಶಗಳು ಅನುಕರಿಸಿವೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಅಸ್ಪೃಶ್ಯರು ಸ್ವಾಭಿಮಾನಿಗಳಾಗಬೇಕು. ಸ್ವ-ಸಾಮರ್ಥ್ಯದಿಂದ ಬದುಕಬೇಕು ಎನ್ನುವ ಉದ್ದೇಶದಿಂದ ಮಾಡಿದ ಹೋರಾಟದ ಫಲವಾಗಿ ಇಂದು ಹಿಂದುಳಿದವರು ಮುಖ್ಯವಾಹಿನಿಗೆ ಬರಲು ಕಾರಣವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸರ್ವರಿಗೂ ಸಮಾನತೆಯ ಹಕ್ಕು ನೀಡುವುದರ ಜತೆಗೆ ನೊಂದವರ ಧ್ವನಿಯಾಗಿ ನಿಸ್ವಾರ್ಥ ಪದಕ್ಕೆ ಅನುಕರಣೆಯಾಗಿ ಬಾಳಿದವರು. ಅಂತವರ ಸಂದೇಶ ಜೀವನದಲ್ಲಿ ಅಳವಡಿಕೊಂಡು ನಡೆದಾಗ ಆಚರಣೆ ಸಾರ್ಥಕಗೊಳ್ಳುತ್ತದೆ ಎಂದರು. ಈ ಸಂದರ್ಭದಲ್ಲಿ ಚಂಬಣ್ಣ ಚವಡಿ, ಮೋಹನಸಾ ರಾಯಬಾಗಿ, ಗಿರೀಶ ರಂಗ್ರೇಜಿ, ಎಫ್.ಎಸ್. ಕರಿದುರಗನವರ, ರವಿಗಡೇದವರ, ಶರಣಪ್ಪ ಕೊಟಗಿ, ಸುರೇಶ ಚವಡಿ, ದತ್ತು ಬಾಕಳೆ, ಸುಭಾನಸಾಬ ಆರಗಿದ್ದಿ, ಶಶಿಧರ ಹೂಗಾರ, ಶ್ರೀಧರ ಚುಂಚಾ, ಫಕೀರಪ್ಪ ನಿಡಗುಂದಿ, ಯಾಸೀನ ಮಾರನಬಸರಿ, ಗನಿಸಾಬ ಮುದಗಲ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

